ಅವಕಾಶ ಸಿಕ್ಕಿದ್ದೇ ಅದೃಷ್ಟದಲ್ಲಿ.. ಅದು ಕೂಡ ಸಬ್​​ ಕೀಪರ್​​​ ಆಗಿ.. ಆದ್ರೆ, ಆ ಸಿಕ್ಕ ಅವಕಾಶದಲ್ಲಿ ನೀಡಿರುವ ಪ್ರದರ್ಶನ ಇದೀಗ ಕ್ರಿಕೆಟ್​​ ದಿಗ್ಗಜರ ಗಮನ ಸೆಳೆದಿದೆ. ಜೊತೆಗೆ ಅದೇ ಅಮೋಘ ಪ್ರದರ್ಶನ ಇಬ್ಬರ ಸ್ಥಾನಕ್ಕೂ ಕುತ್ತು ತಂದಿದೆ. ಜೊತೆಗೆ ಟೆಸ್ಟ್​​ ತಂಡದಲ್ಲಿ ಈತನಿಗೆ ಅವಕಾಶ ಫಿಕ್ಸ್​ ಅನ್ನೋ ಟಾಕ್​ ಕೂಡ ಸ್ಟಾರ್ಟ್​ ಆಗಿದೆ.

ಇಂಡೋ-ಕಿವೀಸ್​​ ಮೊದಲ ಟೆಸ್ಟ್​​​​ನಲ್ಲಿ ಕ್ರಿಕೆಟ್​​ ಪಂಡಿತರ ಗಮನವನ್ನ ಹೆಚ್ಚು ಸೆಳೆದಿದ್ದು, ಸಬ್​ ವಿಕೆಟ್​ ಕೀಪರ್​​ ಜವಾಬ್ದಾರಿ ಹೊತ್ತಿರೋ KS ಭರತ್​. ಅದೃಷ್ಟದಲ್ಲಿ ಸಿಕ್ಕ ಅವಕಾಶದಲ್ಲಿ ವಿಕೆಟ್​​​​ ಹಿಂದೆ ನಿಂತು​ ಚಾಣಾಕ್ಷ ಕೀಪಿಂಗ್​ ಮಾಡಿರೋ​ ಆಂಧ್ರದ ಭರತ್​, ಕ್ರಿಕೆಟ್​ ಲೋಕದಲ್ಲಿ ಹೊಸ ಟಾಕ್​ಗೆ ಕಾರಣವಾಗಿದ್ದಾರೆ. ಪ್ಲೇಯಿಂಗ್​ ಇಲೆವೆನ್​ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ವೃದ್ಧಿಮಾನ್​ ಸಾಹಗೆ ಕುತ್ತಿಗೆ ನೋವು ಕಾಣಿಸಿಕೊಂಡ ಕಾರಣ, 3ನೇ ದಿನದಾಟದಲ್ಲಿ ಮೈದಾನಕ್ಕೆ ಇಳಿಯಲಿಲ್ಲ. ಪರಿಣಾಮ ಗ್ಲೌಸ್​​ ತೊಟ್ಟ ಕಣಕ್ಕಿಳಿದ ಭರತ್​, ಇಡೀ ವಿಶ್ವ ಗಮನ ಸೆಳೆದಿದ್ದಾರೆ. ಜೊತೆಗೆ 2ನೇ ಟೆಸ್ಟ್​​​ಗೂ ಸ್ಥಾನ ಫಿಕ್ಸ್​​ ಮಾಡಿಕೊಂಡಿದ್ದಾರೆ.

Image

ಸಾಹಗೆ ಬೆಸ್ಟ್​ ರಿಪ್ಲೇಸ್​, ಪಂತ್​ಗೂ ಟಫ್​ ಕಾಂಪಿಟೇಷನ್​.​.!
ಯೆಸ್​..! ಸಾಹ ಮತ್ತು ರಿಷಭ್​​​ ಪಂತ್​​​​ ಸ್ಥಾನಕ್ಕೆ ಕುತ್ತು ತಂದಿರೋದು ಭರತ್​​ರ ಚಾಣಾಕ್ಷ ಕೀಪಿಂಗ್. ಸಾಹ ಅನುಭವಿಯಾದ್ರೂ, ಅವರ ವಯಸ್ಸೇ ಮುಂದಿನ ದಿನದಲ್ಲಿ ತಂಡದಿಂದ ದೂರವಿಡುವಂತೆ ಮಾಡ್ತಿದೆ. ಇನ್ನು ಟೆಸ್ಟ್​​​​​ನಲ್ಲಿ​ ಅದ್ಭುತ ಬ್ಯಾಟಿಂಗ್​​​​​​​​​​​​ ಟ್ರ್ಯಾಕ್​​​ ರೆಕಾರ್ಡ್​​​ ಹೊಂದಿದ್ರೂ, ವಿಕೆಟ್​ ಕೀಪಿಂಗ್​​ನಲ್ಲಿ ಪಂತ್ ಹಿನ್ನಡೆ ಅನುಭವಿಸ್ತಿದ್ದಾರೆ. ವಿಕೆಟ್​ ಕೀಪಿಂಗ್​ ಟೆಕ್ನಿಕ್​ನಲ್ಲಿ ಪಂತ್​ ವೀಕ್​ ಆಗಿದ್ದಾರೆ. ಆದ್ರೆ, ಈ ವಿಚಾರದಲ್ಲಿ ಹೊಸ ಭರವಸೆ ಮುಡಿಸಿರೋ ಭರತ್​, ಸಾಹ ಮತ್ತು ಪಂತ್ ಇಬ್ಬರ​​​ ಸ್ಥಾನವನ್ನ ಸಬ್ ಕೀಪರ್​​ ಆಗಿಯೇ​ ಒಮ್ಮೆಗೆ ಅಲುಗಾಡಿಸಿಬಿಟ್ಟಿದ್ದಾರೆ.

ಕ್ಯಾಚ್​​​, ಸ್ಟಂಪ್​, ಕ್ಯಾಚ್​.. ಭರತ್​​ ಬೊಂಬಾಟ್​ ವಿಕೆಟ್​ ಕೀಪಿಂಗ್​..!
ಒಬ್ಬ ಆಟಗಾರನ ಪ್ರದರ್ಶನ ಹೇಗಿದೆ ಅನ್ನೋದನ್ನ ದೀರ್ಘಕಾಲ ಕಾದು ನೋಡಬೇಕಿಲ್ಲ. ಒಂದೇ ಪಂದ್ಯದಲ್ಲಿ ಆತನ ಟೆಕ್ನಿಕ್ಸ್​​, ಸ್ಕಿಲ್ಸ್​​​, ಆಟದಲ್ಲಿರಬೇಕಾದ ಪ್ರಸೆನ್ಸ್​​.. ಇವುಗಳನ್ನ ಗಮನಿಸಿದರೆ ಸಾಕು. ಆತ ಹೇಗೆ ಪ್ರದರ್ಶನ ನೀಡ್ತಾನೆ ಅನ್ನೋದು ತಿಳಿದುಬಿಡುತ್ತೆ. ಈ ಎಲ್ಲಾ ಲಕ್ಷಣಗಳಿಗೂ ಭರತ್​ ಉದಾಹರಣೆಯಾಗಿ ನಿಂತಿದ್ದಾರೆ. ವಿಲ್​ಯಂಗ್​​ ವಿಕೆಟ್​ ಕಬಳಿಸಲು ಭರತ್​ ಹಿಡಿದ ಕ್ಯಾಚೇ ಇದಕ್ಕೆ ಸಾಕ್ಷಿಯಾಗಿದೆ.

Image

ಅಶ್ವಿನ್​ ಬೌಲಿಂಗ್​ನಲ್ಲಿ ವಿಲ್​​ಯಂಗ್​​​​ರ ಬ್ಯಾಟ್​​​ಗೆ​ ತಾಗಿದ ಚೆಂಡು ನೇರವಾಗಿ ಕೀಪರ್​​ ಭರತ್​ ಕೈ ಸೇರುತ್ತೆ. ಆದರೆ ಅಂಪೈರ್​ ಮಾತ್ರ​ ನಾಟೌಟ್​ ತೀರ್ಪು ನೀಡ್ತಾರೆ. ಅದಾದ ಮರುಕ್ಷಣವೇ ಭರತ್​, ರಿವಿವ್ಯೂ ತೆಗೆದುಕೊಳ್ಳುವಂತೆ ನಾಯಕ ರಹಾನೆಗೆ ಕೋರ್ತಾರೆ. ತೀರ್ಪು ಮರುಪರಿಶೀಲನೆಯಲ್ಲಿ ​​​​ಚೆಂಡು ಬ್ಯಾಟ್​​ ತಾಗಿರೋದು ಕನ್​ಫರ್ಮ್​​ ಆಗುತ್ತೆ. ಆಟದಲ್ಲಿರಬೇಕಾದ ಪ್ರಸೆನ್ಸ್ ಇದೇ ಬೆಸ್ಟ್​​ ಎಕ್ಸಾಂಪಲ್​. ಇಷ್ಟೇ ಅಲ್ಲ.. ಇನ್ನ ಸಖತ್​​ ಟಫ್​​​ ಆಗಿದ್ದ ರಾಸ್​ ಟೇಲರ್​​ ಕ್ಯಾಚ್​​, ಟಾಮ್​ ಲಾಥಮ್​ ಸ್ಟಂಪಿಂಗ್​ ಕೂಡ ಭರತ್​ರ ಟೆಕ್ನಿಕ್ಸ್​​ & ಸ್ಕಿಲ್ಸ್​​​ಗೆ ಸಾಕ್ಷಿಯಾಗಿವೆ. ಆದ್ರೆ, ಪಂತ್​​​ DRS ಹಾಗೂ ಕೀಪಿಂಗ್​ ಸ್ಕಿಲ್​ ವಿಚಾರದಲ್ಲಿ ಹಿಂದುಳಿದಿರೋದು ಪದೇ ಪದೇ ಪ್ರೂವ್​ ಆಗಿದೆ.

ಫಸ್ಟ್​ ಕ್ಲಾಸ್​ ಕ್ರಿಕೆಟ್​​ನಲ್ಲೂ ಬ್ಯಾಟಿಂಗ್​, ಕೀಪಿಂಗ್​​​ನಲ್ಲಿ ಮೋಡಿ..!
ಸಬ್​ ಫೀಲ್ಡರ್​ ಮೋಡಿ ಮಾಡಿರುವ ಭರತ್​, ಫಸ್ಟ್​ ಕ್ಲಾಸ್ ಕ್ರಿಕೆಟ್​​​​ನಲ್ಲೂ ಜಾದೂ ಮಾಡಿದ್ದಾರೆ. ಪ್ರಥಮ ದರ್ಜೆಯಲ್ಲಿ 270 ಕ್ಯಾಚ್​​, 31 ಸ್ಟಂಪ್, ಲೀಸ್ಟ್​ ಎ ಕ್ರಿಕೆಟ್​​​ನಲ್ಲಿ 54 ಕ್ಯಾಚ್​, 11 ಸ್ಟಂಪ್​ ಮಾಡಿದ ಸಾಧನೆ ಭರತ್​​ಗಿದೆ. ಜೊತೆಗೆ ಬ್ಯಾಟಿಂಗ್​ನಲ್ಲೂ ಮೋಡಿ ಮಾಡಿದ್ದಾರೆ. ಹೀಗಾಗಿ ಆಯ್ಕೆಗಾರರ ಗಮನ ಸೆಳೆದಿರೋ ಭರತ್​​, ಪಂತ್​​ಗೆ ಕಾಂಪಿಟೇಟರ್​ ಆಗಿದರ ಜೊತೆಗೆ, ಸಾಹಗೆ ಶಾಶ್ವತವಾಗಿ ಟೆಸ್ಟ್ ತಂಡದಿಂದ ಮುಕ್ತಿ ನೀಡಲು ಸಿದ್ಧರಾಗಿದ್ದಾರೆ.

The post ಭರತ್ ಬೊಂಬಾಟ್ ಕೀಪಿಂಗ್; ಇಬ್ಬರು ಆಟಗಾರರಿಗೆ ಶುರುವಾಯ್ತು ಭಯ..! appeared first on News First Kannada.

News First Live Kannada