ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಮರುದಿನವೇ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ಪತ್ನಿ ನೂಪುರ್ ನಗರ್​ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ನವೆಂಬರ್​ 23ರಂದು ನಾಲ್ಕನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಇಂದು ನವೆಂಬರ್​ 24ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ದೆಹಲಿಯ ಫೋರ್ಟಿಸ್​​ ಆಸ್ಪತ್ರೆಯಲ್ಲಿ ಬೆಳಿಗ್ಗೆ 9ಗಂಟೆಗೆ ನೂಪುರ್​ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದಾರೆ.

2012ರಂದು ಭುವನೇಶ್ವರ್ ತಮ್ಮ ಬಾಲ್ಯದ ಗೆಳತಿ ನೂಪುರ್ ನಗರ್​ ಅವರನ್ನು 2017ರ ನವೆಂಬರ್​ 23ರಂದು ವರಿಸಿದ್ದರು. ಭುವನೇಶ್ವರ್​ ಇತ್ತೀಚೆಗೆ ನಡೆದ ನ್ಯೂಜಿಲೆಂಡ್​​​​ ವಿರುದ್ಧದ ಟಿ20 ಸರಣಿಯಲ್ಲಿ 3 ಪಂದ್ಯಗಳಿಂದ 3 ವಿಕೆಟ್ ಪಡೆದಿದ್ದರು. ಇದಕ್ಕೂ ಮೊದಲು ಟಿ20 ವಿಶ್ವಕಪ್​​​​ನಲ್ಲೂ ಕಾಣಿಸಿಕೊಂಡಿದ್ರು.

News First Live Kannada