ಪವರ್​ ಸ್ಟಾರ್​ ಪುನೀತ್​ರಾಜ್​ ಕುಮಾರ್ ಇಹಲೋಕ ಬಿಟ್ಟು 26 ದಿನಗಳಾಗಿವೆ.. ನಾಡಿನ ಜನತೆ ರಾಜ್ಯದ ಮೂಲೆಮೂಲೆಯಲ್ಲಿ ಅಪ್ಪು ಪುಣ್ಯಸ್ಮರಣೆ ಮಾಡ್ತಿದ್ದಾರೆ..ಅಷ್ಟೇ ಅಲ್ಲ ಟಾಲಿವುಡ್​, ಕಾಲಿವುಡ್​ಮಂದಿಯೂ ಅಪ್ಪುಗೆ ನಮನಸಲ್ಲಿಸ್ತಿದ್ದಾರೆ..ಕಳೆದ ವಾರವಷ್ಟೇ ಇಡೀ ಸ್ಯಾಂಡಲ್​ವುಡ್​ ಒಂದು ಕಡೆ ಸೇರಿ ‘ಪುನೀತ್​’ಗೆ ನಮನಸಲ್ಲಿಸಿದ್ರು.. ಅದೇ ರೀತಿ ಈಗ ಕಿರುತೆರೆ ಕಲಾವಿದರೆಲ್ಲ ಸೇರಿ ಅಪ್ಪುಗೆ ನಮನ ಸಲ್ಲಿಸೋಕೆ ಸಿದ್ದವಾಗಿದ್ದಾರೆ..

ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್​ ವ್ಯಕ್ತಿಯಲ್ಲ ಒಂದು ಶಕ್ತಿ ಅಂತ ಈಡೀ ಜಗತ್ತಿಗೆ ಅರಿವಾಗಿದೆ.. ದೊಡ್ಮನೆಯ ರಾಜಕುಮಾರ ಕಲಾರತ್ನ ಮಾತ್ರವಲ್ಲ ಸೇವಾರತ್ನ ಕೂಡ ಹೌದು.. ಅಪ್ಪು ಅಗಲಿ ಇಷ್ಟುದಿನವಾದ್ರು ಅಪ್ಪು ನೆನಪು ಹೆಚ್ಚಾಗುತ್ತಿದೆ ವಿನಃ ಕಡಿಮೆ ಆಗ್ತಿಲ್ಲ.. ಯಾವುದೇ ಕಾರ್ಯಕ್ರಮವಿರಲಿ ಅಲ್ಲಿ ಮೊದಲು ಅಪ್ಪು ಅವರನ್ನ ನೆನದು ಮುಂದೆ ಸಾಗುವುದನ್ನ ರೂಡಿ ಮಾಡ್ಕೊಂಡಿದ್ದಾರೆ ಸಿನಿಮಾ

ಕಳೆದ ವಾರ ಕನ್ನಡ ಚಿತ್ರರಂಗದ ಎಲ್ಲಾ ನಟನಟಿಯರು, ತಂತ್ರಜ್ಞರು ಸೇರಿ ಅರಮನೆ ಮೈದಾನದಲ್ಲಿ ‘ಪುನೀತ ನಮನ’ ಕಾರ್ಯಕ್ರಮ ಮಾಡಿ ಅಪ್ಪು ಅವರಿಗ ನಮನ ಸಲ್ಲಿಸಿದ್ರು.. ಇನ್ನು ಈ ಕಾರ್ಯಕ್ಕೆ ಟಾಲಿವುಡ್​, ಕಾಲಿವುಡ್​ ಸ್ಟಾರ್​ ನಟರು ಕೈ ಜೊಡಿಸಿದ್ರು…ಅಲ್ಲದೆ ಈ ಕಾರ್ಯಕ್ರಮದಲ್ಲಿ ಅಣ್ಣಾವ್ರ ಕುಟುಂಬದವರು ಭಾಗಿಯಾಗಿದ್ರು..

ಕಿರುತೆರೆ ಕಲಾವಿದರಿಂದ ಅಪ್ಪು ಅಮರ ಕಾರ್ಯಕ್ರಮ
ಸಿರಿಯಲ್ ಸ್ಟಾರ್ಸ್​​​​​​ ಕಡೆಯಿಂದ ಪವರ್​ ಸ್ಟಾರ್​​ಗೆ ನಮನ

‘ಪುನೀತ ನಮನ’ ಕಾರ್ಯಕ್ರಮದ ನಂತರ ಕನ್ನಡದ ಕಿರುತೆರೆ ಕಲಾವಿದರು ‘ಪುನೀತ ನಮನ’ ಕಾರ್ಯಕ್ರಮದ ಅಯೋಜಕರ ಮೇಲೆ ಬೇಸರ ವ್ಯಕ್ತಪಡಿಸಿದ್ರು..ಯಾಕಂದ್ರೆ;ಅಪ್ಪುಗೆ ನಮನ ಸಲ್ಲಿಸುವ ಅವಕಾಶ ನಮಗೆ ಸಿಗಲಿಲ್ಲ ಅಂತ. ಜೊತೆಗೆ ಈಗ ಈಡೀ ಕಿರುತೆರೆ ಕಲಾವಿದರೆಲ್ಲ ಸೇರಿ ಅಪ್ಪುಗೆ ಶ್ರದ್ದಾಂಜಲಿ ಸಲ್ಲಿಸೋಕೆ ಸಿದ್ದರಾಗಿದ್ದಾರೆ..


ಯೆಸ್​.. ಕನ್ನಡದ ಕಿರುತೆರೆಯ ಎಲ್ಲಾ ನಟ, ನಟಿಯರು, ತಂತ್ರಜ್ಞರೆಲ್ಲ ಸೇರಿ, ಇದೇ ಭಾನುವಾರ ನ. 28ಕ್ಕೆ ನ್ಯಾಷನಲ್ ಕಾಲೇಜ್ ಜಯನಗರದ H N ಕಲಾಕ್ಷೇತ್ರದ ಸಭಾಂಗಣದಲ್ಲಿ ‘ಅಪ್ಪು ಅಮರ’ ಎಂಬ ಕಾರ್ಯ ಕ್ರಮ ಹಮ್ಮಿಕೊಂಡಿದ್ದಾರೆ.. ಈ ಕಾರ್ಯಕ್ರಮಕ್ಕೆ ಈಗಾಗಲೇ ಎಲ್ಲಾ ಸಿದ್ದತೆ ಶುರುವಾಗಿದೆ.. ಜೊತೆಗೆ ‘ಅಪ್ಪು ಅಮರ’ ಕಾರ್ಯಕ್ರಮಕ್ಕೆ ದೊಡ್ಮನೆಗೆ ಆಹ್ವಾನ ಕೊಟ್ಟಿದ್ದಾರೆ ಕಿರುತೆರೆ ಮಂದಿ.

ವಿಶೇಷ ಅಂದ್ರೆ ನ.28 ಭಾನುವಾರ ಎಲ್ಲಾ ಧಾರವಾಹಿಯ ಶೂಟಿಂಗ್​ ನಿಲ್ಲಿಸಿ.. ಕಿರುತೆರಯ ಕುಟುಂಬವೆಲ್ಲ ಸೇರಿ ಅಪ್ಪುಗೆ ನಮನ ಸಲ್ಲಿಸಲು ನಿರ್ಧರಿಸಿದ್ದಾರೆ..28 ಭಾನುವಾರ ಸಂಜೆ 4 ಗಂಟೆಗೆ ಪುನೀತ್​ ರಾಜ್​ಕುಮಾರ್​ ಅಭಿನಯದ ಚಿತ್ರದ ಹಾಡಿನ ಮೂಲಕ ಕಾರ್ಯಕ್ರಮ ಶುರುವಾಗಲಿದೆ..ಅಲ್ಲದೆ ಪುನೀತ್​ ಅಭಿನಯದ 25 ಹಾಡುಗಳಿಗೆ ಕಿರುತೆರೆ ಕಲಾವಿದರು ಹೆಜ್ಜೆ ಹಾಕಲಿದ್ದಾರೆ. ಪುನೀತ್ ರಾಜ್‍ಕುಮಾರ್ ರವರಿಗೆ ನಮನ ಸಲ್ಲಿಸುವುದರೊಂದಿಗೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಒಂದು ವಿನೂತನ ಕಾರ್ಯಕ್ರಮ ಇದಾಗಿರುತ್ತದೆ.

ಮೂರುಗಂಟೆಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಕಿರುತೆರೆಯೆ ಈಡೀ ಕುಟುಂಬ ಭಾಗವಹಿಸಲಿದೆ.. ಅಲ್ಲದೆ ಪುನೀತ ನಮನ ಕಾರ್ಯಕ್ರಮದಂತೆ ‘ಅಪ್ಪು ಅಮರ’ ಕಾರ್ಯಕ್ರಮಕ್ಕೂ ಸಾರ್ವಜನಿಕರಿಗೆ ಅವಕಾಶ ಇರುವುದಿಲ್ಲ.. ಅಲ್ಲದೆ ಈ ಕಾರ್ಯಕ್ರಮದಲ್ಲಿ ಯಾರು ಕಣ್ಣೀರು ಹಾಕದೆ ಅಪ್ಪುಗೆ ನಮಿಸೋಕೆ ಸಜ್ಜಾಗಿದ್ದಾರೆ ಕಿರುತೆರೆ ಮಂದಿ.

News First Live Kannada