ಕೆಲ ದಿನಗಳ ಹಿಂದೆ ‘ಥ್ರಿಬಲ್​ ಆರ್’ ಸಿನಿಮಾದ ನಾಟು ನಾಟು ಹಾಡು ರಿಲಿಸ್​ ಆಗಿ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಸೌಂಡ್​ ಮಾಡಿತ್ತು. ರಾಮ್​ಚರಣ್ ಮತ್ತು ಜ್ಯೂ.ಎನ್​ಟಿಆರ್ ಮಾಡಿದ್ದ ಸೂಪರ್​ ಹುಕ್​ ಸ್ಟೆಪ್​ಗೆ ಫ್ಯಾನ್ಸ್​ ಫಿದಾ ಆಗಿದ್ದಲ್ಲದೆ ಫೇಸ್​ಬುಕ್​, ಇನ್ ಸ್ಟಾಗ್ರಾಂ ರೀಲ್ಸ್​ನಲ್ಲಿ, ರಾಮ್​ಚರಣ್ ಮತ್ತು ಜ್ಯೂ.ಎನ್​ಟಿಆರ್ ರಂತೆಯೇ ಕುಣಿದು ಕುಪ್ಪಳಿಸಿದ್ರು.

ಆದರೆ ಆ ಡ್ಯಾನ್ಸ್​ ಬಗ್ಗೆ ಜ್ಯೂ.ಎನ್​ಟಿಆರ್ ಕೆಲವು ಇಂಟರೆಸ್ಟಿಂಗ್​ ವಿಚಾರವನ್ನು ಶೇರ್​ ಮಾಡಿಕೊಂಡಿದ್ದಾರೆ. ನಾನು ಮತ್ತು ರಾಮ್​ ಆ ಸ್ಟೆಪ್​ನ್ನು ಹಾಕಲು 15 ರಿಂದ 18 ಟೇಕ್​ಗಳನ್ನು ತೆಗೆದುಕೊಂಡಿದ್ದೆವು. ಎಷ್ಟು ಪ್ರಯತ್ನ ಮಾಡಿದರು ನಾನು ಮತ್ತು ರಾಮ್ ಮಿಸ್​ ಮಾಡುತ್ತಿದ್ದೆವು. ಆಗ ರಾಜಮೌಳಿ ನಾವು ಮಾಡುವ ಡ್ಯಾನ್ಸ್​ ವೀಡಿಯೋವನ್ನು ತೋರಿಸಿ ಮತ್ತಷ್ಟು ಪರ್ಪೆಕ್ಟ್​ ಆಗಿ ಮಾಡಲು ಹೇಳಿತ್ತಿದ್ದರು.

ಆಗ ನಾನು ಯಾಕೆ ಇಷ್ಟು ಸೀರಿಯಸ್​ ತಗೊಂಡಿದ್ದಾರೆ ಅಂದುಕೊಂಡಿದ್ದೆ. ಆದರೆ ಸಾಂಗ್​ ರಿಲೀಸ್ ಆದ ಮೇಲೆ ರಾಜಮೌಳಿಯವರ ಇನ್ವಾಲ್​ಮೆಂಟ್​ ನನಗೆ ಅರ್ಥವಾಯಿತು. ಅದಕ್ಕೆ ಅವರು ಭಾರತದ ಟಾಪ್​ ನಿರ್ದೇಶಕರಾಗಿದ್ದಾರೆ ಎಂದು ರಾಜಮೌಳಿಯನ್ನು ಹೊಗಳುವುದರ ಜೊತೆಗೆ ನಾಟು ಸಾಂಗ್​ನ ಸ್ಟೆಪ್​ ಸೀಕ್ರೆಟ್​ನ್ನು ಬಿಚ್ಚಿಟ್ಟಿದ್ದಾರೆ. ಥ್ರಿಬಲ್​ ಆರ್​ ಸಿನಿಮಾ 2022 ರ ಜನವರಿ -7 ನೇ ತಾರೀಖು ವಿಶ್ವಾದ್ಯಂತ ರಿಲೀಸ್ ಆಗಲಿದೆ.

News First Live Kannada