ಟಿ20 ವಿಶ್ವಕಪ್ ನಿರಾಸೆ ಬಳಿಕ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಕ್ಲೀನ್‌ಸ್ವೀಪ್ ಮಾಡಿದ ಟೀಮ್ ಇಂಡಿಯಾ ಈಗ ವಿವಾದಕ್ಕೆ ಸಿಲುಕಿದೆ. ಟೀಮ್ ಇಂಡಿಯಾದ ಆಟಗಾರರಿಗೆ ಕಟ್ಟುನಿಟ್ಟಿನ ಡಯೆಟ್ ಯೋಜನೆ ರೂಪಿಸಿದ್ದ ಬಿಸಿಸಿಐ ಮೊದಲಿಗೆ ಹಂದಿ ಮತ್ತು ದನದ ಮಾಂಸ ಸೇವನೆಯನ್ನು ನಿಷೇಧಿಸಿತ್ತು. ಹಾಗೆಯೇ ಹಲಾಲ್ ಮಾಂಸ ಸೇವನೆ ಕಡ್ಡಾಯಗೊಳಿಸಿತ್ತು.

ಇನ್ನು, ಬಿಸಿಸಿಐ ನಡೆ ಇದೀಗ ಕ್ರಿಕೆಟ್ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಜಾತ್ಯಾತೀತ ತಂಡದಲ್ಲಿ ಈ ರೀತಿಯ ಬಲವಂತದ ಹೇರಿಕೆ ಬಗ್ಗೆ ಆಕ್ಷೇಪ ಎತ್ತಿದ್ದರು. ಇದಕ್ಕೆ ಈಗ ಪ್ರತಿಕ್ರಿಯಿಸಿರುವ ಅರುಣ್ ಧುಮಾಲ್ ತಳ್ಳಿಯಾಕಿದ್ದು, ಏನು ತಿನ್ನಬೇಕು, ಏನು ತಿನ್ನಬಾರದು ಎನ್ನುವುದು ಆಟಗಾರರ ಆಯ್ಕೆ ಎಂದು ಹೇಳಿದ್ದಾರೆ.

ಆಹಾರದ ಯೋಜನೆಯಲ್ಲಿ ಆಟಗಾರರಿಗೆ ಬಿಸಿಸಿಐನಿಂದ ಯಾವುದೇ ನಿರ್ದೇಶನ ನೀಡಿಲ್ಲ. ಅಂತಹ ವಿಷಯವನ್ನು ನಮ್ಮ ಅಧಿಕಾರಿಗಳು ಇದುವರೆಗೆ ಚರ್ಚಿಸಿಲ್ಲ. ಇದನ್ನೇ ತಿನ್ನಬೇಕೆಂದು ಆಥವಾ ತಿನ್ನಬಾರದು ಎಂದು ಒತ್ತಾಯ ಮಾಡಿಲ್ಲ. ಆಹಾರದ ಆಯ್ಕೆ ಆಟಗಾರರ ವೈಯಕ್ತಿಕವಾಗಿದೆ, ಬಿಸಿಸಿಐ ಇದರಲ್ಲಿ ಯಾವುದೇ ಪಾತ್ರವಹಿಸುವುದಿಲ್ಲ ಎಂದು ಧುಮಾಲ್ ಹೇಳಿದ್ದಾರೆ.

News First Live Kannada