ಕಳೆದ ಇಂಗ್ಲೆಂಡ್‌ ಪ್ರವಾಸದಲ್ಲಿ ಭಾರತ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗಿದ್ದ ಸೂರ್ಯಕುಮಾರ್‌ ಯಾದವ್‌ ಅವರನ್ನು ಮುಂದಿನ ಸೀರಿಸ್​​ಗೆ ಹೊರಗಿಡಲಾಗಿತ್ತು. ಆದರೀಗ, ಮೂಲಗಳ ಪ್ರಕಾರ ಕೊನೆಗೂ ನ್ಯೂಜಿಲೆಂಡ್‌ ಟೆಸ್ಟ್‌ ಸರಣಿಗಾಗಿ ಟೀಂ ಇಂಡಿಯಾಗೆ ಸೂರ್ಯಕುಮಾರ್​ ಯಾದವ್​ ಅವರನ್ನ ಆಯ್ಕೆ ಮಾಡಲಾಗಿದೆ.

ಇತ್ತೀಚೆಗೆ ನ್ಯೂಜಿಲೆಂಡ್​​ ವಿರುದ್ಧ ಟಿ20 ಸರಣಿಯಲ್ಲಿ ಸೂರ್ಯಕುಮಾರ್‌ ಎಲ್ಲರ ಗಮನ ಸೆಳೆದಿದ್ದರು. ಈಗ ಮತ್ತೆ ತನ್ನ ನಿರ್ಧಾರ ಬದಲಿಸಿರುವ ಆಯ್ಕೆ ತಂಡ ನ್ಯೂಜಿಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಸೂರ್ಯಕುಮಾರ್​​ ಅವಕಾಶ ಮಾಡಿಕೊಟ್ಟಿದೆ. ವಿರಾಟ್​​ ಕೊಹ್ಲಿ ಸ್ಥಾನಕ್ಕೆ ಸೂರ್ಯಕುಮಾರ್​ ಯಾದವ್​ರನ್ನ ಆಯ್ಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

News First Live Kannada