ಕಿರುತೆರೆಯಲ್ಲಿ ತಮ್ಮದೇ ಶೈಲಿಯಲ್ಲಿ ಛಾಪು ಮೂಡಿಸಿರುವ ನಟಿ ಶ್ವೇತಾ ಚಂಗಪ್ಪ, ಕೊರೊನಾ ತಗುಲಿ ತಾವು ಪಟ್ಟಂತ ಕಷ್ಟಗಳನ್ನ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 21 ದಿನಗಳ ಹಿಂದೆ ಕೊರೊನಾ ಪಾಸಿಟಿವ್​ ಬಂದು ಹೋಮ್​ ಐಸೋಲೇಷನ್​ಗೆ ಒಳಗಾಗಿದ್ದ ಶ್ವೇತಾ ಚಂಗಪ್ಪ ಕುಟುಂಬಕ್ಕೆ ಇದೀಗ ಕೊರೊನಾ ನೆಗೆಟಿವ್ ಬಂದಿದೆ.

ಈ ಬಗ್ಗೆ ಖುಷಿ ಹಂಚಿಕೊಂಡಿರುವ ಶ್ವೇತಾ ಚಂಗಪ್ಪ, ಜೊತೆಜೊತೆಗೆ ತಾವು ಕಳೆದ 21 ದಿನಗಳ ಕಾಲ ಪಟ್ಟಂತ ನೋವನ್ನೂ ಶೇರ್​ ಮಾಡಿದ್ದಾರೆ. ‘ಎಲ್ಲರ ಪ್ರಾರ್ಥನೆ ಹಾಗೂ ಆಶೀರ್ವಾದಗಳಿಗೂ ಧನ್ಯವಾದಗಳು. ಕೊರೊನಾ ಕಾರಣ ಸತತ 21 ದಿನಗಳ ಕಾಲ ಪಟ್ಟಂತ ಕಷ್ಟಗಳಿಗೂ, ಹಾಗೇ ಜಗತ್ತಿನಿಂದ ದೂರವಿದ್ದು ಇದ್ದಂತ ಹೋಮ್​ ಕ್ವಾರಂಟೈನ್​ಗೂ ಇಂದು ಮುಕ್ತಿ ಸಿಕ್ಕಿದೆ. ನಾವೆಲ್ಲರೂ ನೆಗೆಟಿವ್​ ಟೆಸ್ಟ್​ ಆಗಿ ಕೊರೊನಾ ಮುಕ್ತರಾಗಿದ್ದೇವೆ. ನಿಮ್ಮ ಪ್ರಾರ್ಥನೆಗಳಿಗೆ ನಾನು ಚಿರಋಣಿ’ ಅಂತ ಬರೆದು ಪೋಸ್ಟ್​ ಮಾಡಿದ್ದಾರೆ.

 

View this post on Instagram

 

A post shared by Swetha Changappa (@swethachangappa)

ಧಾರಾವಾಹಿಗಳಲ್ಲಿನ ನಟನೆ ಮಾತ್ರವಲ್ಲದೇ ಮಜಾ ಟಾಕೀಸ್​ನಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ಶ್ವೇತಾ ಚಂಗಪ್ಪ ಎಲ್ಲರ ಮನೆ ಮಾತಾಗಿದ್ದಾರೆ. ನಿರೂಪಕಿಯಾಗಿಯೂ ಗುರುತಿಸಿಕೊಂಡಿರುವ ಶ್ವೇತಾ, ನಟನೆಗೂ ಸೈ ನಿರೂಪಣೆಗೂ ಸೈ ಅಂತಾರೆ.

The post 21 ದಿನಗಳ ದೀರ್ಘ ಹೋರಾಟ; ಕೊರೊನಾ ಮುಕ್ತರಾದ ನಟಿ ಶ್ವೇತಾ ಚಂಗಪ್ಪ ಕುಟುಂಬ appeared first on News First Kannada.

Source: newsfirstlive.com

Source link