ಉತ್ತರ ಪ್ರದೇಶ: ಬದುಕಿರುವ ವ್ಯಕ್ತಿಯನ್ನು ಸತ್ತಿದ್ದಾನೆಂದು ಘೋಷಿಸಿ ಶವಾಗಾರದ ಫ್ರೀಜರ್​ನಲ್ಲಿಟ್ಟ ಘಟನೆ ಉತ್ತರ ಪ್ರದೇಶದ ಮೊರದಾಬಾದ್ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.

ಶ್ರೀಕೇಶ್​ ಕುಮಾರ್​ ಎಂಬ ವ್ಯಕ್ತಿ ನವೆಂಬರ್​ 18 ರಂದು ಅಪಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದು. ಅವರಿಗೆ ಚಿಕಿತ್ಸೆ ನಿಡಲಾಗುತ್ತಿತ್ತು.  ಈ ವೇಳೆ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ ನಂತರ ಅವರ ಮೃತದೇಹವನ್ನು ಶವಾಗರದ ಫ್ರೀಜರ್​ನಲ್ಲಿ ಇರಿಸಲಾಗಿತ್ತು. ಬಳಿಕ ಪೊಲೀಸರು ಅಪಘಾತದಲ್ಲಿ ವ್ಯಕ್ತಿಯ ಸಾವಾಗಿರುವುದರಿಂದ ಕಾನೂನಿನ ಪ್ರಕಾರ ಕೇಸ್​​ ದಾಖಲಿಸಿಕೊಂಡು ಪಂಚನಾಮೆ ಮಾಡಲು ಬಂದಿದ್ದು ಈ ವೇಳೆ ವ್ಯಕ್ತಿ ಉಸಿರಾಡುತ್ತಿರುವುದನ್ನು  ಕಂಡು ಬೆಚ್ಚಿ ಬಿದ್ದಿದ್ದಾರೆ.

ಈ ವಿಷಯವನ್ನು ಆಗ ಅವರು ತಕ್ಷಣವೇ ವ್ಯಕ್ತಿಯ ಸಂಬಂಧಿಕರಿಗೆ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಸಂಬಂಧಿಕರು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಈ ಹಂತದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿ ಕೊನೆಯುಸಿರೆಳದಿದ್ದಾರೆ. ಇನ್ನು ಬದುಕಿರುವ ವ್ಯಕ್ತಿಯನ್ನು ಸತ್ತಿದ್ದಾರೆಂದು ಘೋಷಿಸಿದ ವೈದ್ಯ, ಆಸ್ಪತ್ರೆಯ ವಿರುದ್ದ ಮೃತ ವ್ಯಕ್ತಿಯ ಸಂಬಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ  ನಿರ್ಲಕ್ಷ್ಯ ತೋರಿದ ಅವರಿಗೆಲ್ಲ ಸೂಕ್ತ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾರೆ.

News First Live Kannada