ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಮೇಲೆ ದೊಡ್ಡಬಳ್ಳಾಫುರ ಕಸಬಾ -2 ರಾಜಸ್ವ ನಿರೀಕ್ಷಕ (ಆರ್‌ಐ)ಲಕ್ಷೀ ನರಸಿಂಹಯ್ಯ ಭ್ರಷ್ಟಾಚಾರ ನಿಗ್ರಹ ದಳ ಶಾಕ್‌ ನೀಡಿದೆ.

ಬುಧವಾರ ಬೆಳ್ಳಂಬೆಳಗ್ಗೆ  ಎಸಿಬಿ ಅಧಿಕಾರಿಗಳ ಪ್ರತ್ಯೇಕ  ತಂಡಗಳು ದೊಡ್ಡಬಳ್ಳಾಪುರದ ತೇರಿನ ಬೀದಿಯಲ್ಲಿನ ಲಕ್ಷ್ಮೀ ನರಸಿಂಹಯ್ಯ ಅವರಿಗೆ ಸೇರಿದ ನಿವಾಸ ಸೇರಿದಂತೆ ನಾಲ್ಕು ಕಡೆ ದಾಳಿ ನಡೆಸಿದ್ದು ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ. ತೇರಿನ ಬೀದಿಯಲ್ಲಿರುವ ಲಕ್ಷ್ಮೀ ನರಸಿಂಹಯ್ಯ ಅವರ ನಿವಾಸದ ಮನೆ ಸೇರಿ ನಾಲ್ಕು ಕಡೆ ಶೋಧ ಕಾರ್ಯಾಚರಣೆ ಮುಂದುವರಿದಿದೆ. ದಾಖಲಾತಿ ಪರಿಶೀಲನೆ ಮಾಡುತ್ತಿದ್ದಾರೆ.

ಈ ವೇಳೆ ಹಣ, ಚಿನ್ನಾಭರಣ, ಆಸ್ತಿಪತ್ರಗಳು ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಕಡತಗಳು ಪತ್ತೆಯಾಗಿದ್ದು ಪರಿಶೀಲನೆ ನಡೆಯುತ್ತದೆ ಎಂದು ಮೂಲಗಳು ಹೇಳಿವೆ.

ಆರ್‌ಐ ಲಕ್ಷ್ಮೀನರಸಿಂಹಯ್ಯ ವಿರುದ್ಧ ನಕಲಿ ದಾಖಲೆಗಳ್ನು ಸೃಷ್ಟಿಸಿ ಭೂಮಿ ಪರಭಾರೆ ಮಾಡಿಕೊಟ್ಟಿದ್ದ ಆರೋಪ ಪ್ರಕರಣವೂ ಇದೆ. ಈ ಪ್ರಕರಣ ಸದ್ಯ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ತನಿಖಾ ಹಂತದಲ್ಲಿದೆ ಎಂದು ತಿಳಿದುಬಂದಿದೆ.

News First Live Kannada