ಆ ರಾತ್ರಿ ಸಂತೋಷ್​ ಎಂದಿನಂತೆ ತನ್ನ ರೂಂನಲ್ಲಿ ಮಲಗಿದ್ದ.  ಆದ್ರೆ  ಇದ್ದಕ್ಕಿದ್ದಂಗೆ ರೂಂಗೆ ಎಂಟ್ರಿಕೊಟ್ಟ ಗ್ಯಾಂಗ್​ವೊಂದು ಆತನ ಎರಡು ಮೊಬೈಲ್​ಗಳನ್ನ ಕದ್ದು ಎಸ್ಕೇಪ್ ಆಗಿತ್ತು. ನವೆಂಬರ್​ 16 ರಂದು ನಡೆದ ರಾಬರಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​ ಸಿಕ್ಕಿದೆ. ಅಂದು ರಾಬರಿ ಬಗ್ಗೆ ಕೇಸ್ ಕೊಟ್ಟವನೇ ಇದೀಗ ಅಂದರ್ ಆಗಿದ್ದಾನೆ.

ಕೆಲವೊಂದು ಸ್ಟೋರಿಗಳೇ ಹಾಗೆ.. ಅದು ಯಾರಿಂದಲೂ ಶುರುವಾಗಿ ಇನ್ಯಾರದ್ದೋ ಬುಡಕ್ಕೆ ಬಿಸಿ ಮುಟ್ಟಿಸಿ ಬಿಡುತ್ತೆ. ಕೊನೆಗೆ ಇನ್ಯಾರಿಗೋ ಜೈಲಿನ ದಾರಿ ತೋರಿಸಿ ಬಿಡುತ್ತೆ. ಇಲ್ಲಾಗಿದ್ದು ಕೂಡ ಅದೇ. ಅಂದು ತನ್ನ ಮೊಬೈಲನ್ನ ಕಳ್ಳತನ ಮಾಡಲಾಗಿದೆ ಎಂದು ದೂರು ಕೊಟ್ಟವನೇ ಇದೀಗ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ.  ಅದ್ಕೆಲ್ಲಾ ಕಾರಣವಾಗಿದ್ದು ಲವ್ ಸ್ಟೋರಿ.

ಲವ್ ಸ್ಟೋರಿಗಳೇ ಹಾಗೆ. ಅದು ಎಲ್ಲೋ ಹುಟ್ಟಿ ಇನ್ನೆಲ್ಲೋ ಮರೆಯಾಗಿ ಬಿಡುತ್ತೆ. ಎಲ್ಲಾ ಪ್ರೀತಿಗಳು ಹ್ಯಾಪಿ ಎಂಡಿಂಗ್ ಆಗೋಕೆ ಸಾಧ್ಯವಿಲ್ಲ. ಒಂದಾ ಹುಡುಗಿ ಕೈ ಕೊಡ್ತಾಳೆ, ಇಲ್ಲಾ ಹುಡುಗ ಕೈ ಕೊಡ್ತಾನೆ. ಇಲ್ಲೊಂದು ಪ್ರೀತಿ ಇದೆ.. ಆದ್ರೆ ಲವ್ ಸ್ಟೋರಿ ಇದೀಗ ಕ್ರೈಂ ಸ್ಟೋರಿ ಆಗಿ ಬದಲಾಗಿದೆ.

ಅದು ನವೆಂಬರ್ 16 ಮಂಗಳವಾರ. ಅಂದು ಕೊಡಿಗೇಹಳ್ಳಿ  ಪೊಲೀಸ್​ ಠಾಣೆಯಲ್ಲಿ  ಸಂತೋಷ್​ ಎಂಬಾಂತ ರಾಬರಿ ಪ್ರಕರಣವೊಂದನ್ನ ದಾಖಲು ಮಾಡಿದ್ದ. ಗ್ಯಾಂಗ್​ವೊಂದು ತನ್ನ  ರೂಂಗೆ ನುಗ್ಗಿ ತನ್ನ ಮೊಬೈಲನ್ನ ಕದ್ದು ಪರಾರಿಯಾಗಿದೆ ಎಂದು ಸಂತೋಷ್ ದೂರು ಕೊಟ್ಟಿದ್ದ.

ಅಂದು ಸಂತೋಷ್ ಎಂಬಾತನ ರೂಂಗೆ ನುಗ್ಗಿ ಗ್ಯಾಂಗ್​ವೊಂದು  ಆತನ ರೂಂನಲ್ಲಿದ್ದ ಎರಡು ಮೊಬೈಲ್ ಕಸಿದು ಎಸ್ಕೇಪ್ ಆಗಿತ್ತು.  ತಮ್ಮ ಠಾಣೆಯ ವ್ಯಾಪ್ತಿಯಲ್ಲಿ ಇಂತಹದೊಂದು ಘಟನೆ ನಡೆದಿದೆ ಅನ್ನೋದು ಗೊತ್ತಾಗುತ್ತಿದ್ದಂಗೆ ಕೊಡಿಗೇಹಳ್ಳಿ ಠಾಣೆಯ  ಪೊಲೀಸರು ಆರೋಪಿಗಳ ಬಂಧನಕ್ಕೆ ಫೀಲ್ಡಿಗೆ ಇಳಿದು ಬಿಟ್ಟಿದ್ರು.  ಅಲ್ಲದೇ ಕೆಲವೇ ದಿನಗಳಲ್ಲಿ ಮೂವರು  ಆರೋಪಿಗಳನ್ನ ಪೊಲೀಸರು ಲಾಕ್ ಮಾಡಿದ್ರು.

ಈಶಾನ್ಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ನೇತೃತ್ವದಲ್ಲಿ ಆರೋಪಿಗಳನ್ನ ಹೆಚ್ಚಿನ ವಿಚಾರಣೆ ನಡೆಸಿದಾಗ ಪೊಲೀಸರೇ  ಒಂದು ಕ್ಷಣ ದಂಗಾಗಿ ಹೋಗಿದ್ರು. ಯಾಕಂದ್ರೆ ತನಿಖೆಯ ವೇಳೆ ತೆರೆದುಕೊಂಡಿದ್ದು ಮತ್ತೊಂದು ಲೋಕ..

ಅಂದು ಆಗಿದ್ದಾದ್ರೂ ಏನು?

ಅಂದು ಸಂತೋಷ್​ ರೂಂಗೆ ನುಗ್ಗಿದ  ಗ್ಯಾಂಗ್​​ ​​ ಅಲ್ಲಿದ್ದ ಎರಡು ಮೊಬೈಲ್​ಗಳನ್ನ ಕದ್ದು ಎಸ್ಕೇಪ್ ಆಗಿದ್ದೇನೋ ನಿಜ. ಆದ್ರೆ ರೂಂಗೆ ನುಗ್ಗಿದ್ದ ಈ ಗ್ಯಾಂಗ್​ಗೆ ಸಂತೋಷ್​ ಮೊಬೈಲ್​ ಬೇಕಿತ್ತು ವಿನಃ ರಾಬರಿ  ಮಾಡುವ ಯಾವುದೇ ಉದ್ದೇಶ ಇರ್ಲಿಲ್ಲ. ಹಾಗಾದ್ರೆ ಆ ಗ್ಯಾಂಗ್ ಸಂತೋಷ್​ ರೂಂಗೆ ನುಗ್ಗಿದ್ದೇಕೆ..?   ಸಂತೋಷ್ ಮೊಬೈಲನ್ನೇ ಈ ಗ್ಯಾಂಗ್​ ಟಾರ್ಗೆಟ್ ಮಾಡಿದ್ದೇಕೆ ಅನ್ನೋದೆ ರೋಚಕ.

ಎಸ್.. ಆ  ಗ್ಯಾಂಗ್ ಕಳೆದ ಹಲವು ದಿನಗಳಿಂದ ಸಂತೋಷ್​ ಮೊಬೈಲ್​ಗಾಗಿ ಹಸಿದ ನರಿಯಂತೆ ಹೊಂಚು ಹಾಕಿ ಕಾಯ್ತಿತ್ತು . ಹಾಗೆಂದ ಮಾತ್ರಕ್ಕೆ ಸಂತೋಷ್​ ಮೊಬೈಲನ್ನ ಕದ್ದು ಮಾರಾಟ ಮಾಡುವ ಪ್ಲಾನ್ ಕೂಡ ಗ್ಯಾಂಗ್​ನದ್ದಲ್ಲ.  ಆದ್ರೆ ಗ್ಯಾಂಗ್​ಗೆ ಸಂತೋಷ್ ಮೊಬೈಲ್ ಮಾತ್ರ ತುಂಬಾ ಇಂಪಾರ್ಟೆಂಟ್‌ ಆಗಿತ್ತು. ಯಾಕಂದ್ರೆ ಸಂತೋಷ್​ ಮೊಬೈಲ್​ನಲ್ಲಿ  ರಹಸ್ಯವೊಂದು ಅಡಗಿತ್ತು. ಆ ರಹಸ್ಯದ ಹಿಂದೆ ಪ್ರೇಮ್​ ಕಹಾನಿಯೊಂದು ಮುದುಡಿ  ಕೂತಿತ್ತು.

ಈ ಪೊಟೋದಲ್ಲಿ ಕಾಣ್ತಿರೋ ಈ ಯುವಕನ ಹೆಸ್ರು ಸಂತೋಷ್. ನಗರದ ಕೊಡಿಗೇಹಳ್ಳಿ ನಿವಾಸಿ. ಕಳೆದ ಎರಡು ವರ್ಷಗಳಿಂದ ಯುವತಿಯೊಬ್ಬಳನ್ನ  ಪ್ರೀತಿಸ್ತಿದ್ದ. ಪ್ರೀತಿಯ  ಪಲ್ಲಕ್ಕಿ ಏರಿದವರು ದಾರಿ ಮಧ್ಯೆನೆ ಎಡವಿ ಬಿದ್ದಿದ್ರು. ಯಾಕಂದ್ರೆ ಇವರ ಲವ್ ಸ್ಟೋರಿಯಲ್ಲಿ ಇತ್ತೀಗಷ್ಟೇ ಬ್ರೇಕಪ್​ ಅನ್ನೋ ಬಿರುಗಾಳಿ ಬೀಸಿತ್ತು. ಅಲ್ಲಿಯ ತನಕ ನೀನೆಲ್ಲೋ ನಾನೆಲ್ಲೆ ಅಂದವರು, ನಂತರ ನೀನೊಂದು ತೀರ, ನಾನೊಂದು ತೀರ ಅನ್ನೋಕೆ ಶುರುಮಾಡಿದ್ರು.  ಎರಡು ವರ್ಷದ ಪ್ರೀತಿಗೆ ಯುವತಿ ಫುಲ್​ಸ್ಟಾಪ್ ಇಟ್ಟಿದ್ಲು ಎನ್ನಲಾಗಿದೆ. ಆದ್ರೆ ಬ್ರೇಕಪ್ ಆದ್ಮೇಲೆ ಶುರುವಾಗಿದ್ದು ಬ್ಲಾಕ್ ಮೇಲ್​..

ಒಲ್ಲೆ ಎಂದ ನಲ್ಲೆ, ನಾ ಬಿಡುಲೊಲ್ಲೆ ಎಂದ ನಲ್ಲ..!

ಎಸ್.. ಸಂತೋಷ್​ ಹಾಗೂ ಆಕೆಯ ಪ್ರೀತಿಗೆ ಪುಲ್​ ಸ್ಟಾಪ್​ ಬಿದ್ದ ಮೇಲೆ ಈ ಸಂತೋಷ ಆಕೆಯ ಸಂತೋಷವನ್ನೇ ಕಸಿದುಕೊಂಡಿದ್ದ. ಯಾಕಂದ್ರೆ ಇಬ್ಬರು ಪ್ರೀತಿಯ ಬಲೆಯಲ್ಲಿ ಬಿದ್ದ ಮೇಲೆ ಇಬ್ಬರ ನಡುವಿನ ಕೆಲ ಖಾಸಗಿ ವಿಡಿಯೋ ಹಾಗೂ ಫೋಟೋಗಳು ಸಂತೋಷ್​ ಮೊಬೈಲ್​ನಲ್ಲಿದ್ದವು. ಇದನ್ನೆ ಮುಂದಿಟ್ಟುಕೊಂಡು  ಸಂತೋಷ್​ ಆ ಯುವತಿಗೆ ಬ್ಲಾಕ್ ಮೇಲ್ ಮಾಡಿದ್ದಾನೆ. ನನ್ನನ್ನೆ ಬಿಟ್ಟೊಗ್ತಿಯಾ ಅಂತ ಸಂತೋಷ್ ಯುವತಿ ಜೊತೆಗಿನ ಖಾಸಗಿ ಪೊಟೋ ವಿಡಿಯೋಗಳನ್ನ ಇಟ್ಕೊಂಡು ಧಮ್ಕಿ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.

ಯಾವಾಗ ಸಂತೋಷ್​​ ಯುವತಿಗೆ ವಿಡಿಯೋ ಇಟ್ಕೊಂಡು ಬ್ಲಾಕ್ ಮೇಲ್ ಮಾಡೋಕೆ ಶುರು ಮಾಡಿದ್ನೋ.. ಯುವತಿ ತನಗೆ ಆಪ್ತನಾಗಿದ್ದ ಯರಿಸ್ವಾಮಿ ಬಳಿ ಈ ಬಗ್ಗೆ ಡಿಸ್ಕಸ್ ಮಾಡಿದ್ಲು.“ಸಂತೋಷ್ ತನ್ನ ಪೊಟೋ ವಿಡಿಯೋ ತನ್ನ ಬಳಿ ಇಟ್ಕೊಂಡಿದ್ದಾನೆ. ಅದನ್ನ ಹೇಗಾದ್ರು ಮಾಡಿ ಡಿಲೀಟ್ ಮಾಡಿಸ್ಬೇಕು. ಅವನ ಮೊಬೈಲ್ ಸಿಕ್ರೆ ಎಲ್ಲಾ ಪೊಟೋ ವಿಡಿಯೋ ಡಿಲೀಟ್ ಮಾಡ್ಬೋದು” ಎಂದಿದ್ದಾಳೆ.

ಯುವತಿ ಹೇಳಿದ್ದೆ ತಡ, ಯರಿಸ್ವಾಮಿ ಸಂತೋಷ್​ ರೂಂ ಅಡ್ರೆಸ್ ಹುಡುಕಲು ಶುರು ಮಾಡಿದ್ದಾನೆ.   ಈ ವೇಳೆ ಯರಿಸ್ವಾಮಿಗೆ ಸಂತೋಷ್​​​ ಕೋಡಿಗೇಹಳ್ಳಿಯಲ್ಲಿರುವುದು ಗೊತ್ತಾಗಿದೆ.  ಕೊಡಿಗೇಹಳ್ಳಿ ಸುತ್ತಮುತ್ತ ಪಾನಿಪುರಿ ಮಾರ್ತಿದ್ದ ತನ್ನ ಸ್ನೇಹಿತರಾದ ನಂಜುಂಡಸ್ವಾಮಿ ಹಾಗೂ ಆಕಾಶ್ ರನ್ನ ತನ್ನ ಜೊತೆ ಸೇರಿಸಿಕೊಂಡಿದ್ದ. ಹೇಗಾದ್ರು ಮಾಡಿ ಸಂತೋಷ್ ಮೊಬೈಲ್ ಕದ್ಕೊಂಡು ಬರ್ಬೆಕು ಅಂತ ಅವನ ರೂಂ ಗೆ ಎರಿಸ್ವಾಮಿ, ನಂಜುಂಡ ಹಾಗೂ ಆಕಾಶ್ ನುಗ್ಗಿದ್ರು. ರೂಂಗೆ ಎಂಟ್ರಿಕೊಟ್ಟವರೇ ರೂಂ ನಲ್ಲಿದ್ದ ಎರಡು ಮೊಬೈಲ್ ಕಸಿದು ಎಸ್ಕೇಪ್ ಆಗಿದ್ದಾರೆ.

ಎರಿಸ್ವಾಮಿ ಗ್ಯಾಂಗ್ ತನ್ನ  ಮೊಬೈಲ್ ಕಸಿದು ಎಸ್ಕೇಪ್ ಆಗಲು, ಅಸಲಿ ಕಾರಣ ತನ್ನ ಪ್ರೇಯಸಿಗೆ ತಾನು ಬ್ಲಾಕ್ ಮೇಲ್ ಮಾಡಿದ್ದು ಅನ್ನೊದನ್ನ ತಿಳಿಯದ ಸಂತೋಷ್, ಕೊಡಿಗೇಹಳ್ಳಿ ಠಾಣೆ ಯಲ್ಲಿ ರಾಬರಿ ಕೇಸ್ ದಾಖಲು ಮಾಡಿದ್ದಾನೆ. ಕೋಡಿಗೆಹಳ್ಳಿ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಪಾನಿಪುರಿ ಮಾರ್ತಿದ್ದ ನಂಜುಂಡ ಹಾಗೂ ಆಕಾಶ್ ನನ್ನ ಲಾಕ್ ಮಾಡಿ  ವಿಚಾರಣೆ ನಡೆಸಿದಾಗ ಇವರು ಎರಿಸ್ವಾಮಿ ವಿಚಾರ ಬಾಯ್ಬಿಟ್ಟಿದ್ದಾರೆ. ಎರಿಸ್ವಾಮಿಯನ್ನ ವಿಚಾರಣೆ ನಡೆಸಿದಾಗ, ಸಂತೋಷ್ ಮ್ಯಾಟರ್ ಹೊರ ಬಂದಿದೆ.

ಈ ವೇಳೇ ಸಂತೋಷ್​ ಯುವತಿಗೆ ಬ್ಲಾಕ್ ಮೇಲ್ ಮಾಡಿದ್ದು ಗೊತ್ತಾಗಿದೆ.  ಲವ್ ಬ್ರೇಕಪ್ ಕಮ್ ಬ್ಲಾಕ್ ಮೇಲ್ ಕಹಾನಿ ಹೊರಬಿದ್ದಿದೆ. ಯುವತಿ ಕಡೆಯವರು ನೀಡಿರೋ ದೂರಿನನ್ವಯ ಸಂತೋಷ್​​ ನನ್ನು ಪೊಲೀಸರು ಬಂಧಿಸಿದ್ರೆ,  ಸಂತೋಷ್ ನೀಡಿರೋ ದೂರಿನನ್ವಯ ಎರಿಸ್ವಾಮಿ, ನಂಜುಂಡಸ್ವಾಮಿ ಹಾಗೂ ಆಕಾಶ್​ನನ್ನ ಬಂಧಿಸಲಾಗಿದೆ.

ಇದರಿಂದ ಒಂದೇ ಯುವತಿಯ ವಿಚಾರಕ್ಕೆ ಕಿರಿಕ್ ನಡೆದು ಸಂತೋಷ್​​ ಹಾಗೂ ಎರಿಸ್ವಾಮಿ ಇಬ್ಬರು  ಅಂದರ್  ಆಗುವಂತ್ತಾಗಿದೆ. ಆದ್ರೆ ಅದೇನೆ ಇರಲಿ,  ಲವ್ ಬ್ರೇಕಪ್ ಆದ್ಮೇಲೆ ಸಂತೋಷ್ ಸುಮ್ಮನಾಗಬೇಕಿತ್ತು. ಆಕೆಯ ಮನವೊಲಿಸುವ ಪ್ರಯತ್ನ ಕೂಡ ಮಾಡಬಹುದಿತ್ತು. ಅದು ಸಾಧ್ಯವಾಗದಿದ್ದಾಗ ನಡೆದಿದ್ದೆಲ್ಲವು ಕೆಟ್ಟ ಕನಸೆಂದು ಮರೆತು ಬಿಡಹುದಿತ್ತು. ಆದ್ರೆ ಆತ ಹಾಗೆ ಮಾಡಲಿಲ್ಲ. ಒಂದು ಕಾಲದ ತನ್ನ ಪ್ರೇಯಸಿಗೆ ಆಕೆಯದ್ದೇ ಫೋಟೋ ಇಡ್ಕೊಂಡು ಬ್ಲಾಕ್ ಮೇಲ್ ಮಾಡಿದ್ದಾನೆ.  ಪರಿಣಾಮ ಇಂದು ಇಂದು ಜೈಲಿನಲ್ಲಿ ದಿನದೂಡುವಂತ್ತಾಗಿದೆ.

ಪ್ರೀತಿ ಮಾಡಬಾರದು.. ಮಾಡಿದ್ರೆ ಹೀಗೂ ಮಾಡಿಕೊಳ್ಳಬಾರದು..!

ಪ್ರೀತಿ ಮಾಯೆ ನಿಜ. ಆದ್ರೆ ಪ್ರೀತಿಯಲ್ಲಿ ಬಿದ್ದಾಗ ಮೈಮರೆಯಬಾರದು. ಅದ್ಕೇ ಹೇಳೋದು.. ಒಂದು ವೇಳೆ ಪ್ರೀತಿ ಮಾಡುವುದಿದ್ರೂ ಯೋಚಿಸಿ ಪ್ರೀತಿ ಮಾಡಿ, ಯಾಕಂದ್ರೆ ಪ್ರೀತಿ ಮಾಡಿದ್ಮೇಲೆ ಯೋಚನೆ  ಮಾಡುವಂತ್ತಾಗಬಾರದು.  ಆಮೇಲೆ ಯೋಚನೆ ಮಾಡಿ ಏನು ಪ್ರಯೋಜನ ಇಲ್ಲ ಬಿಡಿ

ಪ್ರೀತಿ ಹ್ಯಾಪಿ ಎಂಡಿಂಗ್  ಕಾಣಲ್ಲ ನಿಜ. ಆದ್ರೆ ಪ್ರೀತಿಗೆ ಪುಲ್ ಸ್ಟಾಪ್ ಬಿದ್ಮೇಲೆ ಯಾವತ್ತೂ ಇಂತಹ ಕೆಲಸ ಮಾಡ್ಬಾರ್ದು. ಒಂದು ಕಾಲದ ಪ್ರೇಯಸಿಯನ್ನೇ, ಆಕೆ ತನ್ನ ಜೊತೆ ಕಳೆದ ಕ್ಷಣಗಳನ್ನೆ ರೆಕಾರ್ಡ್​ ಮಾಡಿ ಬ್ಲಾಕ್ ಮೇಲ್ ಮಾಡುವ ಈ ಇವರದ್ದು ಯಾವ ಸೀಮೆಯ ಪ್ರೀತಿ ಹೇಳಿ..?

 

The post ಒಂದು ಹುಡುಗಿ..ಇಬ್ಬರು ಹುಡುಗರ ಗುಂಪು; ಈ ಲವ್-ಬ್ಲಾಕ್​​ಮೇಲ್ ಸ್ಟೋರಿಲಿ ಬಕ್ರಾ ಆಗಿದ್ಯಾರು? appeared first on News First Kannada.

News First Live Kannada