ಬೆಂಗಳೂರು: 58 ನಗರ -ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಸದ್ಯದ ಹಾಲಿ ಸದಸ್ಯರ ಅವಧಿ ಮುಕ್ತಾಯ ಹಿನ್ನೆಲೆ ರಾಜ್ಯ ಚುನಾವಣೆ ಆಯೋಗ ಚುನುವಾಣೆ ನಡೆಸುವಂತೆ ಘೋಷಿಸಿದೆ. ಡಿಸೆಂಬರ್​ 27ರಂದು ಚುನಾವಣೆ ನಡೆಯಲಿದೆ ಎಂದು ಆಯೋಗ ತಿಳಿಸಿದೆ.

ಡಿಸೆಂಬರ್‌ 27ರಂದು ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯಲಿದ್ದು 5 ನಗರಸಭೆ, 19 ಪುರಸಭೆ, 34 ಪಟ್ಟಣ ಪಂಚಾಯತ್​, ಸ್ಥಳೀಯ ಸಂಸ್ಥೆಗಳ 1,185 ವಾರ್ಡ್​ಗಳಿಗೆ ಮತದಾನ ನಡೆಯಲಿದೆ  ಎಂದು ಆಯೋಗ ಮಾಹಿತಿ ನೀಡಿದೆ. ನಾಮಪತ್ರ ಸಲ್ಲಿಸಲು ಡಿಸೆಂಬರ್‌ 15 ಕೊನೆಯ ದಿನವಾಗಿದ್ದು ನಾಮಪತ್ರ ವಾಪಸ್ ಪಡೆಯಲು ಡಿಸೆಂಬರ್​ 18 ಕೊನೆಯ ದಿನ. ಇನ್ನು ಫಲಿತಾಂಶ ಡಿಸೆಂಬರ್​ 30 ರಂದು ಅನೌನ್ಸ್​ ಆಗಲಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

 

 

 

News First Live Kannada