ಬೆಂಗಳೂರು: ನಗರದ ಎಚ್.ಎಸ್.ಆರ್ ಲೇಔಟ್, ಆರ್.ಟಿ.ನಗರ, ವಿಜಯನಗರ, ಬನಶಂಕರಿ ಬಿಡಿಎ ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆಸಿದೆ.

ಬೆಂಗಳೂರಿನ ಬಿಡಿಎ ಕಚೇರಿ ಮೇಲೆ ದಾಳಿ ಆಗ್ತಿದ್ದಂತೆ ಮೂವತ್ತಕ್ಕೂ ಹೆಚ್ಚು ದೂರು ಬಂದ ಹಿನ್ನೆಲೆ ಎಸಿಬಿ ಎಸ್.ಪಿ ಅಬ್ದುಲ್ ಅಹಾದ್ ನೇತೃತ್ವದಲ್ಲಿ ಇಂದು ದಿಢೀರ್ ದಾಳಿ ನಡೆಸಲಾಗಿದೆ. ಹೆಚ್​ಎಸ್​ಆರ್​ ಲೇ ಔಟ್, ವಿಜಯನಗರ, ಆರ್ ಟಿ ನಗರ, ಬನಶಂಕರಿ ಬಿಡಿಎ ಕಚೇರಿ ವಿರುದ್ಧ ಎಸಿಬಿ ಗೆ ಸಾಲು ಸಾಲು ದೂರುಗಳು ಬಂದಿವೆ ಎನ್ನಲಾಗಿದೆ. ಬಿಡಿಎ ಕಚೇರಿ ಮೇಲೆ ದಾಳಿ ಬಳಿಕ ಬಂದ 30 ದೂರುಗಳ ಪೈಕಿ 20 ದೂರುಗಳು ಈ ನಾಲ್ಕು ಬಿಡಿಎ ಕಚೇರಿಗಳದ್ದೇ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ.

ದೂರುದಾರರ ಬಳಿಯೇ ಮಾಹಿತಿ ಹಾಗೂ ದಾಖಲೆಗಳನ್ನು ಕಲೆಹಾಕಿದ್ದ ಎಸಿಬಿ ದಾಖಲೆಗಳ ಪರಿಶೀಲನೆ ಬಳಿಕ ಇಂದು ಮುಂಜಾನೆ ಸಭೆ ನಡೆಸಿದೆ.. ಬಳಿಕ ಸರ್ಚ್ ವಾರೆಂಟ್ ಪಡೆದು ನಾಲ್ಕು ವಿಶೇಷ ತಂಡಗಳೊಂದಿಗೆ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಸದ್ಯ ಕಚೇರಿ ಸಿಬ್ಬಂದಿಯ ಮೊಬೈಲ್​ ವಶಕ್ಕೆ ಪಡೆದಿರೋ ಅಧಿಕಾರಿಗಳು ತಪಾಸಣೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ;ಬಿಡಿಎ ಕಚೇರಿ ಮೇಲೆ ಎಸಿಬಿ ದಾಳಿ; ಪತ್ತೆಯಾಯ್ತು ಕೋಟಿ ಕೋಟಿ ಅಕ್ರಮ; ದಾಖಲೆಗಳು ಸೀಜ್​​

News First Live Kannada