ಬೆಂಗಳೂರು: ಭ್ರಷ್ಟಾಚಾರ ಆರೋಪಿತ 15 ಅಧಿಕಾರಿಗಳ ವಿರುದ್ಧ ದಾಳ ಇಂದು ಕರ್ನಾಟಕ ರಾಜ್ಯದಾದ್ಯಂತ 68 ಸ್ಥಳಗಳಲ್ಲಿ ವಿವಿಧ ಎಸಿಬಿ ತಂಡಗಳಿಂದ ಕಾರ್ಯಾಚರಣೆ ನಡೆಸಲಾಗಿದೆ. ಕರ್ನಾಟಕ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳವು ರಾಜ್ಯದ 15 ಸರ್ಕಾರಿ ನೌಕರರು ತಮ್ಮ ಬಲ್ಲ ಮೂಲಗಳಗಿಂತ ಅಸಮತೋಲನ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ಸಂಗ್ರಹಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲಿಸಿ ಅವರಿಗೆ ಸಂಬಂಧಿಸಿದ 68 ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ.

ಅದರಲ್ಲೂ ಬೆಂಗಳೂರು ನಗರದ ಏಳು ಕಡೆಗಳಲ್ಲಿ ಎಸಿಬಿ ದಾಳಿ ನಡೆದಿದೆ. ಬಿಬಿಎಂಪಿ ರಸ್ತೆ ಸೌಕರ್ಯ ಹಾಗೂ ಮೂಲ ಸೌಕರ್ಯ ವಿಭಾಗ ಎಫ್.ಡಿ.ಎ. ಆಗಿರುವ ಮಾಯಣ್ಣರ ಕತ್ರಿಗುಪ್ಪೆ ನಿವಾಸದ ಮೇಲೆ ಎಸಿಬಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಉಳಿದಂತೆ ಮಾಯಣ್ಣ ಆಪ್ತೆ ಉಮಾದೇವಿ ಅವರ ನಂದಿನಿ ಲೇಔಟ್ ಮನೆ ಮೇಲೂ ರೇಡ್ ಮಾಡಲಾಗಿದೆ. ಇನ್ನು ಸಕಾಲ ಅಡ್ಮಿನಿಶ್ಬ್ಟೇಷನ್ ಆಫಿಸರ್ ಎಲ್.ಸಿ.ನಾಗರಾಜ್ ನೆಲಮಂಗಲ ನಿವಾಸ ಹಾಗೂ ಯಲಹಂಕ ಸರ್ಕಾರಿ ಆಸ್ಪತ್ರೆ ವೈದ್ಯ ಫಿಜಿಯೋಥೆರಪಿಸ್ಟ್ ರಾಜಶೇಖರ್ ನಿವಾಸ, ಯಶವಂತಪುರ ಬಿಬಿಎಂಪಿ ಡಿ ಗ್ರೂಪ್ ನೌಕರ ಜಿ.ವಿ.ಗಿರಿ, ನಂದಿನಿ ಡೈರಿ ಜನರಲ್ ಮ್ಯಾನೇಜರ್ ಕೃಷ್ಣಾರೆಡ್ಡಿ ಹಾಗೂ ಪ್ರಾಜೆಕ್ಟ್ ‌ಮ್ಯಾನೇಜರ್ ನಿರ್ಮಿತಿ ಕೇಂದ್ರದ ವಾಸುದೇವ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಎಸಿಬಿ ಡಿವೈಎಸ್ಪಿ ರವಿಶಂಕರ್, ಇನ್ಸ್​ಪೆಕ್ಟರ್ ಮಂಜುನಾಥ ನೇತೃತ್ವದಲ್ಲಿ ಮಾಯಣ್ಣ ನಿವಾಸದ ಮೇಲೆ ದಾಳಿ ಮಾಡಲಾಗಿದ್ದು, ಮನೆಯಲ್ಲಿ ಅಪಾರ ಪ್ರಮಾಣದ ಚಿನ್ನಾಭರಣ, ನಗದು ದೊರೆತಿದೆ. ಇವುಗಳನ್ನು ಮೌಲ್ಯಮಾಪನ ಮಾಡಲು ಮಾಯಣ್ಣ ನಿವಾಸಕ್ಕೆ ಎಸಿಬಿ ಅಧಿಕಾರಿಗಳು ಅಕ್ಕಸಾಲಿಗರನ್ನ ಕರೆತಂದಿದ್ದಾರೆ.

ಮಾಯಣ್ಣ ಕಳೆದ ಏಳು ವರ್ಷಗಳಿಂದ ಬಿಬಿಎಂಪಿ ಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಬಿಬಿಎಂಪಿಯ ರಸ್ತೆ ಅಭಿವೃದ್ಧಿ ಮೂಲ ಸೌಕರ್ಯ ವಿಭಾಗದಲ್ಲಿ ಎಫ್.ಡಿ.ಎ ಆಗಿದ್ದರು. ರಸ್ತೆ ಅಭಿವೃದ್ದಿಗೆ ಸಂಬಂಧಪಟ್ಟ ಟೆಂಡರ್ ಗಳಲ್ಲಿ ಇನ್ವಾಲ್ ಆಗಿ ಕಮಿಷನ್ ಪಡೆದಿರೋ ಆರೋಪ ಮಾಯಣ್ಣ ಮೇಲಿದ್ದು, ನಕಲಿ‌ ದಾಖಲೆ ಸೃಷ್ಟಿಸಿ ರಸ್ತೆ ಟೆಂಡರ್ ಪಡೆದಿರೋ ಆರೋಪ ಕೇಳಿ ಬಂದಿದೆ.

News First Live Kannada