ನಾಲ್ಕು ವರ್ಷಗಳ ಬಳಿಕ ವೈಟ್​ಬಾಲ್​ ಕ್ರಿಕೆಟ್​ಗೆ ಮರಳಿದ ಅಶ್ವಿನ್, ತನ್ನ ಹಳೆಯ ಚಾರ್ಮ್​​ ಅನ್ನು ಮುಂದುವರೆಸಿದ್ದಾರೆ. ಜೊತೆಗೆ ಆಯ್ಕೆದಾರರ ಫೇವರಿಟ್​ ಕೂಡ ಆಗಿದ್ದಾರೆ. ನಾಲ್ಕು ವರ್ಷಗಳಿಂದ ತಂಡದಿಂದ ದೂರವಿದ್ದ ಅಶ್ವಿನ್, ಮರಳೋದು ಸುಲಭವಾಗಿರಲಿಲ್ಲ. ಹಾಗಾದ್ರೆ ಸ್ಟ್ರಾಂಗ್​​​​ ಕಮ್​​ಬ್ಯಾಕ್​ ಆಗಿರೋದೇಗೆ.? ಬನ್ನಿ ನೋಡೋಣ..

ಯುವ ಸ್ಪಿನ್ನರ್​​​ಗಳ ಎದುರು ಪುಟಿದೆದ್ದ ಆಫ್​​ಸ್ಪಿನ್ನರ್

2017ರ ಜುಲೈ 9ರಿಂದ 2021ರ ನವೆಂಬರ್​​ 3. ಒಟ್ಟು 4 ವರ್ಷ 4 ತಿಂಗಳು. ಇದು T20 ಕ್ರಿಕೆಟ್​ಗೆ ಆರ್​​​​.ಅಶ್ವಿನ್​​ ಕಮ್ ​ಬ್ಯಾಕ್​ ಮಾಡಿದ ಅಂತರ. ಟೆಸ್ಟ್​ ಕ್ರಿಕೆಟ್​ಗೆ ಸೀಮಿತ ಆಗಿದ್ದ 34 ವರ್ಷದ ಈ ಆಫ್ ​ಸ್ಪಿನ್ನರ್​, ವೈಟ್ ​​ಬಾಲ್​ ಕ್ರಿಕೆಟ್​ಗೆ ಕಮ್​​ಬ್ಯಾಕ್​​​ ಮಾಡೋದೆ ಅನುಮಾನ ಎನ್ನಲಾಗಿತ್ತು. ತಂಡಕ್ಕೆ ಎಂಟ್ರಿ ಕೊಟ್ಟರೂ, ನೆಲೆಯೂರೋದು ಕಷ್ಟ ಎಂಬುದು ಕ್ರಿಕೆಟ್​ ಪಂಡಿತರ ಮಾತಾಗಿತ್ತು. ಇದೀಗ ಮುಟ್ಟಿ ನೋಡಿಕೊಳ್ಳುವಂತೆ ಸ್ಟ್ರಾಂಗ್​​ ಕಮ್​​ಬ್ಯಾಕ್​ ಮಾಡಿದ್ದಾರೆ ಅಶ್ವಿನ್​​.

ಹೌದು..! 4 ವರ್ಷಗಳ ಬಳಿಕ ಅಶ್ವಿನ್​​, ಏಕ್​​​ದಮ್​ ಅವಕಾಶ​ ಪಡೆದುಕೊಂಡಿದ್ದು, ಟಿ20 ವಿಶ್ವಕಪ್​​ಗೆ. ಆ ಬಳಿಕ ನ್ಯೂಜಿಲೆಂಡ್​​ ಟಿ20 ಸರಣಿಗೆ ಆಯ್ಕೆ. ಈ ಸರಣಿಯಲ್ಲಿ ಬೌಲಿಂಗ್​ ಮಾಡಿರುವ ಅಶ್ವಿನ್​, 6ಕ್ಕಿಂತಲೂ ಕಡಿಮೆ ಎಕಾನಮಿ ಸ್ಪೆಲ್​ ಮಾಡಿದ್ದಾರೆ. ಅಷ್ಟೆ ಅಲ್ಲ, ಟಿ20 ವಿಶ್ವಕಪ್​​​ನಲ್ಲೂ ಇದೇ ರೀತಿ ಬೌಲಿಂಗ್​ ಪ್ರದರ್ಶಿಸಿದ್ದಲ್ಲದೆ, 3ಪಂದ್ಯಗಳಲ್ಲಿ​ 6 ವಿಕೆಟ್​ ಕಬಳಿಸಿ ಗಮನ ಸೆಳೆದಿದ್ರು. ಅದಕ್ಕೂ ಮುನ್ನ ನಡೆದ ಅಭ್ಯಾಸ ಪಂದ್ಯಗಳಲ್ಲೂ ಅಶ್ವಿನ್ ಶೈನ್​ ಆಗಿದ್ರು.

ತಂಡದಿಂದ ದೂರವಿಟ್ಟರೂ ಅಶ್ವಿನ್​​​ ಕಮ್​​ಬ್ಯಾಕ್​​ಗೆ ಕಾರಣವೇನು..?
T20 ವಿಶ್ವಕಪ್, ನ್ಯೂಜಿಲೆಂಡ್​ ಸರಣಿಯಲ್ಲಿ ತನ್ನ ಹಳೆಯ ಚಾರ್ಮ್​​ ಮುಂದುವರಿಸಿ ಅಖಾಡಕ್ಕೆ ಧುಮುಕಿರುವ ಅಶ್ವಿನ್​, ಈಗ ಯುವ​​​ ಸ್ಪಿನ್ನರ್​​​ಗಳಿಗೆ ಕಾಂಪಿಟೇಟರ್. 2017ರ ನಂತರ ಅಶ್ವಿನ್​​ರನ್ನ ವೈಟ್​​ಬಾಲ್​ ಕ್ರಿಕೆಟ್​​ನಿಂದ ದೂರವಿಡಲಾಗಿತ್ತು. 4 ವರ್ಷಗಳ ಬಳಿಕ ಕಣಕ್ಕಿಳಿದ ಅಶ್ವಿನ್​​ಗೆ ಈ ಫಾರ್ಮೆಟ್​​ಗೆ ಮರಳೋದು ಸುಲಭದ ಹಾದಿಯಾಗಿರಲಿಲ್ಲ. ತಂಡದಲ್ಲಿನ ಪೈಪೋಟಿ ಕೂಡ ಅಶ್ವಿನ್​ಗೆ ಮುಳುವಾಗಿತ್ತು. ಆದರೆ, ಈತನಲ್ಲಿದ್ದ ಛಲ, ಬೆಟ್ಟದಷ್ಟಿದ್ದ ಆತ್ಮವಿಶ್ವಾಸ, ವಿಕೆಟ್​ ಕಬಳಿಸುವ ಹಸಿವು ತಂಡಕ್ಕೆ ಮರಳುವಂತೆ ಮಾಡಿದೆ.

ಯಂಗ್​​​ ಸ್ಪಿನ್ನರ್​​​ಗಳಿಗೆ ಫೈಟ್​ ನೀಡಿ ಪುಟಿದೆದ್ದ ಅಶ್ವಿನ್​.!
ಯೆಸ್​​​.! ಟೀಮ್​ ಇಂಡಿಯಾ ಸ್ಪಿನ್ನರ್​​ಗಳಿಗೆ ಕಾಂಪಿಟೇಷನ್​ ಹೆಚ್ಚಾಗಿದೆ. ಚಹಲ್​, ವರುಣ್ ಚಕ್ರವರ್ತಿ, ಅಕ್ಷರ್ ಪಟೇಲ್​​​, ರವೀಂದ್ರ ಜಡೇಜಾ, ರಾಹುಲ್​ ಚಹರ್, ವಾಷಿಂಗ್ಟನ್​ ಸುಂದರ್ ಹೀಗೆ ಹಲವರ ನಡುವೆ ತಂಡದಲ್ಲಿ ಸ್ಥಾನ ಪಡೆಯೋದಕ್ಕಾಗಿ​ ಫೈಟ್​ ನಡೀತಿದೆ. ಆದರೆ ತನ್ನ ಅದ್ಭುತ ಬೌಲಿಂಗ್​ ಮೂಲಕ ಈ ಎಲ್ಲರಿಗೂ ಸೆಡ್ಡು ಹೊಡೆದು ತಂಡಕ್ಕೆ ಅಶ್ವಿನ್​ ಮರಳಿರೋದು ಎಲ್ಲರನ್ನೂ ಬೆಕ್ಕಸ ಬೆರಗಾಗುವಂತೆ ಮಾಡಿದೆ. ತಾನೇನು ಅಂತ ಪ್ರೂವ್​ ಮಾಡಿರುವ ಅಶ್ವಿನ್, ತಾನೊಬ್ಬ ಫೈಟರ್ ಅಂತ ತೋರಿಸಿಕೊಟ್ಟಿದ್ದಾರೆ.

ಮುಂದಿನ ಟಿ20 ವಿಶ್ವಕಪ್​​ಗೂ ಸ್ಥಾನ ಭದ್ರಪಡಿಸಿದ ಅಶ್ವಿನ್​..!
ಮುಂದಿನ ಟಿ20 ವಿಶ್ವಕಪ್​​​​ ಆರಂಭಕ್ಕೆ ಒಂದು ವರ್ಷ ಕೂಡ ಇಲ್ಲ. ಟೀಮ್​ ಮ್ಯಾನೇಜ್​​ಮೆಂಟ್​ ಟೂರ್ನಿಗಾಗಿ ತಯಾರಿ ಕೂಡ ಮಾಡಿಕೊಳ್ತಿದೆ. ಹಾಗೇ ಆಟಗಾರರ ಸಾಮರ್ಥ್ಯದ ಪರೀಕ್ಷೆಯನ್ನ ರಹಸ್ಯವಾಗೇ ನಡೆಸ್ತಿದೆ. ಆದರೆ, ಅಶ್ವಿನ್​ ಈಗಾಗಲೇ ಈ ಅಗ್ನಿ ಪರೀಕ್ಷೆಯಲ್ಲಿ ಅಶ್ವಿನ್​ ಪಾಸಾಗಿದ್ದು, ಆಸ್ಟ್ರೇಲಿಯಾ ನೆಲದಲ್ಲಿ ನಡೆಯುವ ಟಿ20 ವಿಶ್ವಕಪ್​​​​​ಗೆ ಈಗಾಗಲೇ ಸ್ಥಾನ ಭದ್ರಪಡಿಸಿದ್ದಾರೆ. ಒಟ್ನಲ್ಲಿ ಶಾರ್ಟರ್​ ಫಾರ್ಮೆಟ್​​​ನಲ್ಲಿ ಸಿಡಿಯುತ್ತಿರುವ ಅಶ್ವಿನ್​, ಮುಂದೆಯೂ ಮಿಂಚಲಿ ಅನ್ನೋದೇ ನಮ್ಮೆಲ್ಲರ ಆಶಯ.

The post ಟೀಕಾಕಾರರಿಗೆ ಬಾಯಿ ಮುಚ್ಚಿಸಿದ ಅಶ್ವಿನ್; ಸ್ಟ್ರಾಂಗ್​ ಕಮ್​​ಬ್ಯಾಕ್ ಹಿಂದಿನ ಗುಟ್ಟೇನು? appeared first on News First Kannada.

News First Live Kannada