Bengaluru News: ಬಿಡಿಎ ಮುಖ್ಯ ಕಚೇರಿ ಸೇರಿ ಒಟ್ಟು 5 ಕಡೆ ಎಸಿಬಿ ದಾಳಿ

ಸಾಂಕೇತಿಕ ಚಿತ್ರ

ಬೆಂಗಳೂರು: ಇಲ್ಲಿನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (Bengaluru Development Authority BDA) ಮುಖ್ಯ ಕಚೇರಿ ಸೇರಿ ಒಟ್ಟು 5 ಕಡೆ ಎಸಿಬಿ (ACB) ಇಂದು (ನವೆಂಬರ್ 23) ದಾಳಿ ನಡೆಸಿದೆ. ಬಿಡಿಎ ಕಚೇರಿಗೆ ಮಾತ್ರವಲ್ಲದೆ ಇತರ ನಾಲ್ಕು ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಬಿಡಿಎ ಕಚೇರಿಯಲ್ಲಿ ಎಸಿಬಿ ಪರಿಶೀಲನೆ ಮುಂದುವರಿದಿದೆ. ಬೆಂಗಳೂರಿನ ಹೆಚ್ಎಸ್‌ಆರ್ ಲೇಔಟ್‌ನಲ್ಲಿರುವ ಕಚೇರಿಯಲ್ಲಿ ಎಸಿಬಿ ಡಿವೈಎಸ್‌ಪಿ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ.

ಇದನ್ನೂ ಓದಿ: ಬಿಡಿಎ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ದಾಳಿ: 75 ಕೋಟಿ ಮೌಲ್ಯದ 6 ನಿವೇಶನಗಳ ನಕಲಿ ದಾಖಲೆ ಪತ್ತೆ

TV9 Kannada