ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ಎನ್ನಲಾಗಿರೋ ಆಡಿಯೋ ವಿಚಾರ ಬಹಿರಂಗವಾಗ್ತಿದ್ದಂತೆ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಸಿಎಂ ಬಿ.ಎಸ್​.ಯಡಿಯೂರಪ್ಪ ಬದಲಾವಣೆ ಚರ್ಚೆ ಜೋರಾಗಿದೆ.

2023 ವಿಧಾನಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು ಯೋಜನೆಗಳನ್ನು ರೂಪಿಸಲಾಗಿದ್ದು, ಹೊಸ ಸಿಎಂ, ಹೊಸ ಕ್ಯಾಬಿನೇಟ್​ ಜೊತೆಗೆ ಹೊಸ 5ಡಿ ಸೂತ್ರವನ್ನು ಹೆಣೆಯಲಾಗಿದೆ.

ಹಾಗಿದ್ರೆ, ಏನದು 5ಡಿ ಸೂತ್ರ ಅಂತಾ ನೋಡುವುದಾದರೆ, ಸಂಪುಟದಲ್ಲಿ ಐವರು ಡಿಸಿಎಂ ನೇಮಕ ಮಾಡಲು ಚಿಂತನೆ ನಡೆಸಲಾಗಿದೆಯಂತೆ. ಚುನಾವಣೆಯನ್ನು ಮುಂದಿಟ್ಟುಕೊಂಡೆ ಸಿಎಂ ಬದಲಾವಣೆಗೆ ಮುಂದಾಗಿರುವ ಹೈಕಮಾಂಡ್​​, ಮುಂದಿನ ಚುನಾವಣೆಯ ತಯಾರಿಗೂ ಈಗಿನಿಂದಲೇ ಮುಂದಾಗಿದೆ. ಇದರಂತೆ ಐವರು ಡಿಸಿಎಂ ನೇಮಕ ಮಾಡಿ, ಪ್ರತಿ ಸಚಿವ ಹಾಗೂ ಪ್ರತಿ ಡಿಸಿಎಂಗೂ ಪ್ರತ್ಯೇಕ ಟಾಸ್ಕ್​ ನೀಡಲಾಗುತ್ತದೆ ಎನ್ನಲಾಗಿದೆ.

ಕರ್ನಾಟಕದಲ್ಲೂ ಕೇರಳ ಮಾದರಿ ಕ್ಯಾಬಿನೇಟ್​​..
ರಾಜ್ಯದಲ್ಲಿ ಸಿಎಂ ಬದಲಾವಣೆ ಆಗೋದು ಬಹುತೇಕ ಖಚಿತ ಎನ್ನಲಾಗಿದ್ದು, ಒಂದೊಮ್ಮೆ ಸಿಎಂ ಬದಲಾದರೇ ಕರ್ನಾಟಕದಲ್ಲಿ ಕೇರಳ ಮಾದರಿಯಲ್ಲಿ ಕ್ಯಾಬಿನೇಟ್​ ರಚನೆ ಮಾಡುತ್ತಾರೆ ಎನ್ನಲಾಗಿದೆ. 2021ರ ವಿಧಾನಸಭಾ ಚುನಾವಣೆಯಲ್ಲೊ ಮತ್ತೊಮ್ಮೆ ಸಿಎಂ ಆಗಿ ಪಿಣರಾಯಿ ವಿಜಯನ್​​ ನೇಮಕವಾದ ಸಂದರ್ಭದಲ್ಲಿ ಈ ಹಿಂದೆ ಸಚಿವ ಸ್ಥಾನ ಪಡೆದಿದ್ದ ಎನ್ನಾ ಹಿರಿಯರನ್ನು ಸಂಪುಟದಿಂದ ಕೈಬಿಟ್ಟು ಸಂಪೂರ್ಣವಾಗಿ ಹೊಸ ಕ್ಯಾಬಿನೇಟ್ ರಚನೆ ಮಾಡಿದ್ದರು. ಬಿಜೆಪಿ ಹೈಕಮಾಂಡ್​ ಕೂಡ ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಸಂಪುಟ ರಚನೆ ಮಾಡಿ, ಈ ಹಿಂದೆ ಸಚಿವರಾಗಿದ್ದವರಿಗೆ ಪಕ್ಷ ಸಂಘಟನೆಯ ಜವಾಬ್ದಾರಿ ನೀಡಲಾಗುತ್ತದೆಯಂತೆ.

The post 2023ರ ಚುನಾವಣೆ ಗುರಿ; ಸಿಎಂ ಬದಲಾವಣೆ ಖಚಿತ ಬೆನ್ನಲ್ಲೇ ಹೊಸ ಕ್ಯಾಬಿನೇಟ್, 5D ಪ್ಲಾನ್ appeared first on News First Kannada.

Source: newsfirstlive.com

Source link