ಸ್ಯಾಂಡಲ್ವುಡ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದರು. ಪುನೀತ್ ಸಾವು ಬೆನ್ನಲ್ಲೇ ಇಡೀ ದೊದ್ಮನೆ ಕುಟುಂಬದಲ್ಲಿ ನೀರವ ಮೌನ ಆವರಿಸಿತ್ತು. ರಾಜ್ಯಾದ್ಯಂತ ಪುನೀತ್ ಸಾವಿಗೆ ಅಭಿಮಾನಿಗಳು ಕಂಬನಿ ಮಿಡಿದರು, ಆತ್ಮಹತ್ಯೆ ಮಾಡಿಕೊಂಡರು. ಈಗ 22ನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಮುನ್ನವೇ ಅಪ್ಪು ವಿದಾಯ ಹೇಳಿದ್ದಾರೆ ಎಂದು ಪತ್ನಿ ಅಶ್ವಿನಿ ಗಳಗಳನೇ ಅಳುತ್ತಿದ್ದಾರೆ.
ಡಿಸೆಂಬರ್ 1ನೇ ತಾರೀಕಿಗೆ ಪುನೀತ್ ವಿವಾಹವಾಗಿ 22 ವರ್ಷಗಳು ಆಗಲಿದೆ. 1999 ಡಿಸೆಂಬರ್ 1ಕ್ಕೆ ಅಶ್ವಿನಿಯವರನ್ನು ಪುನೀತ್ಪ್ರೀತಿಸಿ ಮದುವೆಯಾಗಿದ್ದರು. ಇನ್ನೇನು ಕೇವಲ 30 ದಿನಗಳು ಆಗಿದ್ದರೆ, 22ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸೆಲೆಬ್ರೇಟ್ ಮಾಡಬೇಕಿತ್ತು. ಈಗ ಅಪ್ಪು ನಮ್ಮೊಂದಿಗಿಲ್ಲ. ಇನ್ನು ಪುನೀತ್ ರಾಜಕುಮಾರ್ ಕೇವಲ ನೆನಪು ಮಾತ್ರ ಎಂದು ಇಡೀ ಕುಟುಂಬ ಕಣ್ಣೀರು ಹಾಕಿದೆ.
ಇದನ್ನೂ ಓದಿ: ಅಪ್ಪು ಹೆಂಡ್ತಿ ಮಕ್ಕಳು ತುಂಬ ನೊಂದ್ಕೊಂಡಿದ್ದಾರೆ-ರಾಘಣ್ಣ
ಮರೆಯಾದ ಯುವರತ್ನ: ಅಪ್ಪುಗೆ ನ್ಯೂಸ್ಫಸ್ಟ್ ಗೀತ ನಮನ
https://www.youtube.com/watch?v=4bxvqcmZw4o