ರಾಜ್ಯದ 25 ಕ್ಷೇತ್ರಗಳಲ್ಲಿ ವಿಧಾನ ಪರಿಷತ್ ಚುನಾವಣೆ ನಡೆಯಲಿದೆ. ಬಳ್ಳಾರಿ ವಿಧಾನ ಪರಿಷತ್ ಚುನಾವಣೆಗೆ, ಹಿರಿಯ ಕಾಂಗ್ರೆಸ್ ಮುಖಂಡ ಕೊಂಡಯ್ಯಗೆ ಟಿಕೆಟ್ ನೀಡಲು ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಕೊಂಡಯ್ಯಗೆ ಟಿಕೆಟ್ ಸಿಗುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ರು.

ಬಳ್ಳಾರಿ ಶಾಸಕರ ವಿರೋಧ ಕೂಡ ಕೊಂಡಯ್ಯಗೆ ಎದುರಾಗಿತ್ತು. ಆದ್ದರಿಂದ ಈ ಬಾರಿ ಬಳ್ಳಾರಿ ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ಯಾರ ಪಾಲಿಗೆ ಎಂಬ ಕುತೂಹಲ ಕೆರಳಿತ್ತು. ಈಗ ಕೊನೆಗೂ ರಾಜ್ಯ ನಾಯಕರ ಸಹಾಯ ಇಲ್ಲದೆಯೇ K.C. ಕೊಂಡಯ್ಯ ಟಿಕೆಟ್ ಪಡೆದು ಬೀಗಿದ್ದಾರೆ.

ಹೈಕಮಾಂಡ್ ಮಟ್ಟದಲ್ಲಿ ತಮ್ಮದೇ ಪ್ರಭಾವ ಹೊಂದಿದ್ದಾರೆ ಹಿರಿಯ ಕಾಂಗ್ರೆಸ್ ನಾಯಕ ಕೊಂಡಯ್ಯ. ಈಗ ಪಕ್ಷ ನಿಷ್ಠನಿಗೆ ಪರಿಷತ್ ಟಿಕೆಟ್ ಒಲಿದು ಬಂದಿದೆ. ಸಿದ್ದರಾಮಯ್ಯ ಸೇರಿದಂತೆ ಬಳ್ಳಾರಿ ಶಾಸಕರಿಗೆ ಟಕ್ಕರ್ ಕೊಟ್ಟಿದ್ದಾರೆ ಕೊಂಡಯ್ಯ.

ಸದ್ಯ ಜಿಲ್ಲೆಯ ಎಲ್ಲಾ ಶಾಸಕರನ್ನ ಜೊತೆಗೆ ತೆಗೆದುಕೊಂಡು ಹೋಗುವ ಅನಿವಾರ್ಯತೆ ಕೊಂಡಯ್ಯಗೆ ಇದೆ. ಬಳ್ಳಾರಿ ವಿಧಾನ ಪರಿಷತ್ ಟಿಕೆಟ್, ಮತ್ತೆ ಅಖಾಡಕ್ಕಿಳಿದ ಹಳೇ ಹುಲಿ ಮೆರೆಯಲಿದ್ದಾರೆ.

The post ಕೊಂಡಯ್ಯಗೆ ಪರಿಷತ್ ಟಿಕೆಟ್: ಸಿದ್ದರಾಮಯ್ಯಗೆ ಸೆಡ್ಡು ಹೊಡೆದ್ರಾ​ ಬಳ್ಳಾರಿ ಹಳೇ ಹುಲಿ? appeared first on News First Kannada.

News First Live Kannada