ಚಾಮರಾಜನಗರ: ಜಿಲ್ಲಾಸ್ಪತ್ರೆಯಲ್ಲಿ ರಾತ್ರಿ 24 ರೋಗಿಗಳು ಆಕ್ಸಿಜನ್​ ಇಲ್ಲದೇ ಸಾವನ್ನಪ್ಪಿದ ಬಳಿಕ ಇಂದು ಮಧ್ಯಾಹ್ನ ವೇಳೆಗೆ ಆಕ್ಸಿಜನ್​​ ಬಂದಿದೆ. ಸಾವಿನ ಸರಣಿಯ ಬಳಿಕ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ 6 ಸಾವಿರ ಲೀಟರ್​​ ಆಕ್ಸಿಜನ್​​ಅನ್ನು ಆಸ್ಪತ್ರೆಯ ಆಕ್ಸಿಜನ್​​ ಪ್ಲಾಂಟ್​ಗೆ ತರಿಸಿದೆ.

ಟ್ಯಾಂಕರ್‌ ಮೂಲಕ ತಂದ ಆಕ್ಸಿಜನ್​ಅನ್ನು ಆಸ್ಪತ್ರೆಯ ಆಕ್ಸಿಜನ್​ ಪ್ಲಾಂಟ್​ಗೆ ಡಾಂಪ್​ ಮಾಡಲಾಗಿದೆ. ಈ ವೇಳೆ ಆಸ್ಪತ್ರೆಯ ಸಿಬ್ಬಂದಿಗಳು ನ್ಯೂಸ್​ ಫಸ್ಟ್​ಗೆ ಮಾಹಿತಿ ನೀಡಿ. ಆಸ್ಪತ್ರೆಯಲ್ಲಿ ನಿತ್ಯ 300ಕ್ಕೂ ಹೆಚ್ಚು ಜಂಬೋ ಸಿಲಿಂಡರ್​ಗಳ ಅಗತ್ಯವಿದೆ. ಕಳೆದ ಮೂರು ದಿನಗಳ ಹಿಂದೆಯಷ್ಟೇ ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್​ ಉದ್ಘಾಟನೆಯಾಗಿತ್ತು. ಆ ವೇಳೆ ಟ್ಯಾಂಕ್ ಫೀಲ್​ ಮಾಡಲಾಗಿತ್ತು. ಆ ಬಳಿಕ ಮತ್ತೆ ಫೀಲ್​​ ಮಾಡಿರಲಿಲ್ಲ. ಇಂದು ಬಳ್ಳಾರಿಯಿಂದ ಆಕ್ಸಿಜನ್​ ಪೂರೈಕೆ ಆಗಿದೆ ಎಂದು ತಿಳಿಸಿದ್ದಾರೆ.

ಆದರೆ ಈ ಹಿಂದೆ ಆಕ್ಸಿಜನ್​ ಪ್ಲಾಂಟ್​​ ಉದ್ಘಾಟನೆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು ಈ ಪ್ಲಾಂಟ್​ನಲ್ಲಿ ಒಂದು ವಾರಕ್ಕೆ ಆಗುವ ಆಕ್ಸಿಜನ್​ ಸ್ಟೋರ್​ ಮಾಡಬಹುದು ಎಂದು ತಿಳಿಸಿದ್ದರು. ಆದರೆ ಮೂರು ದಿನಗಳ ಹಿಂದೆ ಫೀಲ್​ ಮಾಡಿದ್ದ ಆಕ್ಸಿಜನ್​ ಏನಾಯ್ತು ಎಂಬ ಪ್ರಶ್ನೆ ಮೂಡಿದೆ. ಅಲ್ಲದೇ ಉದ್ಘಾಟನೆ ಸಂದರ್ಭದಲ್ಲಿ ನಿಜಕ್ಕೂ ಆಕ್ಸಿಜನ್​ ಫೀಲ್​ ಮಾಡಲಾಗಿತ್ತಾ ಎಂಬ ಅನುಮಾನಕ್ಕೆ ಕಾರಣವಾಗಿದೆ.

The post 24 ಜೀವ ಹೋದ ಮೇಲೆ ಚಾಮರಾಜನಗರ ಆಸ್ಪತ್ರೆಗೆ ಬಂತು ಆಕ್ಸಿಜನ್ ಟ್ಯಾಂಕರ್ appeared first on News First Kannada.

Source: newsfirstlive.com

Source link