ಬೆಂಗಳೂರು: 24 ಗಂಟೆಗಳಲ್ಲಿ ಸರ್ಕಾರದಿಂದ ಕಳುಹಿಸುವ ಕೊರೊನಾ RT-PCR ಟೆಸ್ಟ್ ಫಲಿತಾಂಶದ ವರದಿ ​ನೀಡುವಂತೆ ರಾಜ್ಯದ ಎಲ್ಲಾ ಲ್ಯಾಬ್​ಗಳಿಗೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣಕ್ಕೆ ಬ್ರೇಕ್ ಹಾಕುವ ಉದ್ದೇಶದಿಂದ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಈ ಆದೇಶ ನೀಡಿದ್ದಾರೆ.

ಹೈಕೋರ್ಟ್​ ಸೂಚನೆ ಹಿನ್ನೆಲೆ ಇದ್ದರೂ 24 ಘಂಟೆಗಳಲ್ಲಿ ಬರಬೇಕಾದ ಕೊರೊನಾ ಟೆಸ್ಟ್ ಫಲಿತಾಂಶ ತಡವಾಗುತ್ತಿದೆ. ಆದರೆ 24 ಗಂಟೆಗಳಲ್ಲಿ ಕೊರೊನಾ ಟೆಸ್ಟ್​​ ರಿಸಲ್ಟ್ ಬರದೆ ಇರುವುದು ಗಮನಕ್ಕೆ ಬಂದಿದೆ. RTPCR ಟೆಸ್ಟ್ ಫಲಿತಾಂಶ 24 ಗಂಟೆಯೊಳಗೆ ಬರಬೇಕು. ಜೊತೆಗೆ ICMR ಪೋರ್ಟಲ್​ನಲ್ಲಿ ಅದನ್ನ ಉಲ್ಲೇಖಿಸಬೇಕು. ಇಲ್ಲದಿದ್ರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಲ್ಯಾಬ್​ಗಳಿಗೆ ರಾಜ್ಯ ಸರ್ಕಾರ ಎಚ್ಚರಿಕೆಯನ್ನ ನೀಡಿದೆ.

The post 24 ಗಂಟೆಯೊಳಗೆ ಕೊರೊನಾ RT-PCR ಟೆಸ್ಟ್ ವರದಿ ನೀಡಬೇಕು, ಇಲ್ಲದಿದ್ರೆ ಕ್ರಮ appeared first on News First Kannada.

Source: newsfirstlive.com

Source link