ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ ಕಮಲಪಾಳಯಕ್ಕೆ ಠಕ್ಕರ್​ ಕೊಡೋಕೆ ವಿಪಕ್ಷಗಳು ಭರ್ಜರಿ ಸಿದ್ಧತೆ ನಡೆಸಿವೆ. ಎನ್​ಸಿಪಿ ಮುಖ್ಯಸ್ಥ ಶರದ್ ಪವಾರ್​ ನೇತೃತ್ವದಲ್ಲಿ ಸುಮಾರು  ಎರಡೂವರೆ ಗಂಟೆಗಳ ಕಾಲ 8 ಪಕ್ಷಗಳ ನಾಯಕರ ಸಭೆ ನಡೆದಿದ್ದು, ಮೋದಿಯನ್ನ ಮಣಿಸಲು ಚಕ್ರವ್ಯೂಹ ಸಿದ್ಧಪಡಿಸೋ ಕೆಲಸ ನಡೆದಿದೆ.

ಆದರೆ ಸಭೆಯಿಂದ ಕಾಂಗ್ರೆಸ್ ನಾಯಕರನ್ನ ದೂರವಿಡಲಾಗಿದೆ. ಸಭೆಯಲ್ಲಿ ಟಿಎಂಸಿ, ಆಮ್​ಆದ್ಮಿ ಸೇರಿ 8 ಪಕ್ಷಗಳು ಭಾಗಿಯಾಗಿದ್ದು, ನ್ಯಾಷನಲ್​ ಕಾನ್ಫರೆನ್ಸ್​ ನಾಯಕ ಓಮರ್​ ಅಬ್ದುಲ್ಲಾ, ಎನ್​ಸಿಪಿಯ ವಂದನಾ ಚೌಹಾಣ್​, ಆರ್​ಎಲ್​ಡಿಯ ಜಯಂತ್​ ಚೌಧರಿ, ಸಮಾಜವಾದಿ ಪಕ್ಷದ ಘನಶ್ಯಾಮ್​ ತಿವಾರಿ, ಎಎಪಿಯ ಸುಶೀಲ್​ ಗುಪ್ತಾ ಸೇರಿ ಹಲವು ಪ್ರಮುಖ ನಾಯಕರು ಉಪಸ್ಥಿತರಿದ್ದರು.

The post 2024ರ ಲೋಕಸಭಾ ಚುನಾವಣೆಗೆ ಸಿದ್ಧತೆ.. ಪವಾರ್​ ಮನೆಯಲ್ಲಿ 8 ವಿಪಕ್ಷಗಳ ನಾಯಕರ ಸಭೆ appeared first on News First Kannada.

Source: newsfirstlive.com

Source link