ಬೆಳಗಾವಿ ವೈಭವನಗರದ ‘ಲಂಚ ವೈಭವ’ ಮನೆ ಮೇಲೆ ಎಸಿಬಿ ದಾಳಿ; ಡಾಲರ್‌ ನೋಟುಗಳು ಪತ್ತೆ- ಇದು ಗ್ರೂಪ್ ಸಿ ನೌಕರನ ಮನೆ

ಹೆಸ್ಕಾಂ ವಿಭಾಗದ ಗ್ರೂಪ್ ಸಿ ನೌಕರ ನಾತಾಜಿ ಪಾಟೀಲ್ ಮನೆ ಮೇಲೆ ಎಸಿಬಿ ದಾಳಿ

ಬೆಳಗಾವಿ: ರಾಜ್ಯದಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆಗೆ ಮುಂದಾಗಿದ್ದು, ಒಟ್ಟು 60 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಾವಿ ಹೆಸ್ಕಾಂ ವಿಭಾಗದ ಗ್ರೂಪ್ ಸಿ ನೌಕರ ನಾತಾಜಿ ಪಾಟೀಲ್ಗೂ ಎಸಿಬಿ ಶಾಕ್ ಕೊಟ್ಟಿದೆ. ಬೆಳಗಾವಿ ನಗರದ ಮನೆ, ಕಚೇರಿ ಸೇರಿ 3 ಕಡೆ ಎಸಿಬಿ ದಾಳಿ ನಡೆಸಿದೆ.

ಹೆಸ್ಕಾಂ ಡಿಪಾರ್ಟ್ಮೆಂಟ್ ನಲ್ಲಿ ಲೈನ್ ಮೆಕ್ಯಾನಿಕ್ ಗ್ರೇಡ್ ಕೆಲಸ ಮಾಡುತ್ತಿರುವ ನಾತಾಜಿ ಪಾಟೀಲ್ ಮನೆ ಕಚೇರಿ ಮೇಲೆ ಎಸಿಬಿ ಎಸ್‌ಪಿ ಬಿಎಸ್ ನೇಮಗೌಡ ನೇತೃತ್ವದಲ್ಲಿ ದಾಳಿ ನಡೆದಿದೆ. ದಾಳಿ ವೇಳೆ ನಾತಾಜಿ ಪಾಟೀಲ್ ಮನೆಯಲ್ಲಿ ಡಾಲರ್‌ ನೋಟುಗಳು ಪತ್ತೆಯಾಗಿವೆ. ಬೆಳಗಾವಿಯ ವೈಭವನಗರದ ಮನೆ ಮೇಲೆ ಎಸಿಬಿ ದಾಳಿ ನಡೆಸಿ ಪರಿಶೀಲನೆ ಮಾಡುವಾಗ ಅಪಾರ ಪ್ರಮಾಣದ ಆಸ್ತಿ ದಾಖಲೆ, ಹಣ ಪತ್ತೆಯಾಗಿದೆ. ನಾತಾಜಿ ಪಾಟೀಲ್ ಸದ್ಯ ಮನೆಯಲ್ಲೇ ಇದ್ದಾರೆ.

ಇದನ್ನೂ ಓದಿ: ACB Mega Raid: ‘ಮಾಯ’ದಂತಹ ಭ್ರಷ್ಟಾಚಾರ: ನಕಲಿ ಬಿಲ್‌ ಸೃಷ್ಟಿ ಪರಿಣತ, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಜಿಲ್ಲಾಧ್ಯಕ್ಷನೂ ಹೌದು!

TV9 Kannada