ಚಾಮರಾಜನಗರ: ಜಿಲ್ಲಾಸ್ಪತ್ರೆಗೆ 250 ಆಕ್ಸಿಜನ್​ ಸಿಲಿಂಡರ್ ಕಳುಹಿಸಿಕೊಟ್ಟಿದ್ದೇವೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಕುರಿತಂತೆ ಚಾಮರಾಜನಗರ ಡಿಸಿ ಎಂ.ಆರ್ ರವಿ ಅವರು ಸ್ಪಷ್ಟನೆ ನೀಡಿ ಪ್ರತಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಚಾಮರಾಜನಗರಕ್ಕೆ 250 ಆಕ್ಸಿಜನ್ ಸಿಲಿಂಡರ್ ಕಳುಹಿಸಲಾಗಿದೆ ಎಂಬುದು ಸತ್ಯಕ್ಕೆ ದೂರದ ಮಾತು. ಚಾಮರಾಜನಗರ ಜಿಲ್ಲಾಸ್ಪತ್ರೆಗೆ ತುರ್ತು ಸಂದರ್ಭದ ವೇಳೆ ಮೈಸೂರು ಜಿಲ್ಲಾಡಳಿತದಿಂದ ಸೂಕ್ತ ಸ್ಪಂಧನೆ ನೀಡಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಆರ್ ರವಿ ತಿರುಗೇಟು ನೀಡಿದ್ದಾರೆ.

ಭಾನುವಾರ ಸಂಜೆ ವೇಳೆಗೆ ನಮಗೆ 100 ಸಿಲಿಂಡರ್ ಬೇಡಿಕೆಯಿತ್ತು. ಸಕಾಲದಲ್ಲಿ ಸಿಲಿಂಡರ್ ಪೂರೈಕೆಯಾಗಿಲ್ಲ. ಮೈಸೂರು ಜಿಲ್ಲಾಧಿಕಾರಿ ನೀಡಿರುವ ಹೇಳಿಕೆ ಸಂಪೂರ್ಣ ಸರಿಯಿಲ್ಲ. ಮೇ.2 ರ ಭಾನುವಾರ ರಾತ್ರಿ ನನ್ನ ಮನವಿ ಮೇರೆಗೆ ಮೈಸೂರಿನ ಪದಕಿ ಸಂಸ್ಥೆಯಿಂದ 50 ಸಿಲಿಂಡರ್ ಮಾತ್ರ ಬಂದಿದೆ. ಚಾಮರಾಜನಗರಕ್ಕೆ ಮಧ್ಯ ರಾತ್ರಿವರೆಗೂ 250 ಸಿಲಿಂಡರ್​ ಆಕ್ಸಿಜನ್​ ಪೂರೈಕೆ ಮಾಡಿದ್ದೇವೆ ಎಂಬುವುದು ಸತ್ಯಕ್ಕೆ ದೂರವಾಗಿದೆ ಎಂದು ರವಿ ಅವರು ತಿಳಿಸಿದ್ದಾರೆ.

The post ‘250 ಆಕ್ಸಿಜನ್ ಸಿಲಿಂಡರ್​​​ ಕಳಿಸಿದ್ದಾರೆ ಅನ್ನೋದು ಸುಳ್ಳು’ ರೋಹಿಣಿ ಸಿಂಧೂರಿಗೆ ಚಾಮರಾಜನಗರ ಡಿಸಿ ತಿರುಗೇಟು appeared first on News First Kannada.

Source: newsfirstlive.com

Source link