ಬಳ್ಳಾರಿ: ಮಹಾ ನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ 22 ವರ್ಷ ವಯಸ್ಸಿನ ಯುವತಿ ತ್ರಿವೇಣಿ, ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆದಿದ್ದಾರೆ.

ಪಾಲಿಗೆ ಚುನಾವಣೆಯ ಇತಿಹಾಸದಲ್ಲಿ ಗೆಲುವು ಪಡೆದ ಹಿರಿಯ ಅಭ್ಯರ್ಥಿ ಎಂಬ ದಾಖಲೆ ನಿರ್ಮಿಸಿದ್ದಾರೆ. ತ್ರಿವೇಣಿ ಅವರು ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಬಳ್ಳಾರಿ ಮಹಾನಗರ ಪಾಲಿಕೆಯ 4ನೇ ವಾರ್ಡ್​​​ನಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು.

ಚುನಾವಣೆಯಲ್ಲಿ ಒಟ್ಟು 1,791 ಮತಗಳನ್ನು ಪಡೆದಿರುವ ತ್ರಿವೇಣಿ ಅವರು, ಎದುರಾಳಿ ಸ್ಪರ್ಧಿ ವನಿತಾ ಅವರ ವಿರುದ್ಧ 501 ಮತಗಳ ಸ್ಪಷ್ಟ ಮುನ್ನಡೆಯೊಂದಿಗೆ ಗೆಲುವು ಪಡೆದಿದ್ದಾರೆ. ತ್ರಿವೇಣಿ ಅವರ ಎದುರಾಳಿ ಸ್ಪರ್ಧಿ ವನಿತಾ ಅವರು 1,290 ಮತಗಳನ್ನು ಪಡೆದುಕೊಂಡಿದ್ದರು.

ನ್ಯೂಸ್​ಫಸ್ಟ್​ ಕಳಕಳಿ
ಕೊರೊನಾದಿಂದ ರಕ್ಷಿಸಿಕೊಳ್ಳಲು ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ. ಮಾಸ್ಕ್ ಧರಿಸಿ, ಸೋಶಿಯಲ್ ಡಿಸ್ಟನ್ಸ್ ಕಾಪಾಡಿ. ಕೈ ತೊಳೆಯುತ್ತಿರಿ. ಮತ್ತು ಮೇ 1 ರಿಂದ 18ರ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಅರ್ಹರಾಗಿದ್ದು ರೆಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ https://www.cowin.gov.in/  ಇಲ್ಲಿಗೆ ಭೇಟಿ ಕೊಟ್ಟು ನೊಂದಣಿ ಮಾಡಿಕೊಳ್ಳಿ. ಮತ್ತೊಂದು ಮುಖ್ಯ ಸಂಗತಿ ಗಮನಿಸಿ CoWin ಆ್ಯಪ್ ಸಾರ್ವಜನಿಕರಿಗೆ ಅಲ್ಲ. ಹೀಗಾಗಿ ಕಡ್ಡಾಯವಾಗಿ ವೆಬ್​ಸೈಟ್​ನಲ್ಲಿಯೇ ನೊಂದಾಯಿಸಿಕೊಳ್ಳಬೇಕು.

The post 22ರ ವಯಸ್ಸಿಗೆ ಚುನಾವಣೆಯಲ್ಲಿ ಸ್ಪರ್ಧೆ- ಬಳ್ಳಾರಿ ಪಾಲಿಕೆಗೆ ಎಂಟ್ರಿ ಕೊಟ್ಟು ದಾಖಲೆ ಬರೆದ ಯುವತಿ appeared first on News First Kannada.

Source: newsfirstlive.com

Source link