ಗದಗ: ವಿದ್ಯುತ್ ಅವಘಡದಿಂದ 8 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಬ್ಬು ರೈತನ ಕಣ್ಣೆದುರಲ್ಲಿಯೇ ಸುಟ್ಟು ಕರಕಲಾದ ಘಟನೆ ಜಿಲ್ಲೆಯ ರೋಣ ತಾಲೂಕಿನ ಬಿ.ಎಸ್.ಬೆಲೇರಿ ಗ್ರಾಮದಲ್ಲಿ ನಡೆದಿದೆ.

ಶಾರ್ಟ್​ ಸರ್ಕೂಟ್​ನಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದ್ದು ಗ್ರಾಮದ ಖ್ಯಾಡದ, ಎಂಬ ಸಹೋದರರಿಗೆ ಸೇರಿದ್ದ ಕಬ್ಬು ಬೇಳೆ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ನಾಶವಾಗಿದೆ. ಪ್ರತಿ ಎಕರೆಗೆ 40 ಸಾವಿರ ರೂಪಾಯಿಯಂತೆ ಇದುವರೆಗೆ 3.20 ಲಕ್ಷ ಖರ್ಚು ಮಾಡಿದ್ದು ಸಹೋದರರು ಕಂಗಾಲಾಗಿದ್ದಾರೆ. ಇನ್ನು ಎಷ್ಟೇ ಫೋನ್​ ಮಾಡಿದರು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿಲ್ಲ ಎಂದು ಅನ್ನದಾತರು ಆಕ್ರೋಶ ಹೊರಹಾಕಿದ್ದಾರೆ.

News First Live Kannada