26/11ರ ಮುಂಬೈ ಉಗ್ರರ ಕೃತ್ಯಕ್ಕೆ ಪ್ರತಿದಾಳಿ ಮಾಡ್ಬೇಕಿತ್ತು, ಇದು UPA ಹೇಡಿತನ-ಕಾಂಗ್ರೆಸ್ ಮಾಜಿ ಸಚಿವ

ಕಾಂಗ್ರೆಸ್​​ ಸಂಸದ ಮನೀಶ್​​ ತಿವಾರಿ ಒಂದಲ್ಲ ಮತ್ತೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಈಗ ಮನೀಶ್ ತಿವಾರಿ ತನ್ನ ಹೊಸ ಪುಸ್ತಕದಲ್ಲಿ ಕಾಂಗ್ರೆಸ್​ ನೇತೃತ್ವದ ಯುಪಿಎ-1 ಸರ್ಕಾರದ ಅವಧಿಯಲ್ಲಿ ನಡೆದ ಮುಂಬೈ ದಾಳಿ ಬಗ್ಗೆ ಉಲ್ಲೇಖಿಸಿದ್ದಾರೆ. ಇಲ್ಲಿ ಮುಂಬೈ ಮಹಾ ನಗರದ ಮೇಲೆ ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಉಗ್ರರು ಆತ್ಮಾಹುತಿ ಬಾಂಬ್​ ದಾಳಿ ನಡೆಸಿದ ನಂತರ ಕಾಂಗ್ರೆಸ್​ ನೇತೃತ್ವದ ಯುಪಿಎ-1 ಸರ್ಕಾರದ ನಿಷ್ಕ್ರಿಯತೆ ಬಗ್ಗೆ ಪ್ರಶ್ನಿಸುವ ಮೂಲಕ ತಿವಾರಿ ಹೊಸ ಚರ್ಚೆಯೊಂದು ಹುಟ್ಟಿಹಾಕಿದ್ದಾರೆ.

26/11 ಮುಂಬೈ ದಾಳಿ ನಂತರ ಅಂದಿನ ಯುಪಿಎ ಸರ್ಕಾರ ಪಾಕ್​​ ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿತ್ತು. ಕ್ರಮ ತೆಗೆದುಕೊಳ್ಳುವ ಬದಲು ಅಂದು ಕಾಂಗ್ರೆಸ್​ ಸರ್ಕಾರ ಸಂಯಮ ಪ್ರದರ್ಶಿಸಿತ್ತು. ಇದು ನಮ್ಮ ಸಾಮರ್ಥ್ಯದ ಲಕ್ಷಣವಲ್ಲ, ಬದಲಿಗೆ ದೌರ್ಬಲ್ಯದ ಸಂಕೇತ. 9/11 ದಾಳಿ ಬಳಿಕ ಭಾರತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿತ್ತು ಎಂಬುದು ನನ್ನ ಅಭಿಪ್ರಾಯ ಎಂದು ಕಾಂಗ್ರೆಸ್​​ ಸಂಸದ ಮನೀಶ್​​ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ.

ಈಗ ಒಬ್ಬ ಕಾಂಗ್ರೆಸ್​ ಸಂಸದನಾಗಿ ತನ್ನ ಪಕ್ಷ ಅಧಿಕಾರಿದಲ್ಲಿದ್ದಾಗ ಮುಂಬೈ ದಾಳಿ ಬಗ್ಗೆ ಏನು ಮಾಡಲಿಲ್ಲ ಎಂದು ಬರೆದಿರುವುದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ನೂರಾರು ಅಮಾಯಕರನ್ನು ಬಲಿ ಪಡೆದ ಮುಂಬೈ ದಾಳಿ ಬಗ್ಗೆ ಅಂದಿನ ಕಾಂಗ್ರೆಸ್​ ಸರ್ಕಾರ ಏನು ಮಾಡಿಲ್ಲ ಎಂಬುದಕ್ಕೆ ಸಾಕ್ಷಿ ಮನೀಶ್​​ ತಿವಾರಿ ಪುಸ್ತಕ ಎಂದು ಬಿಜೆಪಿ ಆರೋಪಿಸಿದೆ.

ಈ ಸಂಬಂಧ ಮಾತಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್​​ ಭಾಟಿಯಾ, ಉಗ್ರರನ್ನು ಸೆದೆ ಬಡಿಯಲು ಅಂದು ಭಾರತೀಯ ಸೇನೆಗೆ ಕಾಂಗ್ರೆಸ್​ ಸರ್ಕಾರ ಅನುಮತಿ ನೀಡಿರಲಿಲ್ಲ. ಒಬ್ಬ ಕಾಂಗ್ರೆಸ್​ ಸಂಸದ ತನ್ನ ಪುಸ್ತಕದಲ್ಲಿ 26/11 ಮುಂಬೈ ದಾಳಿ ಬಗ್ಗೆ ಅಂದಿನ ಯುಪಿಎ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಿರುವುದು ಸರ್ಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ. ಈ ಬಗ್ಗೆ ಸೋನಿಯಾ ಮತ್ತು ರಾಹುಲ್​​ ಗಾಂಧಿ ಈಗಲಾದರೂ ಮೌನಮುರಿಯಬೇಕು ಎಂದು ಆಗ್ರಹಿಸಿದ್ದಾರೆ.

ಮತ್ತೆ ಸರ್ಜಿಕಲ್​ ಸ್ಟ್ರೈಕ್ ಬಗ್ಗೆ ಸಂಶಯ ವ್ಯಕ್ತಪಡಿಸಿದ ಕಾಂಗ್ರೆಸ್

ಇನ್ನೊಂದೆಡೆ ಮಾಜಿ ಸಿಎಂ ವೀರಪ್ಪ ಮೊಹ್ಲಿ ಮಾತಾಡುತ್ತಾ, ಅಂದು ಮನೀಶ್​ ತಿವಾರಿ ನಮ್ಮ ಸರ್ಕಾರದ ಭಾಗವಾಗಿರಲಿಲ್ಲ. ಇವರು ಯಾವುದೇ ಜವಾಬ್ದಾರಿಯುತ ಸ್ಥಾನದಲ್ಲಿ ಇಲ್ಲದೆ ಹೀಗೆ ಏನೇನೋ ಬರೆಯೋದು ತಪ್ಪು. ಇತ್ತೀಚೆಗೆ ಕಳೆದ ಲೋಕಸಭಾ ಚುನಾವಣೆಗೆ ಮುನ್ನ ಪಾಕ್​​ ಮೇಲೆ ಸರ್ಜಿಕಲ್​​ ಸ್ಟ್ರೈಕ್​​ ಮಾಡಿದ್ದೇವೆ ಎಂದಿದ್ದರು ಮೋದಿ. ಇದರ ಬಗ್ಗೆಯೂ ಹಲವು ಅನುಮಾನಗಳು ಇವೆ ಎಂದು ಸಮರ್ಥಿಸಿಕೊಂಡರು.

ಏನಿದು ಘಟನೆ?

ಮುಂಬೈ ದಾಳಿಯಲ್ಲಿ ಉಗ್ರರು ಕೃತ್ಯಕ್ಕೆ 166 ಜನರು ಹತರಾದರೆ, 300 ಮಂದಿ ಗಾಯಗೊಂಡಿದ್ದರು. ಆ ಕಹಿ ಘಟನೆ ನಡೆದು ಇಂದಿಗೆ ಸುಮಾರು 13 ವರ್ಷಗಳು ಕಳೆದಿವೆ. 2008ರ ನವೆಂಬರ್ 26 ರಿಂದ 29ರ ವರೆಗೆ ಮೂರು ದಿನಗಳ ಕಾಲ ದಾಳಿ ನಡೆಸಿದರು. ಅಷ್ಟರಲ್ಲಿ ದೇಶದ ಸೇನಾ ಪಡೆಯೂ ಮುಂಬೈಗೆ ಧಾವಿಸಿ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ಮೊದಲಾಯಿತು. ಉಗ್ರರು ನಡೆಸಿದ ಈ ಆತ್ಮಾಹುತಿ ದಾಳಿಯಿಂದಾಗಿ ಸರ್ಕಾರಿ ಅಧಿಕಾರಿಗಳೂ, ಸೈನಿಕರು,ಸಾಮಾನ್ಯರು ಸೇರಿದಂತೆ ಅನೇಕರು ಪ್ರಾಣ ತೆತ್ತೆರು. ಹಲವರಿಗೆ ಗಾಯಗಳಾಗಿ ಆಸ್ಪತ್ರೆ ಸೇರಿದರು.

News First Live Kannada

Leave a comment

Your email address will not be published. Required fields are marked *