ಬಳ್ಳಾರಿ: ಎಟಿಎಂ ದೋಚಲು ಬಂದಿದ್ದ ದುಷ್ಕರ್ಮಿಗಳು ಬ್ಯಾಂಕ್​  ಸೆಕ್ಯೂರಿಟಿ ಗಾರ್ಡ್​ನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಭೀಕರ ಘಟನೆ ನಗರದ ಪ್ರತಿಷ್ಠಿತ ಐಸಿಐಸಿಐ ಬ್ಯಾಂಕ್​ನಲ್ಲಿ ನಡೆದಿದೆ.

ಬಸವರಾಜ ಕೊಲೆಯಾದ ವ್ಯಕ್ತಿ. ರಾತ್ರಿ ವೇಳೆ ಎಟಿಎಂ ದೋಚಲು ಆಗಮಿಸಿದ ಎನ್ನಲಾದ ದುಷ್ಕರ್ಮಿಗಳು ಮಲಗಿಕೊಂಡಿದ್ದ ಸಿಬ್ಬಂದಿಗೆ ರಾಡ್ ನಿಂದ ಕೊಚ್ಚಿಕೊಲೆ ಮಾಡಿದ್ದಾರೆ.

ಎಟಿಎಂ ಮತ್ತು ಐಸಿಐಸಿಐ ಬ್ಯಾಂಕ್ ಅಕ್ಕಪಕ್ಕದಲ್ಲಿಯೇ ಇದ್ದು ಬ್ಯಾಂಕ್ ಅಥವಾ ಎಟಿಎಂ ದರೋಡೆಗೆ ಬಂದಿದ್ರೋ ಅಥವಾ ಖಾಸಗಿ ವಿಚಾರವಾಗಿ ಕೊಲೆ ಮಾಡಿದ್ರೋ ಎಂಬ ಸಂಶಯಗಳು ವ್ಯಕ್ತವಾಗಿದೆ.‌ ಹುಬ್ಬಳ್ಳಿ ಮೂಲದ ಮೃತ ಬಸವರಾಜ್​ ಕಳೆದ ಹತ್ತು ತಿಂಗಳ‌ ಹಿಂದೆ ಸೆಕ್ಯೂರಿಟಿ ಕೆಲಸಕ್ಕೆ ಸೇರಿದ್ರು ಎಂಬ ಮಾಹಿತಿ ಲಭ್ಯವಾಗಿದ್ದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ ಅಡಾವತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

News First Live Kannada