2024ರ ಐಸಿಸಿ ‘ಟಿ20 ವಿಶ್ವಕಪ್’​ ಟೂರ್ನಿ ಆತಿಥ್ಯ ವಹಿಸುವ ದೇಶ ಯಾವುದು ಗೊತ್ತಾ..?


2024ರ ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯನ್ನು ಅಮೆರಿಕಾ ಆತಿಥ್ಯ ವಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಅಂದ್ಕೊಂಡಂತೆ ಅಮೆರಿಕಾದಲ್ಲಿ ವಿಶ್ವಕಪ್​ ಟೂರ್ನಿ ನಡೆದರೆ, 2014ರ ಬಳಿಕ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್​​ ಮತ್ತು ಬಾಂಗ್ಲಾದೇಶ ಹೊರತುಪಡಿಸಿ ಆತಿಥ್ಯ ವಹಿಸಿದ ಮೊದಲ ದೇಶ ಅಮೆರಿಕ ಎನಿಸಿಕೊಳ್ಳಲಿದೆ. ಇನ್ನು 2024ರ ಟೂರ್ನಿಯಲ್ಲಿ 20 ತಂಡಗಳು 55 ಪಂದ್ಯಗಳನ್ನಾಡುವ ನಿರೀಕ್ಷೆ ಇದೆ ಎಂದು ಐಸಿಸಿ ಮೂಲಗಳು ತಿಳಿಸಿವೆ.

ಇನ್ನು ದುಬೈ ಇಂಟರ್​ನ್ಯಾಷನಲ್​ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಐಸಿಸಿ ಟಿ-20 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್​ ತಂಡದ ವಿರುದ್ಧ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸಿದೆ. ನ್ಯೂಜಿಲೆಂಡ್​ ನೀಡಿದ ಟಾರ್ಗೆಟ್​ ಬೆನ್ನತ್ತಿದ್ದ ಆಸ್ಟ್ರೇಲಿಯಾ 18.5 ಓವರ್​ನಲ್ಲಿ 2 ವಿಕೆಟ್​ ನಷ್ಟಕ್ಕೆ 173 ರನ್​ ಗಳಿಸುವ ಮೂಲಕ ಆಸೀಸ್​ ಆಟಗಾರರು ಗೆದ್ದು ಬೀಗಿದ್ದಾರೆ. ಡೇವಿಡ್​ ವಾರ್ನರ್​ ಹಾಗೂ ಮಿಚೆಲ್​ ಮಾರ್ಷ್​ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ಗೆಲ್ಲುವ ಮೂಲಕ ಟಿ-20 ವಿಶ್ವಕಪ್​ ಮುಡಿಗೇರಿಸಿಕೊಂಡಿದೆ.

News First Live Kannada


Leave a Reply

Your email address will not be published. Required fields are marked *