ಬೆಂಗಳೂರು: ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 24 ಮಂದಿ ಸಾವನ್ನಪ್ಪಿದ್ದು, ಇವರ ಕೊಲೆಗೆ ಸರ್ಕಾರವೇ ನೇರ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮರ್ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಇಂದಿನ ಪರಿಸ್ಥಿತಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಎರಡು ಕಾರಣವಾಗಿವೆ. 24 ಜನರ ಕೊಲೆಗೆ ಸರ್ಕಾರವೇ ಕಾರಣ. ನ್ಯಾಯಮೂರ್ತಿಗಳು ಇದೇ ವರದಿ ಕೊಟ್ಟಿದ್ದಾರೆ ಎಂದರು.

ಜನರ ಸಾವಿನ ಹೊಣೆ ಯಾರು ಹೊತ್ಕೊಳ್ತಾರೆ..? ಇದನ್ನ ನೀವೇ ನಿರ್ಧಾರ ಮಾಡಬೇಕು. ಸರ್ಕಾರ ಮಿಸ್ ಗೈಡ್ ಮಾಡುವ ಪ್ರಯತ್ನ ಮಾಡಿದರು. ನ್ಯಾಯಮೂರ್ತಿಗಳೇ ವರದಿ ಕೊಟ್ಟಿದ್ದಾರೆ. 24 ಜನ ಸತ್ತಿದ್ದಕ್ಕೆ ಸರ್ಕಾರವೇ ಹೊಣೆ ಹೊರಬೇಕು ಎಂದು ಗರಂ ಆದರು. ಇದನ್ನೂ ಓದಿ: ಚಾಮರಾಜನಗರ ಆಕ್ಸಿಜನ್ ದುರಂತ – ರೋಹಿಣಿ ಸಿಂಧೂರಿಗೆ ಕ್ಲೀನ್‍ಚಿಟ್

ಸಿಎಂ ಇಂದು ಪತ್ರಿಕಾಗೋಷ್ಠಿ ಕರೆದಿದ್ದಾರೆ. ಸರ್ಕಾರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು. ಪ್ರತಿ ಬಡ ಕುಟುಂಬಕ್ಕೆ 10 ಸಾವಿರ ಆರ್ಥಿಕ ನೆರವು ಘೋಷಣೆ ಮಾಡಬೇಕು. ಬ್ಯಾಂಕುಗಳನ್ನ ಕರೆದು ಸರ್ಕಾರ ಮಾತಮಾಡಬೇಕು. ಇಎಂಐ ಹಾಗೂ ಬಡ್ಡಿ ವಿಚಾರದಲ್ಲಿ ಬ್ಯಾಂಕುಗಳ ಜೊತೆ ಮಾತನಾಡಿ ಸರ್ಕಾರ ಜನರ ನೆರವಿಗೆ ಬರಬೇಕು ಎಂದು ಸಲಹೆ ನಿಡಿದರು.

ಒಟ್ಟಿನಲ್ಲಿ ಸಿಎಂ ಸುದ್ದಿಗೋಷ್ಠಿ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಕುಡ ಪತ್ರಿಕಾಗೋಷ್ಠಿ ನಡೆಸಲು ನಿರ್ಧಾರ ಮಾಡಿದ್ದಾರೆ. ಸಿಎಂ ಪ್ರೆಸ್ ಮೀಟ್ ಮುಗಿಯುತ್ತಿದ್ದಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಜಂಟಿ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆಗಳಿವೆ.

The post 24 ಜನರ ಕೊಲೆಗೆ ಸರ್ಕಾರವೇ ಕಾರಣ: ಡಿಕೆಶಿ ಗಂಭೀರ ಆರೋಪ appeared first on Public TV.

Source: publictv.in

Source link