ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ನಾಯಕ ಮದನ್ ಮಿತ್ರ ಚರ್ಚಾಸ್ಪದ ಹೇಳಿಕೆಯೊಂದನ್ನ ನೀಡಿದ್ದು, 2024 ರ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಯವರನ್ನ ಸೋಲಿಸಲಿದ್ದಾರೆ ಎಂದು ಹೇಳಿದ್ದಾರೆ.

ಇದೇ ಜುಲೈ 21 ರಂದು ಮಮತಾ ಬ್ಯಾನರ್ಜಿ ಎಲ್ಲಾ ರಾಜ್ಯಗಳನ್ನೂ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.. ಈ ಭಾಷಣದ ಬ್ರಾಡ್​ಕಾಸ್ಟ್​ಗಾಗಿ ದೊಡ್ಡ ದೊಡ್ಡ ಸ್ಕ್ರೀನ್​ಗಳನ್ನ ಅಳವಡಿಸಲಾಗುತ್ತದೆ. ಅಂದು ಇಡೀ ದೇಶದಾದ್ಯಂತ ವರ್ಚುವಲ್ ಮೂಲಕ ಮಮತಾ ಬ್ಯಾನರ್ಜಿ ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ. ಜುಲೈ 21 ಪಶ್ಚಿಮ ಬಂಗಾಳದ ಹುತಾತ್ಮರ ದಿನವಾಗಿದೆ.

ಜುಲೈ 21 ರಂದು ತ್ರಿಪುರದ ಅಗರ್ತಲ, ಅಸ್ಸಾಂನ ಗುವಾಹಟಿ, ಗುಜರಾತ್, ಉತ್ತರ ಪ್ರದೇಶ ಮತ್ತು ಪಂಜಾಬ್​ಗಳಲ್ಲಿ ದೈತ್ಯ ಸ್ಕ್ರೀನ್​ಗಳನ್ನ ಅಳವಡಿಸಲಾಗುವುದು ಎಂದಿದ್ದಾರೆ. ಅಲ್ಲದೇ ಈ ಕಾರ್ಯಕ್ರಮ ದೆಹಲಿಯ ಕಾನ್ಸ್​ಟಿಟ್ಯೂಷನ್ ಕ್ಲಬ್​ನಲ್ಲಿ ನಡೆಯುತ್ತದೆ ಎಂದು . ಆದ್ರೆ ಕೋಲ್ಕತ್ತಾದಿಂದಲೇ ಮಮತಾ ಬ್ಯಾನರ್ಜಿ ವರ್ಚುವಲ್ ಭಾಷಣ ಮಾಡಲಿದ್ದಾರೆ ಎಂದು ಮದನ್ ಮಿತ್ರ ಮಾಹಿತಿ ನೀಡಿದ್ದಾರೆ.

ಜುಲೈ 21 ರಂದೇ ಟಿಎಂಸಿ ವಿರೋಧ ಪಕ್ಷಗಳ ನಾಯಕರನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಲಿದ್ದು ಇದು ದೆಲ್ಲಿ ಚಲೋದ ಮೊದಲ ಹೆಜ್ಜೆಯಾಗಲಿದೆ. ನಾವು ಮತ್ತೆ ಬಂಗಾಳವನ್ನ ಗೆದ್ದಿದ್ದೇವೆ.. ಅಲ್ಲದೇ ರಾಜ್ಯದ ಹೊರಗೂ ಸಹ ಮಮತಾ ಬ್ಯಾನರ್ಜಿ ಮಾತ್ರವೇ ಮೋದಿಗೆ ಪ್ರತಿಸ್ಪರ್ಧಿ ಎಂದು ಭಾವಿಸಿದ್ದಾರೆ. ಈ ಬಾರಿ ಮೋದಿ ಭಾರತ್ ಚೋರೋ ನಮ್ಮ ಸ್ಲೋಗನ್ ಆಗಿರಲಿದೆ.. ಉತ್ತರ ಪ್ರದೇಶದ ಚುನಾವಣೆಯಲ್ಲಿ ದೊಡ್ಡ ವೈಫಲ್ಯ ಕಾಣಲಿದೆ.. ಮತ್ತು ಇದು 2024 ರಲ್ಲಿ ಬಿಜೆಪಿ ಆಡಳಿತದಲ್ಲಿ ಉಳಿಯುತ್ತೋ ಇಲ್ಲವೋ ಅನ್ನೋದನ್ನ ನಿರ್ಧರಿಸಲಿದೆ. – ಮದನ್ ಮಿತ್ರ

The post 2024 ರ ಚುನಾವಣೆಗೆ ಮೋದಿ V/s ದೀದಿ..?; ದೆಹಲಿ ಪಾಲಿಟಿಕ್ಸ್​ಗೆ ಎಂಟ್ರಿಕೊಡಲು ಟಿಎಂಸಿ ಬಿಗ್​ ಪ್ಲಾನ್ appeared first on News First Kannada.

Source: newsfirstlive.com

Source link