ಮಂಡ್ಯ: ರಾಜ್ಯದ ವಿಧಾನಪರಿಷತ್​ ಚುನಾವಣೆಗೆ ನಿನ್ನೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಮಂಡ್ಯದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಈ ನಡುವೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಅವರು ಯಾರಿಗೆ ಬೆಂಬಲ ನೀಡಲಿದ್ದಾರೆ ಎಂಬ ಚರ್ಚೆ ಜೋರಾಗಿತ್ತು. ಸದ್ಯ ಈ ಕುರಿತಂತೆ ಪ್ರತಿಕ್ರಿಯೆ ನೀಡಿರೋ ಸಂಸದೆ, ಮಂಡ್ಯ ಜಿಲ್ಲೆಗೆ ಯಾರು ಸರಿಯಾಗಿ ಕೆಲಸ ಮಾಡ್ತಾರೆ ಅವರಿಗೆ ನನ್ನ ಬೆಂಬಲ ಇರುತ್ತೆ ಎಂದು ಹೇಳಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸುಮಲತಾ ಅವರು, ನಾನು ಈ ಮೊದಲು ಹೇಳಿದೀನಿ.. ಈಗಲೂ ಅದೇ ಹೇಳ್ತಿನಿ. ನನಗೆ ಖಂಡಿತ ಬಿಜೆಪಿ ಪಕ್ಷ ಸಪೋರ್ಟ್​ ಮಾಡಿದೆ. ಅದೇ ರೀತಿ ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು ನನ್ನ ಬೆನ್ನೆಲುಬಾಗಿ ನಿಂತುಕೊಂಡು ಸಪೋರ್ಟ್​ ಮಾಡಿದ್ದಾರೆ. ಹಾಗಾಗಿ ನಾನು ಯಾರ ಪರವಾಗಿ ಅಂತ ನಿಲುವು ತಗೋಳೋದು ಸರಿಹೋಗಲ್ಲ. ನಾನು ಸ್ವತಂತ್ರ್ಯ ಸಂಸದೆ ಆಗಿರೋದರಿಂದ ನನ್ನ ಬೆಂಬಲ ಯಾರಿಗೆ ಅನ್ನೋದು ನಾನು ಆ ರೀತಿ ಹೇಳಿದ್ರೆ, ಅದು ಒಂದಷ್ಟು ಜನಕ್ಕೆ ನೋವಾಗುತ್ತದೆ. ಆದ್ದರಿಂದ ನಾನು ಅದನ್ನು ಹೇಳೋಕೆ ಇಷ್ಟ ಪಡೋಲ್ಲ.

ಇದನ್ನೂ ಓದಿ: ರೆಬೆಲ್​ಸ್ಟಾರ್​ ಅಂಬರೀಶ್​ 3ನೇ ವರ್ಷದ ಪುಣ್ಯಸ್ಮರಣೆ: ನಮನ ಸಲ್ಲಿಸಿ ಭಾವುಕರಾದ ಸುಮಲತಾ

ಯಾರು ಒಳ್ಳೆ ಅಭ್ಯರ್ಥಿಯಾಗಿ ಆಗಿರುತ್ತಾರೆ. ಮಂಡ್ಯ ಜಿಲ್ಲೆಗೆ ಯಾರು ಸರಿಯಾಗಿ ಕೆಲಸ ಮಾಡ್ತಾರೆ ಅನ್ನೋ ಒಂದು ನಂಬಿಕೆ, ಭರವಸೆ ನನಗೆ ಇರುತ್ತೋ ಕಂಡಿತ ಅಂತ ಅಭ್ಯರ್ಥಿಗೆ ನಾನು ಸಪೋರ್ಟ್​ ಮಾಡ್ತೀನಿ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಅಕ್ರಮ ಕಲ್ಲುಗಣಿಗಾರಿಕೆ ಮಾತನಾಡಿದ ಅವರು, ಅಕ್ರಮವಾಗಿ ನಡೆಯುತ್ತಿದ್ದ ಮೈನಿಂಗ್​ ಒಂದು ಮಟ್ಟಿಗೆ ನಿಂತಿದೆ. ಎಲ್ಲವೂ ಒಂದೇ ದಿನ ಆಗುತ್ತೆ ಅಂತ ನಾವೂ ಎದುರು ನೋಡೋದು ತಪ್ಪಾಗುತ್ತೆ.. ಆದರೆ ಮೊದಲು ಆಗದೇ ಇರೋದು ಈಗ ಒಂದು ಫಲಿತಾಂಶ ಬಂದಿದೆ. ಖಂಡಿತ ಮುಂದೇನು ನಾನು ಅದನ್ನು ಗಮನದಲ್ಲೇ ಇಟ್ಟುಕೊಳ್ತೀನಿ.. ಆ ಹೋರಾಟ ಅಂತು ನಾನು ನಿಲ್ಲಿಸೋದಿಲ್ಲ ಎಂದರು.

News First Live Kannada