ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ ರಾಜಕೀಯದಿಂದ ನಿವೃತ್ತಿ ಹೊಂದಿದ ನಂತರ ಸಿನಿಮಾರಂಗದಲ್ಲಿ ಫುಲ್​ ಬ್ಯುಸಿಯಾಗಿದ್ದಾರೆ. ರಾಜಕೀಯದಿಂದ ಸಾಕಷ್ಟು ವರ್ಷಗಳ ಕಾಲ ಸಿನಿಮಾಗಳನ್ನು ಮಾಡಲು ಸಾಧ್ಯವಾಗಿರಲಿಲ್ಲ, ಅತ್ತ ರಾಜಕೀಯದಲ್ಲೂ ಸಂಪೂರ್ಣ ಯಶಸ್ವಿಯಾಗಲಿಲ್ಲ. ಇದರಿಂದ ಮತ್ತೆ ಸಿನಿಮಾ ಕಡೆ ಮುಖ ಮಾಡಿದ ಚಿರಂಜೀವಿ, ‘ಖೈದಿ 150’ ಮೂಲಕ  ಸೆಕೆಂಡ್​ ಇನಿಂಗ್ಸ್​ ಪ್ರಾರಂಭ ಮಾಡಿದ್ದಾರೆ.

ಖೈದಿ 150 ಸಿನಿಮಾ ತಮಿಳಿನ ಸೂಪರ್​ ಸ್ಟಾರ್​ ವಿಜಯ್​ ನಟನೆಯ ‘ಕತ್ತಿ’ ಸಿನಿಮಾದ ರಿಮೇಕ್​. ಸದ್ಯ ಚಿರಂಜೀವಿ ಸಾಲು ಸಾಲು ಸಿನಿಮಾಗಳಳ್ಲಿ ಬ್ಯುಸಿಯಾಗಿದ್ದು, ಆದಷ್ಟು ಬೇಗ ಸಿನಿಮಾಗಳನ್ನು ಮಾಡಲು ನಿರ್ಧಾರ ಮಾಡಿದ್ದಾರಂತೆ. ಮಲಯಾಳಂನಲ್ಲಿ ಮೋಹನ್​ ಲಾಲ್ ನಟಿಸಿದ್ದ ‘ಲೂಸಿಫರ್’​ ಸಿನಿಮಾವನ್ನು ಚಿರಂಜೀವಿ ‘ಗಾಡ್​ ಫಾದರ್’​ ಆಗಿ ರೀಮೇಕ್​ ಮಾಡುತ್ತಿದ್ದಾರೆ. ಅಜಿತ್​ ಕುಮಾರ್​ ನಟನೆಯ ‘ವೇದಾಲಂ’ ಸಿನಿಮಾವನ್ನು ‘ಭೋಳಾ ಶಂಕರ’ ಹೆಸರಿನಲ್ಲಿ ರೀಮೇಕ್​ ಮಾಡುತ್ತಿದ್ದಾರೆ.

ಈ ನಡುವೆ ಮತ್ತೊಂದು ರಿಮೇಕ್​ ಸಿನಿಮಾಗೆ ಗ್ರೀನ್​ ಸಿಗ್ನಲ್​ ನೀಡಿದ್ದಾರೆ ಚಿರಂಜೀವಿ. ಕೆ. ಎಸ್. ಬಾಬಿ ನಿರ್ದೇಶನದಲ್ಲಿ ಮೂಡಿಬರಲಿರುವ ಸಿನಿಮಾದಲ್ಲಿ ಚಿರು ದ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಇದು ಯಾವ ಸಿನಿಮಾದ ರೀಮೇಕ್​ ಎಂದು ಇನ್ನು ಮಾಹಿತಿ ನೀಡಿಲ್ಲ. ಜೊತೆಗೆ ಸಾಕಷ್ಟು ರೀಮೇಕ್​ ಸಿನಿಮಾಗಳ ಮೊರೆ ಹೋಗಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಮೂಲಗಳ ಪ್ರಕಾರ ಚಿರು ಸುಮ್ಮನೆ ಕಥೆ ಕೇಳಿ ಸಮಯ ವ್ಯರ್ಥ ಮಾಡುವುದಕ್ಕಿಂತ, ಸಿನಿಮಾಗಳನ್ನು ಮಾಡುತ್ತಲೇ ಕಥೆ ಕೇಳುವುದು, ಒಂದು ವೇಳೆ ಕಥೆ ಇಷ್ಟ ಆದರೆ ಮಾಡುವುದು.

ಈ ಮಧ್ಯೆ ರಿಮೇಕ್​ಗಳನ್ನು ಮಾಡುವುದು ಉತ್ತಮ ಎಂದು ಭಾವಿಸಿದ್ದಾರಂತೆ. ಸದ್ಯ ‘ಆಚಾರ್ಯ’ ಸಿನಿಮಾ ಒಂದೇ ಚಿರು ಅವರ ಸ್ವಮೇಕ್ ಸಿನಿಮಾ.​ ಚಿರಂಜೀವಿ ನಟನೆಯ ಆಚಾರ್ಯ ಸಿನಿಮಾಗೆ ಕೊರಟಾಲ ಶಿವ ಆ್ಯಕ್ಷನ್​ ಕಟ್​ ಹೇಳಿದ್ದು, ಆಚಾರ್ಯ ಸಿನಿಮಾದಲ್ಲಿ ರಾಮ್​ಚರಣ್​ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಆಚಾರ್ಯ ಸಿನಿಮಾ ಶೂಟಿಂಗ್​ ಮುಗಿಸಿ ಬಿಡುಗಡೆಗೆ ಸಿದ್ಧವಾಗಿದೆ.

News First Live Kannada