ಡಾ.ರಾಜ್‌ ಕುಮಾರ್‌.. ಅಭಿಮಾನಿಗಳನ್ನೇ ದೇವ್ರು ಅಂತ ಕರೆದ ಕನ್ನಡದ ಮಾಣಿಕ್ಯ. ಅವ್ರ ಜನಪ್ರಿಯತೆ ಭಾರತದಾದ್ಯಂತ ಎಷ್ಟಿತ್ತು ಅಂದ್ರೆ ದೆಹಲಿ ರಾಜಕೀಯ ದೊರೆಗಳು, ದೊಡ್ಮನೆಯ ಕದ ತಟ್ಟುವಂತೆ ಮಾಡಿತ್ತು. ಇಂದಿರಾಗಾಂಧಿಯ ಕಾಲದಿಂದಲೂ ಹಲವು ಪ್ರಭಾವಿ ರಾಜಕೀಯ ನಾಯಕರು, ಡಾ.ರಾಜ್​ಕುಮಾರ್​ ಮನೆ ಬಾಗಿಲು ಬಡಿದಿದ್ರು. ಆದ್ರೆ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ರಾಜ್​ ಪುತ್ರರು ರಾಜಕೀಯದ ಕಡೆ ಮುಖ ಹಾಕಲೇ ಇಲ್ಲ. ಡಾ.ರಾಜ್​ ಹಾಕಿಕೊಟ್ಟ ಹಾದಿಯಲ್ಲೇ ಪ್ರತಿ ಹೆಜ್ಜೆಯನ್ನ ಇಟ್ಟವರು ಅಪ್ಪು.

ಪ್ರಧಾನಿ ಮೋದಿ ಅವರೇ ಪುನೀತ್ ರಾಜ್​​ಕುಮಾರ್ ಅವರನ್ನು ಭೇಟಿ ಮಾಡಿದ್ದ ಸಂದರ್ಭದಲ್ಲಿ ರಾಜಕೀಯಕ್ಕೆ ಆಹ್ವಾನ ನೀಡಲಾಗಿತ್ತು ಎಂಬ ಚರ್ಚೆ ಸದ್ಯ ಜೋರಾಗಿದೆ. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ನಿರ್ಮಾಪಕ ಎಸ್​​ವಿ ಬಾಬು ಅವರು, ವಿಧಾನಸಭಾ ಚುನಾವಣೆಯ ವೇಳೆ ರಾಜ್ಯದಲ್ಲಿ ಬಿಜೆಪಿ ಪಕ್ಷಕ್ಕೆ ಹಿನ್ನಡೆ ಆಗಲಿದೆ ಎಂಬ ಕಾರಣ ಪಕ್ಷ ವರ್ಚಸ್ಸನ್ನು ಹೆಚ್ಚಿಸಲು ಏನು ಮಾಡಬೇಕು ಎಂದು ನಾವು ಕೆಲ ನಾಯಕರು ಚರ್ಚೆ ನಡೆಸಿದ್ದರು. ಈ ಸಂದರ್ಭದಲ್ಲಿ ದೊಡ್ಮೆನೆಯಿಂದ ಯಾರಾದರೂ ಪಕ್ಷಕ್ಕೆ ಬಂದರೇ ನೀವು ಊಹೆ ಮಾಡಿಕೊಳ್ಳಲು ಆಗದಷ್ಟು ಬೆಂಬಲ ಸಿಗುತ್ತೆ. ಆದರೆ ಅವರು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರಲ್ಲ ಅಂದೇ. ಆ ಬಳಿಕ ಚರ್ಚೆ ನಡೆಸಿ ಸೌಜನ್ಯದ ಭೇಟಿಗಾಗಿ ಪುನೀತ್ ಮನೆಗೆ ಭೇಟಿ ನೀಡಿದ್ದೆವು. ಈ ವೇಳೆ ಮಹಾರಾಷ್ಟ್ರ ಚಿಫ್​ ವಿಪ್​ ಆಗಿರೋ ಆಶೀರ್ ಶಲ್ಲರ್ ಅವರು ಪರೋಕ್ಷವಾಗಿ ಪಕ್ಷಕ್ಕೆ ಆಹ್ವಾನ ನೀಡಿದ್ದರು. ಈ ವೇಳೆ ಆಂಧ್ರ ಪ್ರದೇಶದ ಪಿಬಿಎಸ್​ ಶರ್ಮಾ ಕೂಡ ಇದ್ದರು. ಅಪ್ಪು ಅವರ ಭೇಟಿಗೆ ಮ್ಯಾನೇಜರ್ ಸಹಾಯ ಮಾಡಿದ್ದರು.

ಇದನ್ನೂ ಓದಿ: ಪುನೀತ್​ಗೆ ನಾನು, ಸಿದ್ದರಾಮಯ್ಯ ಇಬ್ಬರೂ ಗಾಳ ಹಾಕಿದ್ವಿ.. ಅಪ್ಪು ನೆನೆದು ಕಣ್ಣೀರಿಟ್ಟ ಡಿಕೆಎಸ್​

ಆದರೆ ಶಲ್ಲರ್ ಅವರ ಮಾತಿನ ಬೆನ್ನಲ್ಲೇ ನಗುವಿನಲ್ಲೇ ಕುಳಿತ ಸ್ಥಳದಿಂದ ಎದ್ದ ಅಪ್ಪು, ಟೀ ತರಲು ಹೇಳುತ್ತೇನೆ ಎಂದು ಒಳಗೆ ಹೋದರು. ಆಗ ನಾನು ಅಪ್ಪು ಅವರನ್ನು ಕರೆಯೋದು ಬೇಡ ನನ್ನನ್ನು ತಪ್ಪು ತಿಳಿದುಕೊಳ್ಳುತ್ತಾರೆ ಅಂತ ಬೇಡ ಎಂದೇ. ಆಗ ಹೋಗಲಿ ಮೋದಿ ಅವರನ್ನು ಭೇಟಿ ಮಾಡಲು ಹೇಳೋಣ ಅಂತ ಮಾತನಾಡಿಕೊಂಡು ಅಪ್ಪು ಬಂದ ಮೇಲೆ ತಿಳಿಸಿದ್ದೆವು. ಮೋದಿ ಅವರನ್ನು ಭೇಟಿ ಮಾಡೋ ಬಗ್ಗೆ ಹೇಳಿದ್ರು, 10 ನಿಮಿಷ ಸಮಯ ತೆಗೆದುಕೊಂಡರು. ಅಶ್ವಿನಿ ಮೇಡಂ ಅವರು ಇಷ್ಟ ಪಟ್ಟಿದ್ದರು. ಆ ಬಳಿಕ ಪ್ರಧಾನಿಗಳ ಭೇಟಿಗೆ ಸಮಯ ನಿಗದಿ ಆಯ್ತು. ಮೋದಿ ಅವರು ಪ್ರಚಾರಕ್ಕಾಗಿ ದಾವಣಗೆರೆಗೆ ಆಗಮಿಸುವವರಿದ್ದರು. ಆಗ ಪುನೀತ್ ಅವರು ಭೇಟಿ ಮಾಡಲು ಸಮಯ ನಿಗದಿ ಮಾಡಲಾಯಿತು. ಆದರೆ ಅವತ್ತು ಮೋದಿಯನ್ನು ಭೇಟಿ ಮಾಡಲು ತೆರಳಿದ ವೇಳೆ ನಮ್ಮನ್ನು ದೂರ ಎಲ್ಲೋ ನಿಲ್ಲಿಸಿ ಅಶ್ವಿನಿ ಮೇಡಂ ಹಾಗೂ ಪುನೀತ್ ಅವರನ್ನು ಮಾತ್ರ ಮೋದಿ ಬಳಿಗೆ ಕರೆದುಕೊಂಡು ಹೋದರು. ಆಗ ಮೋದಿ ಹಾಗೂ ಪುನೀತ್ ಸರ್ ನಡುವೆ ಏನೂ ಮಾತುಕತೆ ಆಯ್ತು ಅನ್ನೋದು ಅವರಿಬ್ಬರಿಗೆ ಮಾತ್ರ ಗೊತ್ತು ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ರಾಜಕೀಯದಿಂದ ದೂರ.. ರೈತರಿಗಾಗಿ ಹಣ ಪಡೆಯದೆ ಜಾಹೀರಾತು ಕೊಟ್ಟ ‘ದೊಡ್ಮನೆ ಹುಡುಗ’

The post ಅಣ್ಣವ್ರ ಹಾದಿಯಲ್ಲೇ ಪುನೀತ್​.. ಸ್ವತಃ ಮೋದಿಯೇ ಬಿಜೆಪಿಗೆ ಕರೆದ್ರು ಏನು ಹೇಳಿದ್ರು ಪವರ್​ ಸ್ಟಾರ್​​..? appeared first on News First Kannada.

News First Live Kannada