ಬೆಂಗಳೂರು: ಇಂದು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಫೀಲ್ಡ್​ಗಿಳಿದಿದ್ದು ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಭ್ರಷ್ಟಾಚಾರ ಆರೋಪಿತ 15 ಅಧಿಕಾರಿಗಳ ನಿವಾಸಗಳ ಮೇಲೆ  68 ಸ್ಥಳಗಳಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಭ್ರಷ್ಟಾಚಾರ ಎಸಗಿರುವವರ ವಿರುದ್ಧ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ.

ಇನ್ನು ಈ ಬಿಗ್​ ಬೇಟೆಯ ಹಿಂದೆ ಸಾಕಷ್ಟು ದಿನಗಳ ಹಿಂದೆ ಮಾಸ್ಟರ್​ ಪ್ಲಾನ್​ ರೂಪಿಸಲಾಗಿದ್ದು ಅದು ಇಂದು ಅನಾವರಣಗೊಂಡಿದೆ. ಎಸಿಬಿಯ ಈ ಪ್ಲಾನ್​ ಹಿಂದಿನ ರೋಚಕತೆಯ ಮಾಹಿತಿ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ.

ಇಂದು ಬೆಳಗ್ಗೆ 6 ಗಂಟೆಗೆ ಏಕಕಾಲದಲ್ಲಿ ಒಟ್ಟು 15 ಅಧಿಕಾರಿಗಳ ವಿರುದ್ಧ ರಾಜ್ಯದ 68 ಕಡೆಗಳಲ್ಲಿ 68 ತಂಡಗಳಿಂದ ದಾಳಿ ನಡೆಸಲಾಗಿದೆ.  ಈ ಸಕ್ಸ್​ಸ್​ಫುಲ್​ ದಾಳಿಗೆ 3 ತಿಂಗಳುಗಳಿಂದ ತಂತ್ರ ಹೆಣೆಯಲಾಗಿತ್ತಂತೆ.ದಾಳಿ ನಡೆಸಬೇಕೆಂದಿರುವ ಒಬ್ಬೊಬ್ಬ ಅಧಿಕಾರಗಳ ಜನ್ಮ ಜಾಲಾಡಿದ ಎಸಿಬಿ ಪ್ರತಿಯೊಬ್ಬ ಅಧಿಕಾರಿಯ ಮಾಹಿತಿಯನ್ನು ಇಂಚಿಂಚಾಗಿ ಕಲೆ ಹಾಕಿತ್ತು. ಆ ಮೂಲಕ ಕೊನೆಯದಾಗಿ 15 ಮಂದಿಯ ಲಿಸ್ಟ್​ ರೆಡಿ ಮಾಡಿ ಬೇಟೆ ಆಡಲು ಮುಹೂರ್ತ ಫಿಕ್ಸ್​ ಮಾಡಲಾಗಿತ್ತು.

ಇದನ್ನೂ ಓದಿ;ಅಬ್ಬಬ್ಬಾ ಅಭಿವೃದ್ಧಿ ಅಧಿಕಾರಿ ಲೀಲೆ ನೋಡಿ; ಎಲ್ಲೆಲ್ಲೂ ಚಿನ್ನಾನೆ ಇಟ್ಟು ಅದೆಷ್ಟು ಅಭಿವೃದ್ಧಿ ಮಾಡವ್ನೆ..!

ಇದನ್ನೂ ಓದಿ;PWD ಎಂಜಿನಿಯರ್ ಏನ್ರಿ ನಿಮ್ಮ ಪ್ಲಾನು?! ಪೈಪ್​ನಲ್ಲೂ ಕಂತೆ ಕಂತೆ ಹಣ..ಬಕೆಟ್​ನಲ್ಲೂ ಹಣ..!

ರಹಸ್ಯ ಕಾಪಾಡಿಕೊಂಡಿದ್ದೆ ರೋಚಕ..!

ಆದರೆ ಮೂರು ತಿಂಗಳುಗಳವರೆಗೆ ಈ ಅಧಿಕಾರಿಗಳ ಮಾಹಿತಿ ಕಲೆ ಹಾಕೋದೇ ದೊಡ್ಡ ಸವಾಲಾಗಿತ್ತು. ಜೊತೆಗೆ ಅದನ್ನು ರಹಸ್ಯವಾಗಿ ಕಾಪಾಡಿಕೊಂಡು ಬರೋದು ಅಷ್ಟೇ ರೋಚಕತೆಯಿಂದ ಕೂಡಿತ್ತು ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಗೌಪ್ಯತೆ ಕಾಪಾಡುವುದು ಸುಲಭದ ಮಾತಾಗಿರಲಿಲ್ಲ ಮೇಲಾಧಿಕಾರಿಗಳು ಯಾವುದೇ ಸಂದರ್ಭದಲ್ಲಿ ಮಾಹಿತಿ ಸೋರಿಕೆಯಾಗಬಾರದೆಂದು ಖಡಕ್​ ಮಾಹಿತಿ ನೀಡಿದ್ದರಂತೆ.

ಇಂದು ಮಧ್ಯರಾತ್ರಿ  3 ಗಂಟೆಗೆ ಆಗಮಿಸಿದ ಅಧಿಕಾರಿಗಳು

ಪ್ರತಿ ಅಧಿಕಾರಿಗೆ ಒಬ್ಬರಿಂದ ಇಬ್ಬರನ್ನು ನೇಮಿಸಿ ಪ್ರತಿನಿತ್ಯ ಮಾಹಿತಿ ಕಲೆ ಹಾಕಲಾಗುತ್ತಿತ್ತು. ಹೀಗೆ ಮಾಹಿತಿ ಕಲೆ ಹಾಕಿದ ನಂತರ ದಾಳಿಗೆ ಸಿದ್ಧತೆ ನಡೆಸಲಾಗಿತ್ತು. ಇಂದು ಮಧ್ಯರಾತ್ರಿ 3 ಗಂಟೆಗೆ ಕಚೇರಿಗೆ ಬಂದಿದ್ದ ಅಧಿಕಾರಿಗಳು 4.30 ಕ್ಕೆ ಎಲ್ಲರು ಒಟ್ಟಿಗೆ ಕಚೇರಿಗಳಿಂದ ತೆರಳಿದ್ದರು. 6 ಗಂಟೆಗೆ ಏಕಕಾಲಕ್ಕೆ ದಾಳಿ ನಡೆಸಬೇಕೆಂದು ಮೇಲಾಧಿಕಾರಿಗಳು ಗ್ರೀನ್​ಸಿಗ್ನಲ್​ ನೀಡಿದ್ದರಂತೆ. ಆ ಪ್ರಕಾರ ನುಗ್ಗಿದ ಎಸಿಬಿ ಭ್ರಷ್ಟರ ಬೆವರಿಳಿಸಿದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ 7 ಕಡೆಗಳಲ್ಲಿ ACB ದಾಳಿ- FDA ಮಾಯಣ್ಣ ನಿವಾಸದಲ್ಲಿ ಅಪಾರ ಪ್ರಮಾಣ ಚಿನ್ನಾಭರಣ ಪತ್ತೆ

 

News First Live Kannada