ಕಲಬುರಗಿ: ಅಕ್ರಮವಾಗಿ ಆಸ್ತಿ ಸಂಪಾದನೆಯ ಆರೋಪ ಹೊತ್ತಿರುವ ಸರಕಾರಿ ಅಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ಶಾಕ್ ನೀಡಿದ್ದಾರೆ. ಆದರೆ ನಗರದ ಲೋಕೋಪಯೊಗಿ ಅಧಿಕಾರಿಯೊಬ್ಬರು ಮಾತ್ರ ದಾಳಿ ನಡೆಸಲು ಬಂದ ಎಸಿಬಿ ಅಧಿಕಾರಿಗಳಿಗೆ ಶಾಕ್​ ನೀಡಿ ಬೆವರಿಳಿಸುವಂತೆ ಮಾಡಿದ್ದಾರೆ.

ಹೌದು ಇಂದು ಮುಂಜಾನೆ ಎಸಿಬಿ ಅಧಿಕಾರಿಗಳು ನಗರದ ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿರುವ ಶಾಂತ್​ ಕುಮಾರ್​ ಎಂಬುವವವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಆರಂಭದಲ್ಲಿ ಸಾಕಷ್ಟು ಮೌಲ್ಯದ ಚಿನ್ನಾಭರಣ ಸೇರದಂತೆ ನಗದು  ಪತ್ತೆಯಾಗಿತ್ತು. ಬಳಿಕೆ ತಪಾಸಣೆಯನ್ನು ತೀವ್ರಗೊಳಿಸಿದ ಅಧಿಕಾರಿಗಳು ಚಾಲಾಕಿ ಅಧಿಕಾರಿಯ ಕಿಲಾಡಿತನವನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ:ಸರ್ಕಾರಿ ಕೆಲಸ; ಕುಬೇರನಿಗೂ ಲೋನ್​ ಕೊಡ್ತಾರಂತೆ ಈ PWD ಅಧಿಕಾರಿ; ಆಸ್ತಿ ಕಂಡು ACBಗೇ ಶಾಕ್

ಮನೆಯಲ್ಲಿ ಅಳವಡಿಸಲಾದ ಪ್ಲಂಬಿಂಗ್​ ಪೈಪ್​ಗಳಲ್ಲಿ ಕಂತೆ, ಕಂತೆ ಹಣಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಬೆಳಿಗ್ಗೆ ದಾಳಿಗೆ ಬಂದಾಗ ಮನೆಯವರು ಬಾಗಿಲು ತೆಗೆಯಲು ಸಾಕಷ್ಟು ಸಮಯ ತೆಗೆದುಕೊಂಡಿದ್ದರಂತೆ. ಹೀಗಾಗಿ ಅನುಮಾನ ವ್ಯಕ್ತಪಡಿಸಿದ ಅಧಿಕಾರಿಗಳು ಎಲ್ಲೆಲ್ಲಿ ಹಣ ಬಚ್ಚಿಡಲು ಸಾಧ್ಯವೋ ಅಷ್ಟು ಮೂಲಗಳನ್ನು ಎಸಿಬಿ ಬೇರು ಸಮೇತ ತಡಕಾಡಿದ್ದಾರೆ.

ಈ ವೇಳೆ ಪ್ಲಂಬರ್​ ಓರ್ವರನ್ನು ಕರೆಯಿಸಿ ಮನೆಗೆ ಅಳವಡಿಸಿದ ಪ್ಲಂಬಿಗ್​ ಪೈಪ್​ಗಳನ್ನು ಕಟ್​ ಮಾಡಿಸಿದ್ದಾರೆ. ಈ ವೇಳೆ ಪೈಪ್​ನಲ್ಲಿ ನೀರಿನ ಹೊರತು ಕಂತೆ, ಕಂತೆ ನೋಟುಗಳು ಬಿದ್ದಿವೆ. ಇದನ್ನು ಕಂಡ ಅಧಿಕಾರಿಗಳು ಅವಕ್ಕಾಗಿದ್ದು ಸದ್ಯದ ಮಾಹಿತಿ ಪ್ರಕಾರ 20 ಲಕ್ಷಕ್ಕೂ ಹೆಚ್ಚು ಹಣ ಪೈಪ್​ನಲ್ಲಿ ಬಚ್ಚಿಡಲಾಗಿತ್ತು ಎಂಬ ಮಾಹಿತಿ ಲಭ್ಯವಾಗಿದ್ದು ತಪಾಸಣೆ ಮುಂದುವರೆದಿದೆ.

The post PWD ಎಂಜಿನಿಯರ್ ಏನ್ರಿ ನಿಮ್ಮ ಪ್ಲಾನು?! ಪೈಪ್​ನಲ್ಲೂ ಕಂತೆ ಕಂತೆ ಹಣ..ಬಕೆಟ್​ನಲ್ಲೂ ಹಣ..! appeared first on News First Kannada.

News First Live Kannada