ಬೆಂಗಳೂರು: ಬಿಡಬ್ಲ್ಯೂಎಸ್​ಎಸ್​ಬಿ ವಾಲ್ ಚೇಂಬರ್ ನಲ್ಲಿ ಕಾರ್ಮಿಕನೊಬ್ಬ ಬಿದ್ದು ಸಾವನ್ನಪ್ಪರೋ ಘಟನೆ ಕಮರ್ಷಿಯಲ್ ಸ್ಟ್ರೀಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

18 ವರ್ಷದ ಮೋಹನ್ ಮೋಹನ್ ಮೃತ ಕಾರ್ಮಿಕ. ಕಳೆದ 6 ತಿಂಗಳಿಂದ ವಾಲ್ ಮೆನ್ ಆಗಿ ಕೆಲಸ ಮಾಡ್ತಿದ್ದ ಮೋಹನ್ ನಿನ್ನೆ ರಾತ್ರಿ 9.30ರ ಸುಮಾರಿಗೆ ಚಿನ್ನಸ್ವಾಮಿ ಸ್ಟೇಡಿಯಂ ಗೇಟ್ ನಂಬರ್ 6 ಬಳಿ ಇರುವ ಚೇಂಬರ್ ಬಳಿ ನೀರಿನ ವಾಲ್ ತಿರಿಗಿಸೋಕೆ ಹೋಗಿದ್ದ. ಮೋಹನ್ ಚೇಂಬರ್ ನಲ್ಲಿಯೇ ಕುಸಿದು ಬಿದ್ದಿದ್ದು, ಈ ವೇಳೆ ಜೊತೆಯಲ್ಲೇ ಇದ್ದ ಮತ್ತೊಬ್ಬ ಸಿಬ್ಬಂದಿ ಪುನೀತ್ ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆ.

ಆದ್ರೆ ಸುಮಾರು ಇಪ್ಪತ್ತು ನಿಮಿಷ ಕಾದರೂ ಯಾವುದೇ ಆ್ಯಂಬುಲೆನ್ಸ್ ಬರದ ಕಾರಣ ಆಟೋ ಮೂಲಕ ಬೌರಿಂಗ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆಸ್ಪತ್ರೆಗೆ ಹೋಗೋವಷ್ಟರಲ್ಲಿ ಮೋಹನ್ ಕೊನೆಯುಸಿರೆಳೆದಿದ್ದಾನೆ. ಆದ್ರೆ ಈ ವರೆಗೂ ಚೆಂಬರ್ ನಲ್ಲಿ ಬಿದ್ದು ಯಾವುದೇ ಸಾವಾಗಿಲ್ಲ. ಚೇಂಬರ್ ನಾಲ್ಕೈದಡಿ ಇರುತ್ತೆ. ಕಳೆದ 25ವರ್ಷದಿಂದ ಬಿಡಬ್ಲೂಎಸ್ ಎಸ್ ಬಿಯಲ್ಲಿ ಕೆಲಸ ಮಾಡ್ತಿದೀನಿ.‌ ಈವರೆಗೂ ಅಂತಹ ಘಟನೆ ನಡೆದಿಲ್ಲ. ಬಿದ್ದರೆ ಸಣ್ಣ ಪುಟ್ಟ ಗಾಯಗಳಾಗುತ್ತವೆ. ಮೋಹನ್ ಸಾವಿಗೆ ನಿಖರ ಕಾರಣ ಏನು ಅಂತಾ ಪೋಸ್ಟ್ ಮಾರ್ಟಮ್ ರಿಪೋರ್ಟ್ ನಂತರ ಗೊತ್ತಾಗಬೇಕಿದೆ ಅಂತಾ ಬಿಬ್ಲೂ ಎಸ್ ಎಸ್ ಬಿ ಹಿರಿಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

News First Live Kannada