ಇತ್ತೀಚಿಗಷ್ಟೇ ಹುಡುಗರು ಶರ್ಟ್​ಲೆಸ್​ ಆಗಿದ್ರೆ ನಂಗೆ ಇಷ್ಟವಾಗೋದಿಲ್ಲ ಎಂದು ಹೇಳಿದ್ದ ಕರ್ನಾಟಕ ಕ್ರಶ್​ ರಶ್ಮಿಕಾ ಮಂದಣ್ಣ ಇದೀಗ ಮತ್ತೇ ಸುದ್ದಿಯಲ್ಲಿದ್ದಾರೆ. ಟಾಲಿವುಡ್​, ಬಾಲಿವುಡ್​ ಎರಡು ಚಿತ್ರರಂಗದಲ್ಲೂ ಸಖತ್​ ಬ್ಯುಸಿಯಾಗಿರುವ ರಶ್ಮಿಕಾ ಯಾವುದೇ ಏನು ಮಾಡಿದರು ಅದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.

ಸದ್ಯ ಕೊಡಗಿನ ಕ್ಯೂಟಿ ತಮ್ಮ ಗೆಳೆಯ ವಿಜಯ್​ ದೇವರಕೊಂಡ​ ಅವ್ರನ್ನು ಮೀಟ್​ ಮಾಡಲು ಯುಸ್​ಗೆ ಹಾರಲಿದ್ದಾರೆ ಎನ್ನಲಾಗಿದೆ. ಹೌದು ರಶ್ಮಿಕಾ ಮಂದಣ್ಣ ಆಗಾಗ ಬೇರೆ ದೇಶಗಳಿಗೆ ಟೂರ್​ ಹೋಗುತ್ತಲೇ ಇರುತ್ತಾರೆ. ಸದ್ಯ ರಶ್ಮಿಕಾ ಮಂದಣ್ಣ ಯುಎಸ್​ ಗೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಈ ಬಾರಿ ಶೂಟಿಂಗ್​ಗಾಗಿ ಅಲ್ಲ ಬದಲಾಗಿ ತಮ್ಮ ಗೆಳೆಯನನ್ನು ಮೀಟ್​ ಮಾಡಲು.

ಯೆಸ್​ ವಿಜಯ್​ ದೇವರಕೊಂಡ ಮತ್ತು ಪೂರಿ ಜಗನ್ನಾಥ್​ ಕಾಂಬಿನೇಶನ್​ನಲ್ಲಿ ಮೂಡಿ ಬರುತ್ತಿರುವ ಲೈಗರ್​ ಸಿನಿಮಾದ ಶೂಟಿಂಗ್​ ಯುಎಸ್​ನಲ್ಲಿ ನಡೆಯುತ್ತಿದ್ದು, ವಿಜಯ್​ರನ್ನು ಮೀಟ್​ ಮಾಡಲು ರಶ್ಮಿಕಾ ಮಂದಣ್ಣ ಈ ಬಾರಿ ವಿಮಾನ ಹತ್ತಿದ್ದಾರೆ ಎಂಬ ಗಾಸಿಪ್​ಗಳು ಸೌಥ್​ ಸಿನಿ ಇಂಡಸ್ಟ್ರಿಯಲ್ಲಿ ಸುಳಿದಾಡುತ್ತಿವೆ.

ಇದನ್ನೂ ಓದಿ: ಹುಡುಗರೆದೆಗೆ ಮತ್ತೆ ಕಿಚ್ಚಿಟ್ಟ ಕರ್ನಾಟಕ​​ ಕ್ರಶ್; ಶರ್ಟ್​ಲೆಸ್​ ಹುಡುಗರ ಬಗ್ಗೆ ರಶ್ಮಿಕಾ ಹೇಳಿದ್ದೇನು?

News First Live Kannada