ಒಟಿಟಿಯಲ್ಲಿ ರಿಲೀಸ್​ ಆದ ‘ಕೋಟಿಗೊಬ್ಬ 3’ ಚಿತ್ರಕ್ಕೆ ಬರುತ್ತಿದೆ ಉತ್ತಮ ಪ್ರತಿಕ್ರಿಯೆ

ಕೋಟಿಗೊಬ್ಬ 3

ಕಿಚ್ಚ ಸುದೀಪ್​ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಕನ್ನಡ ಮಾತ್ರವಲ್ಲದೆ, ಬೇರೆ ಭಾಷೆಯಲ್ಲೂ ಅವರಿಗೆ ಅಭಿಮಾನಿ ಬಳಗ ಇದೆ. ಈ ಕಾರಣಕ್ಕೆ ಅವರ ಸಿನಿಮಾಗೆ ಪರಭಾಷೆಯಲ್ಲೂ ಬೇಡಿಕೆ ಇದೆ. ಇತ್ತೀಚೆಗೆ ‘ಕೋಟಿಗೊಬ್ಬ 3’ ಸಿನಿಮಾ ಒಳ್ಳೆಯ ಕಲೆಕ್ಷನ್​ ಮಾಡಿತ್ತು. ಈಗ ಈ ಸಿನಿಮಾ ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ರಿಲೀಸ್​ ಆಗಿದೆ. ಪರ ದೇಶಗಳಲ್ಲಿ ಇದ್ದುಕೊಂಡು ಈ ಸಿನಿಮಾ ನೋಡೋಕೆ ಸಾಧ್ಯವಾಗದೆ ಇದ್ದವರು, ಒಟಿಟಿಯಲ್ಲಿ ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.

ಕಿಚ್ಚ ಸುದೀಪ್​ ನಟನೆಯ ಈ ಸಿನಿಮಾ ಸಾಕಷ್ಟು ಆ್ಯಕ್ಷನ್​ ದೃಶ್ಯಗಳನ್ನು ಹೊಂದಿದೆ. ಸುದೀಪ್​ ಅವರು ಡಬಲ್ ರೋಲ್​ನಲ್ಲಿ  ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಪ್ರೇಕ್ಷಕರಿಗೆ ಸಖತ್​ ಥ್ರಿಲ್​ ನೀಡಿತ್ತು. ಕೆಲವರು ಎರಡು ಬಾರಿ ಚಿತ್ರಮಂದಿರದತ್ತ ಮುಖ ಮಾಡಿದ್ದರು. ಇನ್ನೂ ಕೆಲವರು ಕೊವಿಡ್​ಗೆ ಭಯ ಬಿದ್ದು ಮನೆಯಲ್ಲೇ ಇದ್ದರು. ಇದರಿಂದ ಸಿನಿಮಾ ನೋಡೋಕೆ ಆಗಿರಲಿಲ್ಲ. ‘ಕೋಟಿಗೊಬ್ಬ 3’ ಸಿನಿಮಾ ನವೆಂಬರ್​ 23ರಂದು ಅಮೇಜಾನ್ ಪ್ರೈಮ್​ನಲ್ಲಿ ಪ್ರೀಮಿಯರ್​ ಆಗಿದೆ.

ಅಭಿಮಾನಿಯೋರ್ವ ಟ್ವಿಟರ್​ನಲ್ಲಿ ಅಮೇಜಾನ್​ ಪ್ರೈಮ್​ ಹೆಲ್ಪ್​ ಡೆಸ್ಕ್​ಗೆ ‘ಕೋಟಿಗೊಬ್ಬ 3’ ಯಾವಾಗ ರಿಲೀಸ್​ ಆಗುತ್ತದೆ ಎಂದು ಪ್ರಶ್ನೆ ಮಾಡಿದ್ದ. ಅದಕ್ಕೆ ಅಮೇಜಾನ್​ ಪ್ರೈಮ್​ ವಿಡಿಯೋ ಉತ್ತರ ನೀಡಿತ್ತು. ನವೆಂಬರ್ 23ಕ್ಕೆ ಸಿನಿಮಾ ರಿಲೀಸ್​ ಮಾಡಲಾಗುತ್ತಿದೆ ಎಂದು ಹೇಳಿತ್ತು.

‘ಕೋಟಿಗೊಬ್ಬ 3’ ಸಿನಿಮಾ ರಿಲೀಸ್​ ವಿಳಂಬವಾದರೂ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್​ ಮಾಡಿತ್ತು. ಅನೇಕ ಕಡೆಗಳಲ್ಲಿ ಸಿನಿಮಾ ಹೌಸ್​ ಫುಲ್​ ಪ್ರದರ್ಶನ ಕಂಡಿತ್ತು. ರಾಜ್ಯಾದ್ಯಂತ ನೂರಾರು ಚಿತ್ರಮಂದಿರಗಳಲ್ಲಿ ತೆರೆಕಂಡ ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸಿತ್ತು. ಮೊದಲ ದಿನ ‘ಕೋಟಿಗೊಬ್ಬ 3’ ಬರೋಬ್ಬರಿ 12.5 ಕೋಟಿ ರೂಪಾಯಿ ಗಳಿಸಿತ್ತು. ನಾಲ್ಕು ದಿನಕ್ಕೆ ಸಿನಿಮಾ ಬರೋಬ್ಬರಿ 40.5 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು.

ಇದನ್ನೂ ಓದಿ: ಒಟಿಟಿಯಲ್ಲಿ ಕೋಟಿಗೊಬ್ಬ 3 ಬಿಡುಗಡೆ ಯಾವಾಗ?; ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ ಚಿತ್ರಗಳ ಪಟ್ಟಿ ಇಲ್ಲಿದೆ

ಅಮೇರಿಕದ ಈ ಒಂದು ವರ್ಷದ ಮಗು ತಿಂಗಳಿಗೆ ರೂ 75,000 ಗಳಿಸುತ್ತದೆ ಅಂದರೆ ನೀವು ನಂಬಲೇಬೇಕು!

TV9 Kannada