2+2 ಸಚಿವರ ಸಂವಾದಕ್ಕೂ ಪೂರ್ವ ಇಂದು ಪ್ರಧಾನಿ ಮೋದಿ-ಅಮೆರಿಕ ಅಧ್ಯಕ್ಷ ಜೋ ಬೈಡನ್​ ವರ್ಚ್ಯುವಲ್​ ಮಾತುಕತೆ | PM Modi and Joe Biden to speak virtually ahead of key 2 Plus 2 dialogue


2+2 ಸಚಿವರ ಸಂವಾದಕ್ಕೂ ಪೂರ್ವ ಇಂದು ಪ್ರಧಾನಿ ಮೋದಿ-ಅಮೆರಿಕ ಅಧ್ಯಕ್ಷ ಜೋ ಬೈಡನ್​ ವರ್ಚ್ಯುವಲ್​ ಮಾತುಕತೆ

ಪ್ರಧಾನಿ ಮೋದಿ ಮತ್ತು ಜೋ ಬೈಡನ್​

ಭಾರತ-ಯುಎಸ್​ ನಡುವೆ ಇಂದಿನಿಂದ 2+2 ಸಚಿವರ ಚರ್ಚೆ ಪ್ರಾರಂಭವಾಗಲಿದ್ದು, ಅದಕ್ಕೂ ಪೂರ್ವದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಸ್​ ಅಧ್ಯಕ್ಷ ಜೋ ಬೈಡನ್​ ವರ್ಚ್ಯುವಲ್​ ಆಗಿ ಮಾತುಕತೆ ನಡೆಸಲಿದ್ದಾರೆ. ಯುಎಸ್​-ಭಾರತ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವುದು, ಇಂಡೋ ಫೆಸಿಪಿಕ್​ ಮತ್ತು ಉಕ್ರೇನ್​​ನಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯ ಬಗ್ಗೆ ಇವರಿಬ್ಬರೂ ಚರ್ಚೆ ನಡೆಸಲಿದ್ದಾರೆ. ಅಷ್ಟೇ ಅಲ್ಲ, ಕೊವಿಡ್​ 19 ಸಾಂಕ್ರಾಮಿಕ, ಜಾಗತಿಕವಾಗಿ ಆರ್ಥಿಕತೆ ಉತ್ತೇಜನ, ಹವಾಮಾನ ವೈಪರೀತ್ಯ ವಿಷಯ ಸೇರಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾಗಿ ಹಿಂದುಸ್ಥಾನ್​ ಟೈಮ್ಸ್ ವರದಿ ಮಾಡಿದೆ.  

TV9 Kannada


Leave a Reply

Your email address will not be published. Required fields are marked *