2023ರ ವಿಧಾನಸಭೆ, 2024ರ ಲೋಕಸಭೆ ಚುನಾವಣೆಯಲ್ಲಿ ನಾನು ಮೇನ್ ಲೀಡರ್ ಆಗಿರುತ್ತೇನೆ: ರಮೇಶ್ ಜಾರಕಿಹೊಳಿ ಅಚ್ಚರಿ ಹೇಳಿಕೆ – Belagavi BJP MLA Ramesh Jarkiholi clarify about Join JDS


ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಜೆಡಿಎಸ್ ಸೇರುತ್ತಾರೆ ಎನ್ನುವ ​ಊಹಾಪೋಹಗಳಿಗೆ ತೆರೆ ಬಿದ್ದಿದೆ. ಈ ಬಗ್ಗೆ ರಮೇಶ್ ಜಾರಕಿಹೊಳಿ ಅವರೇ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಬೆಳಗಾವಿ: ರಾಸಲೀಲೆ ಸಿಡಿ ಬಹಿರಂಗವಾದ ಬೆನ್ನಲ್ಲೇ ಮಂತ್ರಿ ಸ್ಥಾನ ಕಳೆದುಕೊಂಡು ಬಿಜೆಪಿ ಪಕ್ಷದ ಕಾರ್ಯ ಚಟುವಟಿಕೆಗಳಿಂದ ದೂರ ಉಳಿದುಕೊಂಡಿದ್ದ ಶಾಸಕ ರಮೇಶ್​ ಜಾರಕಿಹೊಳಿ(Ramesh Jarkiholi)  ಅವರು ಜೆಡಿಎಸ್​ ಸೇರ್ತಾರೆ ಎನ್ನುವ ಸುದ್ದಿ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದೆ. ಇದೀಗ ಅದಕ್ಕೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದು, ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.

ಜಾರಕಿಹೊಳಿ ಬುಟ್ಟಿಗೆ ಕೈ ಹಾಕಿದ ಎಚ್​ಡಿಕೆ, ಮತ್ತೆ ರಾಜಕೀಯ ಧೃವೀಕರಣಕ್ಕೆ ಸಾಕ್ಷಿಯಾಗತ್ತಾ ರಾಜ್ಯ ರಾಜಕಾರಣ?

ಇಂದು(ನ.19) ಖಾಸಗಿ ಕಾರ್ಯಕ್ರಮದ ನಿಮಿತ್ತ ಬೆಳಗಾವಿ ಗ್ರಾಮೀಣ ‌ಕ್ಷೇತ್ರದಲ್ಲಿರುವ ಬೆಳಗುಂದಿ ಗ್ರಾಮಕ್ಕೆ   ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡಲ್ಲ. ನನ್ನ ಮನಸಿಗೆ ಬೇಜಾರಾಗಿ ಒಂದು ವರ್ಷದಿಂದ ಮಾಧ್ಯಮದಿಂದ ದೂರವಿದ್ದೆ. ಅನಿವಾರ್ಯವಾಗಿ ಇಂದು ಒಂದೇ ಒಂದು ವಿಷಯ ಸ್ಪಷ್ಟಪಡಿಸುವೆ. ಹೆಚ್.ಡಿ.ಕುಮಾರಸ್ವಾಮಿ ಜೊತೆ ನಾನು ಮಾತನಾಡಿದ್ದು ನಿಜ.ನನಗೆ ಸುಳ್ಳು ಹೇಳುವ ಚಟವಿಲ್ಲ. ದಿನನಿತ್ಯ ಕುಮಾರಸ್ವಾಮಿ ನನ್ನ ಜೊತೆ ಫೋನ್‌ನಲ್ಲಿ ಟಚ್​ನಲ್ಲಿದ್ದಾರೆ. ಆದ್ರೆ ನಾನು ಬಿಜೆಪಿ ಬಿಡುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.

2023ಕ್ಕೆ ಬಿಜೆಪಿಯ ಹತ್ತು ಜನ ಪ್ರಮುಖರಲ್ಲಿ ನಾನು ಒಬ್ಬ ಆಗುತ್ತೇನೆ. ಏಕೆಂದರೆ ಬಹಳಷ್ಟು ಜನ ರಿಟೈಡ್ ಆಗುತ್ತಾರೆ, ಹತ್ತು ಮಂದಿ ಬಿಜೆಪಿಯ ಪ್ರಮುಖರಲ್ಲಿ ನಾನೇ ಇರುವಾಗ. ಬೇರೆಯವರನ್ನು ಮಂತ್ರಿ ಮಾಡುವ ಹಾಗೂ ಬೇರೆಯವರಿಗೆ ಟಿಕೆಟ್ ಕೊಡುವ ಶಕ್ತಿ ಕೊಟ್ಟಾಗ ನಾನು ಬಿಜೆಪಿ ಏಕೆ ಬಿಡಲಿ? ಯಾವ ವ್ಯವಸ್ಥಿತ ಸಂಚು ಮಾಡಿ ದಿನನಿತ್ಯ ಮಾಧ್ಯಮಗಳಲ್ಲಿ ಬರುತ್ತೆ ಗೊತ್ತಿಲ್ಲ. ನಾನು ಬಿಜೆಪಿ ಬಿಡಲ್ಲ.. ಬಿಡಲ್ಲ.. ಎಂದು ರಮೇಶ್ ಜಾರಕಿಹೊಳಿ ಪುನರುಚ್ಚರಿಸಿದರು.

ಬಿಜೆಪಿಯಲ್ಲಿ ಉನ್ನತ ಹುದ್ದೆಗೆ ಹೋಗಿ ಸೇವೆ ಮಾಡುತ್ತೇನೆ. 2023ರ ವಿಧಾನಸಭೆ 2024ರ ಲೋಕಸಭೆ ಚುನಾವಣೆಯಲ್ಲಿ ನಾನು ಮೇನ್ ಲೀಡರ್ ಆಗಿರುತ್ತೇನೆ. ನಾನು ಒಬ್ಬ ಪ್ರಮುಖ ನಾಯಕನಾಗಿ ಕೆಲಸ ಮಾಡುತ್ತೇನೆ. ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಬಿಜೆಪಿ ಬೆಳೆಸಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. ಈ ಮೂಲಕ ಜೆಡಿಎಸ್ ಸೇರ್ತಾರೆ ಎನ್ನುವ ಅಂತೆ-ಕಂತೆಗಳಿಗೆ ತೆರೆ ಎಳೆದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.