25 ಕೋಟಿ ರೂ. ಲಾಟರಿ ಗೆದ್ದರೂ ನೆಮ್ಮದಿ ಇಲ್ಲ: ಅಳಲು ತೋಡಿಕೊಂಡ ಕೇರಳದ ಆಟೋ ಚಾಲಕ | The fortunes of the Kerala man who won Rs 25 crore Onam lottery rbj


ಕೇರಳದ ಆಟೋ ಚಾಲಕ 25 ಕೋಟಿ ಲಾಟರಿ ಗೆದ್ದರೂ ಮನಸ್ಸಿನ ನೆಮ್ಮದಿ ಇಲ್ಲದಂತಾಗಿದೆ. ಈ ಬಗ್ಗೆ ಸ್ವತಃ ಅವರೇ ಅಳಲು ತೋಡಿಕೊಂಡಿದ್ದಾರೆ.

ತಿರುವನಂತಪುರಂ: ಮುಖ್ಯವಾಗಿ ಮನಷ್ಯನಿಗೆ ನೆಮ್ಮದಿ ಮುಖ್ಯ. ಮನಸ್ಸಿಗೆ ನೆಮ್ಮದಿಯೇ ಇಲ್ಲ ಅಂದ ಮೇಲೆ ಎಷ್ಟು ಶ್ರೀಮಂತಿಕೆ ಶ್ರೀಮಂತಿಕೆ ಇದ್ದರೇನು ಅಲ್ವೇ? ಇದೀಗ ಇಂತಹ ಸ್ಥಿತಿ ಇತ್ತೀಚೆಗೆ 25 ಕೋಟಿ ರೂ ಗೆದ್ದ ಕೇರಳದ ಆಟೋ ಚಾಲಕನಿಗೆ ಬಂದಿದೆ.  ಕೇರಳ ಸರ್ಕಾರ ನಡೆಸುವ ಓಣಂ ಬಂಪರ್​ ಲಾಟರಿಯಲ್ಲಿ ಆಟೋ ಚಾಲಕ ಅನೂಪ್​ ಪ್ರಥಮ ಬಹುಮಾನವಾಗಿ 25 ಕೋಟಿ ರೂ.ಗಳನ್ನು ಗೆದ್ದಿದ್ದಾರೆ. ಇದು ಕೇರಳ ಇತಿಹಾಸದಲ್ಲಿಯೇ ಲಾಟರಿ ಟಿಕೆಟ್​ನಲ್ಲಿ ನೀಡಿದ ಅತಿದೊಡ್ಡ ಮೊತ್ತವಾಗಿದೆ. ಡ್ರಾ ದಿನಾಂಕ ಮುನ್ನಾ ದಿನ ಅನೂಪ್ ಮಗನ ಪಿಗ್ಗಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನೂ ಸೇರಿಸಿ 500 ರೂ.ನ ಲಾಟರಿ ಟಿಕೆಟ್​ ಖರೀದಿಸಿದ್ದರು. ಅದ್ರೆ, ಇದೀಗ  25 ಕೋಟಿ ಲಾಟರಿ ಗೆದ್ದರೂ ಅನೂಪ್​ಗೆ ನೆಮ್ಮದಿ ಇಲ್ಲದಂತಾಗಿದೆಯಂತೆ.

ಅಳಲು ತೋಡಿಕೊಂಡ ಅನೂಪ್

ಸಹಾಯ ಯಾಚಿಸುವವರು ಪ್ರತಿದಿನ ಮನೆಗೆ ಬರುತ್ತಿದ್ದು, ಮನೆಯಲ್ಲಿ ನೆಮ್ಮದಿಯಿಂದಿರಲು ಸಾಧ್ಯವಾಗುತ್ತಿಲ್ಲ’ ಎಂದು ಕೇರಳ ಸರಕಾರದ ತಿರುವೋಣಂ ಬಂಪರ್‌ ಲಾಟರಿ ವಿಜೇತ ತಿರುವನಂತಪುರಂ ಶ್ರೀವರಾಹಂ ನಿವಾಸಿ, ರಿಕ್ಷಾ ಚಾಲಕ ಅನೂಪ್‌ ವಿಡಿಯೋ ಮಮೂಲಕ ಅಳಲು ತೋಡಿಕೊಂಡಿದ್ದಾರೆ.

TV9 Kannada


Leave a Reply

Your email address will not be published.