ತುಮಕೂರು: ಪವರ್ ಸ್ಟಾರ್ ಪುನೀತ್ ಅಗಲಿ ಇಂದಿಗೆ ಒಂದು ತಿಂಗಳು.. ಈ ತಿಂಗಳು ಅಭಿಮಾನಿಗಳ ಪಾಲಿಗೆ ನೋವಿನ ವಸಂತ.. ನೆಚ್ಚಿನ ನಟನನ್ನು ಜೀವಂತವಾಗಿಡಲು ಸಾಮಾಜಿಕ ಕೆಲಸಗಳಲ್ಲಿ ತೊಡಗಿದ್ದಾರೆ.. ಅಪ್ಪು ಮೇಲೆ ತಾವಿಟ್ಟಿದ್ದ ಪ್ರೀತಿಯನ್ನು ತಮ್ಮದೇ ರೀತಿಯಲ್ಲಿ ತೋರಿಸಿಕೊಳ್ಳುತ್ತಿದ್ದಾರೆ.. ಅಂಥಹದ್ದೇ ಅಪರೂಪದ ಅಭಿಮಾನಿಯ ಸ್ಟೋರಿ ಇಲ್ಲಿದೆ.

ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಹಾಡಿನ ಸಾಲುಗಳನ್ನು ಪುನೀತ್ ಅಕ್ಷರಶಃ ನಿಜ ಜೀವನದಲ್ಲೂ ಜೀವಿಸಿದ್ದರು.. ಮಕ್ಕಳು, ಮಹಿಳೆಯರು, ಮನೆಯ ಹಿರಿಯರು ಎಲ್ಲರೂ ಸೇರಿ ಒಟ್ಟಾಗಿ ಕುಳಿತು ನೋಡುವಂತಹ ಚಿತ್ರಗಳ ಜನರ ನೆಚ್ಚಿನ ನಾಯಕರಾಗಿದ್ದರು.. ಅಭಿಮಾನಿಗಳಿಗೂ ತಾವು ಮಾಡುತ್ತಿದ್ದ ಸೇವೆಯನ್ನು, ಕಾರ್ಯಗಳನ್ನ ಮಾಡುವಂತೆ ಪ್ರೇರೇಪಿಸಿದ್ದಾರೆ.. ತನ್ನ ನೆಚ್ಚಿನ ನಟನನ್ನು ಜೀವಂತವಾಗಿಡಲು ಅಪ್ಪು ಅಭಿಮಾನಿಯೊಬ್ಬ ಪುನೀತ್ ಫೋಟೋ ಇಡಿದು ಶಬರಿಮಲೆ ಅಯ್ಯಪ್ಪನ ದರ್ಶನ ಮಾಡಿಸಿದ್ದಾನೆ.. ಅಪ್ಪು ಫೋಟೋವನ್ನ ಮನೆಯಲ್ಲಿಟ್ಟು ಪ್ರತಿದಿನ ಪೂಜೆ ಸಲ್ಲಿಸುತ್ತಿದ್ದಾನೆ.

ತುಮಕೂರು ತಾಲೂಕಿನ ಅಮಲಾಪುರ ಗ್ರಾಮದ ಯುವಕ ದೇವರಾಜು, ಅಪ್ಪು ಫೋಟೋ ಸಹಿತ ಶಬರಿಮಲೈ ಪಾದಯಾತ್ರೆ ಮಾಡಿ ಸುದ್ದಿಯಾಗಿದ್ದ.. ಅಲ್ಲಿಂದ ಮರಳಿದ ದೇವರಾಜು, ತಮ್ಮ ಮನೆಯಲ್ಲಿ ಫೋಟೋ ಇಟ್ಟು ಪೂಜೆ ಸಲ್ಲಿಸ್ತಿದ್ದಾನೆ.. ದೇವರಾಜು ಮನೆಯ ಪಕ್ಕದಲ್ಲಿ ದೇವಸ್ಥಾನ ಶಿಥಿಲಗೊಂಡಿದೆ. ಅದನ್ನು ಕೆಡವಲಾಗಿ, ಇದೀಗ ಮತ್ತೊಮ್ಮೆ ಹೊಸದಾಗಿ ದೇವಾಲಯ ನಿರ್ಮಾಣ ಮಾಡಲಾಗ್ತಿದೆ.. ಹೀಗಾಗಿ ದೇವರಾಜು ಅವರ ಮನೆಯ ಕೋಣೆಯೊಂದರಲ್ಲಿ ದೇವರನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಈ ದೇವಸ್ಥಾನದ ಶನೇಶ್ವರ-ಮುನೇಶ್ವರ ದೇವರ ಪಕ್ಕದಲ್ಲೇ ಅಪ್ಪು ಫೋಟೋ ಇಟ್ಟು ಪೂಜೆ ಮಾಡಲಾಗುತ್ತಿದೆ.

ವಿಶೇಷ ಅಂದ್ರೆ ದೇವರಾಜು ಅವರ ಇಡೀ ಕುಟುಂಬ ವರನಟ ಡಾ.ರಾಜಕುಮಾರ್ ಕುಟುಂಬದವರ ಅಭಿಮಾನಿಗಳು. ರಾಜಕುಮಾರ್ ಕುಟುಂಬದ ಎಲ್ಲಾ ನಟರ ಚಿತ್ರಗಳು ಇವರಿಗೆ ಪಂಚಪ್ರಾಣ.. ಹೀಗಾಗಿ ಈಗ ನಿರ್ಮಾಣವಾಗ್ತಿರುವ ದೇವಸ್ಥಾನದ ಗರ್ಭಗುಡಿಯಲ್ಲಿ ಅಪ್ಪು ವಿಗ್ರಹವನ್ನೂ ನಿರ್ಮಿಸಿ ಪೂಜೆ ಮಾಡಲು ಚಿಂತನೆ ನಡೆಸಿದ್ದಾರೆ.

ಒಟ್ನಲ್ಲಿ ಅಭಿಮಾನಿಗಳು ದೇಶದುದ್ದಕ್ಕೂ ತಾವು ಹೋಗುತ್ತಿರುವ ಸ್ಥಳಗಳಿಗೆ ಪುನೀತ್​ ಭಾವಚಿತ್ರಗಳನ್ನು ಕರೆದೊಯ್ದು ಗೌರವ ಸಲ್ಲಿಸುತ್ತಿದ್ದಾರೆ. ಸಮಾಜಮುಖಿ ಕಾರ್ಯಗಳ ಮುಖಾಂತರ ಅಭಿಮಾನಿಗಳು ಅಪ್ಪುವನ್ನು ಜೀವಂತವಾಗಿರಿಸುತ್ತಿದ್ದಾರೆ..

ವಿಶೇಷ ವರದಿ-ಮಧು ಇಂಗಳದಾಳ್, ನ್ಯೂಸ್ ಫಸ್ಟ್, ತುಮಕೂರು.

News First Live Kannada