ಗದಗ: ಅಕ್ರಮವಾಗಿ ಆಸ್ತಿ ಸಂಪಾದನೆಯ ಆರೋಪ ಹೊತ್ತಿರುವ ಸರಕಾರಿ ಅಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ಶಾಕ್ ನೀಡಿದ್ದಾರೆ. ಅಕ್ರಮ ಆಸ್ತಿ ಹಾಗೂ ಭ್ರಷ್ಟಚಾರ ಆರೋಪದ ಹಿನ್ನೆಲೆ ಅಧಿಕಾರಿಗಳು, ಸಿಬ್ಬಂದಿಗಳ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.

ನಗರದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಟಿ. ಎಸ್. ರುದ್ರೇಶಪ್ಪ ಅವರ ಹುಡ್ಕೋ ಕಾಲೋನಿ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜೊತೆಗೆ ರುದ್ರೇಶಪ್ಪಗೆ ಸಂಬಂಧಿಸಿದ ಗದಗ, ಶಿವಮೊಗ್ಗ, ದಾವಣಗೆರೆ, ಸೇರಿದಂತೆ ಐದು ಮನೆಗಳ ಮೇಲೆ ಕೂಡ ದಾಳಿ ನಡೆಸಿದ್ದಾರೆ. ಅಧಿಕಾರಿ ರುದ್ರೇಶಪ್ಪನನ್ನು ಪಕ್ಕದಲ್ಲೇ ಕೂರಿಸಿಕೊಂಡು ಕಡತಗಳು, ಕಂಪ್ಯೂಟರ್ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ರುದ್ರೇಶ್ ಅವರನ್ನ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಇನ್ನು ತಪಾಸಣೆ ವೇಳೆ ರುದ್ರೇಶಪ್ಪ ಅವರ ಮನೆಯಲ್ಲಿ 7 ಕೆಜಿ ಚಿನ್ನ, 15 ಲಕ್ಷ ನಗದು, 3 ಕೋಟಿ ಮೌಲ್ಯದ 9ಎಫ್​ ಗೋಲ್ಡ್​ ಪತ್ತೆಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಕೃಷಿ ನಿರ್ದೇಶಕ ಕಚೇರಿ ಕಚೇರಿ ಬೀಗ ಹಾಕಿರೋ ಹಿನ್ನೆಲೆಯಲ್ಲಿ ಕಚೇರಿ ಮುಂದೆ ಹಾವೇರಿ ಎಸಿಬಿ ಅಧಿಕಾರಿಗಳ ತಂಡ ಕಾದು ಕುಳಿತಿದೆ.

ಇದನ್ನೂ ಓದಿ:ದೊಡ್ಡಬಳ್ಳಾಪುರ RI ನಿವಾಸದ ಮೇಲೆ ACB ದಾಳಿ -ಅಪಾರ ಪ್ರಮಾಣ ಬೆಳ್ಳಿ, ಚಿನ್ನಾಭರಣ, ಆಸ್ತಿ ಪತ್ತೆ

ಇದನ್ನೂ ಓದಿ:ಬೆಂಗಳೂರಿನಲ್ಲಿ 7 ಕಡೆಗಳಲ್ಲಿ ACB ದಾಳಿ- FDA ಮಾಯಣ್ಣ ನಿವಾಸದಲ್ಲಿ ಅಪಾರ ಪ್ರಮಾಣ ಚಿನ್ನಾಭರಣ ಪತ್ತೆ

News First Live Kannada