ತುಮಕೂರು: ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಜಲಾಶಯದ ಹೊರ ಹರಿಯವ ಹೆಚ್ಚಾದ ಹಿನ್ನೆಲೆಯಲ್ಲಿ ಕೊಚ್ಚಿ ಹೋಗಿದ್ದ ನಾಲ್ವರಲ್ಲಿ ಇಂದು ಇಬ್ಬರ ಮೃತದೇಹ ಪತ್ತೆಯಾಗಿದೆ.

ಫರ್ವೀನ್ ತಾಜ್ (23), ಸಾದೀಯಾ (17), ರಾಜು (32), ಅಪ್ಪು (20) ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಇವರೆಲ್ಲಾ ಕುಣಿಗಲ್ ತಾಲೂಕಿನ ಯಡಿಯೂರು ಹಾಗೂ ಕುಣಿಗಲ್ ಪಟ್ಟಣದವರಾಗಿದ್ದಾರೆ. ಏಕಾಏಕಿ ಜಲಾಶಯದಿಂದ ಹೊರ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಶಿಂಷಾ ನದಿಯಲ್ಲಿ ಪ್ರವಾಹ ಉಂಟಾಗಿತ್ತು.

ವಿಷಯ ಗೊತ್ತಾಗುತ್ತಿದ್ದಂತೆ ಅಗ್ನಿಶಾಮ ಸಿಬ್ಬಂದಿ ಹಾಗೂ ಎನ್.ಡಿ.ಆರ್.ಎಫ್ ಪಡೆ ರಕ್ಷಣಾ ಕಾರ್ಯಚರಣೆಗೆ ಮುಂದಾಗಿತ್ತು. ಇದೀಗ ಇಬ್ಬರ ಮೃತದೇಹವನ್ನ ಹುಡುಕಿ ಹೊರ ತರಲಾಗಿದೆ. ಮತ್ತಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

News First Live Kannada