ಪ್ರವಾಸೋದ್ಯಮ ಉತ್ತೇಜನಕ್ಕೆ ಭಾರತ್ ಗೌರವ್ ರೈಲುಗಳನ್ನು ಆರಂಭಿಸಿದ ಭಾರತೀಯ ರೈಲ್ವೆ

ಅಶ್ವಿನಿ ವೈಷ್ಣವ್

ದೆಹಲಿ: ಭಾರತ್ ಗೌರವ್ (Bharat Gaurav) ಎಂಬ ಹೊಸ ಯೋಜನೆಯಡಿಯಲ್ಲಿ ಮಾರ್ಗಗಳು, ದರಗಳು ಮತ್ತು ಸೇವೆಗಳ ಗುಣಮಟ್ಟವನ್ನು ನಿರ್ಧರಿಸುವ ಸ್ವಾತಂತ್ರ್ಯದೊಂದಿಗೆ ಖಾಸಗಿ ಟೂರ್ ಆಪರೇಟರ್‌ಗಳು ಈಗ ರೈಲ್ವೇಯಿಂದ ಬಾಡಿಗೆಗೆ ರೈಲುಗಳನ್ನು ತೆಗೆದುಕೊಳ್ಳಬಹುದು ಮತ್ತು ಅವುಗಳನ್ನು ತಮ್ಮ ಆಯ್ಕೆಯ ಯಾವುದೇ ಸರ್ಕ್ಯೂಟ್‌ನಲ್ಲಿ ಓಡಿಸಬಹುದಾಗಿದೆ. ರೈಲ್ವೆಯು ಈ ಉದ್ದೇಶಕ್ಕಾಗಿ 3,033 ಐಸಿಎಫ್ (ICF)  ಕೋಚ್‌ಗಳನ್ನು ಮೀಸಲಿಟ್ಟಿದೆ ಅಂದರೆ ಸರಿಸುಮಾರು 150 ರೈಲುಗಳು. ಸೊಸೈಟಿ, ಟ್ರಸ್ಟ್‌ಗಳು, ಒಕ್ಕೂಟಗಳು ಮತ್ತು ರಾಜ್ಯ ಸರ್ಕಾರಗಳಿಂದಲೂ ಯಾರಾದರೂ ಈ ರೈಲುಗಳನ್ನು ತೆಗೆದುಕೊಳ್ಳಲು ಮತ್ತು ಥೀಮ್‌ನ ಆಧಾರದ ಮೇಲೆ ವಿಶೇಷ ಪ್ರವಾಸೋದ್ಯಮ ಸರ್ಕ್ಯೂಟ್‌ಗಳಲ್ಲಿ ಓಡಿಸಲು ಅರ್ಜಿ ಸಲ್ಲಿಸಬಹುದು. ಥೀಮ್ ಆಧಾರಿತ ಪ್ರವಾಸೋದ್ಯಮ ಅಂದರೆ ಗುರು ನಾನಕ್‌ಗೆ ಸಂಬಂಧಿಸಿದ ಎಲ್ಲಾ ಸ್ಥಳಗಳಿಗೆ ಹೋಗುವ ಗುರುಕೃಪಾ ಅಥವಾ ಭಗವಾನ್ ರಾಮನಿಗೆ ಸಂಬಂಧಿಸಿದ ಸ್ಥಳಗಳನ್ನು ಸ್ಪರ್ಶಿಸಲು ರಾಮಾಯಣ ವಿಷಯದ ರೈಲು ಎಂದು ರೈಲ್ವೇಸ್ ಹೇಳಿಕೆಯಲ್ಲಿ ತಿಳಿಸಿದೆ. ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಮಂಗಳವಾರ ಈ ಹೊಸ ಯೋಜನೆಗೆ ಚಾಲನೆ ನೀಡಿದ್ದು ಭಾರತೀಯ ರೈಲ್ವೇಯಲ್ಲಿ ಇದು ಹೊಸ ವಿಭಾಗವಾಗಿದೆ ಎಂದು ಹೇಳಿದರು.

ಈ ಎಲ್ಲಾ ಸಮಯದಲ್ಲಿ ನಾವು ಸರಕು ಮತ್ತು ಪ್ರಯಾಣಿಕರ ವಿಭಾಗಗಳನ್ನು ಹೊಂದಿದ್ದೇವೆ. ಭಾರತ್ ಗೌರವ್ ರೈಲು ಸೇವೆಗಳಲ್ಲಿ ಮತ್ತೊಂದು ಹೊಸ ವಿಭಾಗವಾಗಲಿದೆ ಎಂದು ಅವರು ಹೇಳಿದರು. “ನಮ್ಮ ದೇಶವು ಅಂತಹ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ. ಈ ರೈಲುಗಳು ಪ್ರವಾಸಿಗರನ್ನು ಸಾಂಸ್ಕೃತಿಕ ಪರಂಪರೆಯ ಸ್ಥಳಗಳ ಬಗ್ಗೆ ತಿಳಿಯಲು ಕರೆದೊಯ್ಯುವ ಉದ್ದೇಶ ಹೊಂದಿದೆ ಎಂದು ಹೇಳಿದ್ದಾರೆ.

ರೈಲ್ವೆಯು ಮಧ್ಯಸ್ಥಗಾರರ ಸಮಾಲೋಚನೆ ನಡೆಸಿದೆ ಮತ್ತು ಐಸಿಎಫ್ ಕೋಚ್‌ಗಳಿಗೆ ಬೇಡಿಕೆಯಿದೆ. ಭವಿಷ್ಯದಲ್ಲಿ ವಂದೇ ಭಾರತ್, ವಿಸ್ಟಾಡೋಮ್ ಮತ್ತು ಎಲ್‌ಹೆಚ್‌ಬಿ ಮಾದರಿಯ ಕೋಚ್‌ಗಳನ್ನು ಸಹ ಸೇರಿಸಬಹುದು ಎಂದು ವೈಷ್ಣವ್ ಹೇಳಿದರು. “ಐಸಿಎಫ್ ಬೋಗಿಗಳು ಚಿರಪರಿಚಿತವಾಗಿದ್ದು ಅದಕ್ಕಾಗಿಯೇ ಮಧ್ಯಸ್ಥಗಾರರಿಂದ ಬೇಡಿಕೆ ಇತ್ತು, ”ಎಂದು ಅವರು ಹೇಳಿದರು, ಹಲವಾರು ರಾಜ್ಯ ಸರ್ಕಾರಗಳು ಈ ರೈಲುಗಳಿಗೆ ಕಾರ್ಯಾಚರಣೆಯನ್ನು ತೆಗೆದುಕೊಳ್ಳಲು ಆಸಕ್ತಿ ತೋರಿಸಿವೆ ಎಂದಿದ್ದಾರೆ ಅವರು.

ಆಸಕ್ತಿ ಇರುವವರು ರೂ 1 ಲಕ್ಷದ ಒಂದು ಬಾರಿ ಶುಲ್ಕದೊಂದಿಗೆ ನೋಂದಾಯಿಸುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆಯೋಜಕರು ದೃಶ್ಯವೀಕ್ಷಣೆಯ, ಆಹಾರ, ಸ್ಥಳೀಯ ಸಾರಿಗೆ (ಟ್ಯಾಕ್ಸಿ ಇತ್ಯಾದಿ), ನಿಲುಗಡೆ ಸ್ಥಳಗಳಲ್ಲಿ ಹೋಟೆಲ್‌ಗಳು, ಆನ್‌ಬೋರ್ಡ್ ಮನರಂಜನೆ ಮತ್ತು ಅಂತಹ ವಿಷಯಗಳನ್ನು ಒದಗಿಸುವುದು ಯೋಜನೆಯಡಿಯಲ್ಲಿ ಬರುತ್ತದೆ. ವ್ಯವಸ್ಥೆಯು ಎರಡರಿಂದ 10 ವರ್ಷಗಳವರೆಗೆ ಇರಬಹುದು. ಆಪರೇಟರ್‌ಗಳು ಪ್ರತಿ ರೇಕ್‌ಗೆ 1 ಕೋಟಿ ರೂಪಾಯಿ ಭದ್ರತಾ ಠೇವಣಿ ನೀಡಬೇಕು. ಪ್ರತಿ ರೈಲಿನ ಗಾತ್ರವು ಎರಡು ಗಾರ್ಡ್ ವ್ಯಾನ್‌ಗಳನ್ನು ಒಳಗೊಂಡಂತೆ 14-20 ಕೋಚ್‌ಗಳಾಗಿರುತ್ತದೆ. ರೈಲ್ವೇ ಕೇವಲ ಸಾಗಾಣಿಕೆ ಶುಲ್ಕ ಮತ್ತು ಬಳಕೆಯ ಹಕ್ಕು ಶುಲ್ಕವನ್ನು ತೆಗೆದುಕೊಳ್ಳುತ್ತದೆ.

ನಿರ್ವಾಹಕರಿಗೆ ಅನುಕೂಲವಾಗುವಂತೆ ರೈಲ್ವೇಯು ವಲಯಗಳಲ್ಲಿ ವಿಶೇಷ ಘಟಕಗಳನ್ನು ಸ್ಥಾಪಿಸುತ್ತದೆ. ರೈಲುಗಳ ಒಳಗೆ ಮತ್ತು ಹೊರಭಾಗದಲ್ಲಿ ಬ್ರ್ಯಾಂಡಿಂಗ್ ಮತ್ತು ಜಾಹೀರಾತನ್ನು ಅನುಮತಿಸಲಾಗಿದೆ.

ಇದನ್ನೂ ಓದಿ: Galwan clashes ಗಾಲ್ವಾನ್ ಸಂಘರ್ಷದಲ್ಲಿ ಹುತಾತ್ಮ ಕರ್ನಲ್ ಸಂತೋಷ್ ಬಾಬುಗೆ ಮರಣೋತ್ತರ ಮಹಾವೀರ ಚಕ್ರ, ಐವರಿಗೆ ವೀರ ಚಕ್ರ

TV9 Kannada