ಬೆಂಗಳೂರು: ಯಾವ್ದೇ ಚುನಾವಣೆ ಬಂದರೂ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಸ್ಪರ್ಧೆ ಬಗ್ಗೆ ವದಂತಿ ಹಬ್ಬುತ್ತೆ. ಈ ಕ್ಷೇತ್ರದಿಂದ ಸ್ಪರ್ಧಿಸ್ತಾರೆ. ಆ ಕ್ಷೇತ್ರದಿಂದ ಕಣಕ್ಕಿಳಿತಾರೆ ಅನ್ನೋ ಮಾತು ಕೇಳಿ ಬರ್ತಿದೆ. ಆದ್ರೆ, 2023ರ ಚುನಾವಣೆಯಲ್ಲಿ ಸ್ಪರ್ಧೆಗೆ ಆಸಕ್ತಿ ತಳೆದಿರುವ ವಿಜಯೇಂದ್ರ, ವರಿಷ್ಠರ ಒಪ್ಪಿಗೆಗೆ ಕಾದು ಕೂತಿದ್ದಾರೆ.
2023ರ ಚುನಾವಣೆಯಲ್ಲಿ ಸ್ಪರ್ಧೆಗೆ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಸಜ್ಜಾಗಿದ್ದಾರೆ. ಕಳೆದ ಬಾರಿ ವರಿಷ್ಠರ ಗ್ರೀನ್ ಸಿಗ್ನಲ್ ಸಿಗದ ಕಾರಣ ವಿಜಯೇಂದ್ರ ಸ್ಪರ್ಧೆ ನೆನೆಗುದಿಗೆ ಬಿದ್ದಿತ್ತು. ಸದ್ಯ, ಈ ನಿಶ್ಚಿತತೆಗೆ ಬ್ರೇಕ್ ಬಿದ್ದಿದ್ದು, ಬಿಎಸ್‌ವೈ ಪುತ್ರ ಕಣಕ್ಕಿಳಿಯೋದು ನಿಶ್ಚಿತ ಎಂಬ ಮಾತು ಬಿಜೆಪಿಯೊಳಗಿಂದ ದಟ್ಟವಾಗಿ ಕೇಳಿ ಬರ್ತಿದೆ.
ಪುತ್ರನಿಗೆ ಶಿಕಾರಿಪುರ ಬಿಟ್ಟು ಕೊಡ್ತಾರಾ ಬಿಎಸ್‌ವೈ?
ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ಸ್ಪರ್ಧೆ ಬಗ್ಗೆ ಬಿಸಿಬಿಸಿ ಚರ್ಚೆ ಶುರುವಾಗಿದೆ.. 2023ರಲ್ಲಿ ಬಿ.ವೈ.ವಿಜಯೇಂದ್ರ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಆದ್ರೆ, ಯಾವ ಕ್ಷೇತ್ರದಿಂದ ಸ್ಫರ್ಧೆ ಮಾಡುತ್ತಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.
ಈ ಬಗ್ಗೆ ವಿಜಯೇಂದ್ರ ಅವರೇ ಮೌನ ಮುರಿದಿದ್ದು, ಸ್ಪರ್ಧೆಗೆ ಸಿದ್ಧ ಎಂಬ ಸಂದೇಶ ರವಾನೆ ಆಗಿದೆ. ವಿಧಾನಸಭೆ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಬಾಕಿ ಇದ್ದ, ಸ್ಫರ್ಧೆ ಮಾಡುವುದು ನಿಶ್ಚಿತ ಅಂದಿದ್ದಾರೆ.. ಅಲ್ಲದೆ, ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಅಂತಾ ತೀರ್ಮಾನಿಸಿಲ್ಲ ಅಂತ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರರಿಂದ ಪ್ರತಿಕ್ರಿಯೆ ನೀಡಿದ್ದಾರೆ.
ಇಂಟರೆಸ್ಟಿಂಗ್ ಅಂದ್ರೆ, ವಿಜಯೇಂದ್ರ ಯಾವ ಕ್ಷೇತ್ರ ಆಯ್ದುಕೊಳ್ತಾರೆ ಅನ್ನೋದು. ಈ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಡದ ವಿಜಯೇಂದ್ರ, ಚುನಾವಣೆ ಸ್ಪರ್ಧೆಗೆ ವರಿಷ್ಠರು ಅವಕಾಶ ಕಲ್ಪಿಸಿದ್ರೆ, ಕ್ಷೇತ್ರ ಆಯ್ಕೆ ಅಂತಿದ್ದಾರೆ. ಹಳೇ ಮೈಸೂರು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಮಲೆನಾಡು, ಕರಾವಳಿ ಈ ಭಾಗಗಳ ಯಾವ ಕ್ಷೇತ್ರ ಆಯ್ಕೆ ಮಾಡ್ತಾರೆ ಅನ್ನೋದು ಕುತೂಹಲ.
ಎಲ್ಲಿ ವಿಜಯೇಂದ್ರ ಸ್ಪರ್ಧೆ?
ಕಳೆದ ಬಾರಿ ಮೈಸೂರು ಭಾಗದ ವರುಣದಲ್ಲಿ ಸ್ಫರ್ಧೆಗೆ ಇಂಗಿತ ವ್ಯಕ್ತಪಡಿಸಿದ್ದ ವಿಜಯೇಂದ್ರಗೆ ಹೈಕಮಾಂಡ್ ನಾಯಕರು ಟಿಕೆಟ್ ನೀಡಿರಲಿಲ್ಲ. ಈ ಬಾರಿಯೂ ಕೂಡಾ ಅದೇ ವರುಣಾ ಕ್ಷೇತ್ರದ ಮೇಲೆ ವಿಜಯೇಂದ್ರ ಕಣ್ಣಿಟ್ಟಿದ್ದಾರೆ ಅನ್ನೋ ಮಾತು ಇದೆ. 2023ಕ್ಕೆ ವಯೋಮಾನ ಕಾರಣ ಯಡಿಯೂರಪ್ಪ ಸ್ಪರ್ಧೆ ಬೇಡ ಅಂತ ಹೈಕಮಾಂಡ್ ನಿರ್ಧರಿಸಿದ್ರೆ, ಬಿಎಸ್‌ವೈ ಸ್ಪರ್ಧಿಸ್ತಿದ್ದ ಶಿಕಾರಿಪುರದಿಂದ ವಿಜಯೇಂದ್ರ ಕಣಕ್ಕಿಳಿಯಬಹುದು ಅನ್ನೋ ಮಾತು ಕೇಳಿ ಬರ್ತಿದೆ. ಇನ್ನು, ಕಿತ್ತೂರು ಕರ್ನಾಟಕ ಭಾಗದಲ್ಲಿ ಲಿಂಗಾಯತರ ಪ್ರಾಬಲ್ಯ ಹೆಚ್ಚಾಗಿದ್ದು, ಯಾವುದಾದ್ರೂ ಕ್ಷೇತ್ರ ಆಯ್ದುಕೊಳ್ಳುವ ಸಾಧ್ಯತೆಗಳು ಇಲ್ಲದಿಲ್ಲ. ಒಟ್ಟಾರೆ, ವಿಜಯೇಂದ್ರ ಸ್ಪರ್ಧೆ ಬಹುತೇಕ ನಿಶ್ಚಿತವಾಗಿದ್ದು, ವರಿಷ್ಠರು ಗ್ರೀನ್ ಸಿಗ್ನಲ್ ಕೊಡಬೇಕಿದೆ. ಅಲ್ಲಿವರೆಗೆ ಈ ಕುತೂಹಲ ಕಂಟಿನ್ಯೂ ಆಗಲಿದೆ.
ವಿಶೇಷ ವರದಿ: ಮಧುಸೂದನ್, ಪೊಲಿಟಿಕಲ್ ಬ್ಯೂರೋ