ಚಿತ್ರದುರ್ಗ: ಉತ್ಪಾದಕ ಕೇಂದ್ರದಲ್ಲಿ ಹಾಲು ಮಾರಾಟ ಆಗದ ಹಿನ್ನೆಲೆ ಕೋಟೆನಾಡಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಥಳೀಯ ಹಾಲಿನ ಕೇಂದ್ರ ಏಕಾಏಕಿ ಹಾಲಿನ ಡಿಗ್ರಿ ದರ ಏರಿಸಿದ ಕಾರಣ ರೊಚ್ಚಿಗೆದ್ದ ರೈತರು ಹಾಲನ್ನು ಚರಂಡಿಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿರಿಯೂರು ತಾಲ್ಲೂಕಿನ ಲಕ್ಕವ್ವನಹಳ್ಳಿ ಗ್ರಾಮದಲ್ಲಿ ಬರೋಬ್ಬರಿ 250 ಲೀಟರ್ ಹಾಲನ್ನ ಚರಂಡಿಗೆ ಸುರಿದಿದ್ದಾರೆ. ರೈತರಿಂದ ಹಾಲು ಖರೀದಿಗೆ ಸ್ಥಳೀಯ ಹಾಲು ಉತ್ಪಾದಕ ಕೇಂದ್ರ ಹಿಂದೇಟು ಹಾಕಿದೆ. ಅಲ್ಲದೆ ಹಾಲಿನ ಡಿಗ್ರಿ 4.1 ಏರಿಸಿದಕ್ಕೆ ರೈತರು ಅಸಮಾಧಾನ ಹೊರಹಾಕಿದ್ದಾರೆ

ವರ್ಷಪೂರ್ತಿ ಲಾಭ ಗಳಿಸಿ ಹಾಲಿನ ಕೇಂದ್ರ ಮೋಸ ಮಾಡುತ್ತಿದೆ. ಹಾಲು ಮಾರಾಟವಾಗದಿದ್ದಕ್ಕೆ ರೈತರ ಹಾಲು ಖರೀದಿಗೆ ಹಿಂದೇಟು ಹಾಕ್ತಿದೆ ಎಂದು ಆರೋಪಿಸಿದ್ದಾರೆ.

The post 250 ಲೀಟರ್ ಹಾಲು ಚರಂಡಿಗೆ ಚೆಲ್ಲಿ ರೈತರ ಆಕ್ರೋಶ appeared first on News First Kannada.

Source: newsfirstlive.com

Source link