ತುಮಕೂರು: ಜಿಲ್ಲೆಯ ಪಾವಗಡ ತಾಲೂಕಿನ ಅರೆಕ್ಯಾತನಹಳ್ಳಿಯಲ್ಲಿ 25 ಅಡಿ ಆಳದ ಬಾವಿ ಬಳಿ  ಮೇಯಲು ಹೋದ ಹಸು ಉರುಳಿಬಿದ್ದ ಹಿನ್ನೆಲೆ ಹಸುವನ್ನ ಯಶಸ್ವಿಯಾಗಿ ರಕ್ಷಣೆ ಮಾಡಿದ ಘಟನೆ ನಡೆದಿದೆ.

ರೈತ ಮಹಿಳೆ ಅಕ್ಕಮ್ಮ ಎಂಬುವರ ಹಸು ಮೇಯಲು ಹೋದಾಗ 25 ಅಡಿ ಆಳದ ಬಾವಿಗೆ ಉರುಳಿಬಿದ್ದಿತ್ತು.. ಈ ವಿಚಾರ ತಿಳಿದ ಪಾವಗಡ ಸಮಗ್ರ ಸೇವಾಭಿವೃದ್ಧಿ ಟ್ರಸ್ಟ್ ಸದಸ್ಯರು ಬೃಹತ್ ಕ್ರೇನ್ ಒಂದನ್ನು ಸ್ಥಳಕ್ಕೆ ಕರೆಯಿಸಿ ಗಂಟೆಗಟ್ಟಲೆ ಕಾರ್ಯಾಚರಣೆ ನಡೆಸಿ ಕೊನೆಗೂ ಯಶಸ್ವಿಯಾಗಿ ಹಸುವನ್ನ ಮೇಲೆತ್ತಿದ್ದಾರೆ. ಟ್ರಸ್ಟ್ ಸದಸ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

The post 25 ಅಡಿ ಆಳದ ಬಾವಿಗೆ ಬಿದ್ದ ಹಸು.. ರೋಚಕ ಕಾರ್ಯಾಚರಣೆಯಿಂದ ಬದುಕಿತು ಬಡಜೀವ appeared first on News First Kannada.

Source: newsfirstlive.com

Source link