ಲೈಮ್ ಸ್ಟೋನ್ ಗಣಿಗಾರಿಕೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡ ಮೈ ಹೋಮ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್​

ಪ್ರಾತಿನಿಧಿಕ ಚಿತ್ರ

ದೆಹಲಿ: ಲೈಮ್ ಸ್ಟೋನ್ ಗಣಿಗಾರಿಕೆಯಲ್ಲಿ ತೆಲಂಗಾಣ ಮೂಲದ ಮೈ ಹೋಮ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್​ಗೆ 5 ಸ್ಟಾರ್ ರೇಟಿಂಗ್ ಲಭಿಸಿದೆ. ಮೈ ಹೋಮ್‌ನ ಎರಡು ಗಣಿಗಳಿಗೆ 5 ಸ್ಟಾರ್ ರೇಟಿಂಗ್ ಲಭ್ಯವಾಗಿದೆ. ಗಣಿ ಮತ್ತು ಖನಿಜ ಸಂಪನ್ಮೂಲ ಮೇಲಿನ 5ನೇ ರಾಷ್ಟ್ರೀಯ ಸಮಾವೇಶ ದೆಹಲಿಯ ಅಶೋಕ ಹೋಟೆಲ್‌ನಲ್ಲಿ ಇಂದು (ನವೆಂಬರ್ 23) ನಡೆದಿದೆ. ಸಮಾವೇಶದಲ್ಲಿ ಗಣಿ, ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಭಾಗಿ ಆಗಿದ್ದಾರೆ. 5 ಸ್ಟಾರ್ ರೇಟಿಂಗ್ ಹೊಂದಿದ ಗಣಿ ಕಂಪನಿಗಳಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಲ್ಹಾದ್ ಜೋಶಿ ಭಾಗವಹಿಸಿದ್ದಾರೆ.

2019-20 ನೇ ಸಾಲಿನಲ್ಲಿ ಮೆಲ್ಲಚೆರುವು ಲೈಮ್ ಸ್ಟೋನ್ ಗಣಿಗೆ 5 ಸ್ಟಾರ್ ರೇಟಿಂಗ್ ನೀಡಲಾಗಿದೆ. 2018-19ನೇ‌ ಸಾಲಿನಲ್ಲಿ ಯೆಪಲಮಧರಮ್ ಲೈಮ್ ಸ್ಟೋನ್ ಕಂಪನಿಗೆ 5 ಸ್ಟಾರ್ ಲಭಿಸಿದೆ. ಅಲ್ಲದೆ, 2018-19ನೇ ಸಾಲಿನಲ್ಲಿ 52 ಗಣಿಗಳಿಗೆ 5 ಸ್ಟಾರ್ ರೇಟಿಂಗ್ ನೀಡಲಾಗಿದೆ. 2019-20ನೇ ಸಾಲಿನಲ್ಲಿ 40 ಗಣಿಗಳಿಗೆ 5 ಸ್ಟಾರ್ ರೇಟಿಂಗ್ ನೀಡಲಾಗಿದೆ. ಲೈಮ್ ಸ್ಟೋನ್ ಗಣಿಗಾರಿಕೆಯಲ್ಲಿ 5 ಸ್ಟಾರ್ ರೇಟಿಂಗ್ ಕೊಡಲಾಗಿದೆ.

ಗಣಿಗಳಿಗೆ 5 ಸ್ಟಾರ್ ರೇಟಿಂಗ್ ನೀಡಲು ಮಾನದಂಡಗಳು ಹೀಗಿವೆ. ವೈಜ್ಞಾನಿಕ ಹಾಗೂ ವ್ಯವಸ್ಥಿತವಾಗಿ ಗಣಿಗಾರಿಕೆ ನಡೆಸುವುದು. ಸ್ಥಳೀಯವಾಗಿ ಪುನರ್ವಸತಿ ಮತ್ತು ಮರುಸ್ಥಾಪನೆ ಮಾಡುವುದು. ಅಚ್ಚುಕಟ್ಟು ಗಣಿಗಾರಿಕೆ, ಹಸಿರು ವಾತಾವರಣ ನಿರ್ಮಾಣ ಮಾಡುವುದು. ಗಣಿಗಾರಿಕಾ ಕಂಪನಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದು. ಅಂತಾರಾಷ್ಟ್ರೀಯ ಗುಣಮಟ್ಟ ಕಾಯ್ದುಕೊಳ್ಳುವುದು. ಬಾಕ್ಸೈಟ್, ಕಾಪರ್, ಐರನ್, ಮ್ಯಾಂಗನೀಸ್, ಜಿಂಕ್, ಲೈಮ್ ಸ್ಟೋನ್ ಗಣಿಗಾರಿಕೆ ವಿಂಗಡಣೆ ಮಾಡಿ ಪ್ರಶಸ್ತಿ ಕೊಡಲಾಗಿದೆ. ಗಣಿಗಾರಿಕೆ ಕಂಪನಿ ವಿಂಗಡಿಸಿ 5 ಸ್ಟಾರ್ ಗೌರವ ಪ್ರದಾನ ಮಾಡಲಾಗಿದೆ.

My home Lime Stone Mine

ಇದನ್ನೂ ಓದಿ: ಟಿವಿ9 ಕನ್ನಡ ಪ್ರಸ್ತುತಿಯಲ್ಲಿ ರಿಯಲ್ ಎಸ್ಟೇಟ್ ಎಕ್ಸ್​ಪೋ 2021 “ಸ್ವೀಟ್​ ಹೋಮ್” ನ.19ರಿಂದ 21ರ ತನಕ

ಇದನ್ನೂ ಓದಿ: ಕಲ್ಲಿದ್ದಲು ಗಣಿಗಾರಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ, ಕರ್ನಾಟಕದಲ್ಲಿ ವಿದ್ಯುತ್ ಅಭಾವವಿಲ್ಲ; ಸಿಎಂ ಬಸವರಾಜ ಬೊಮ್ಮಾಯಿ

TV9 Kannada