27 ದಿನಗಳ ಬಳಿಕ ಮನೆ ಸೇರಿದ ಆಸ್ಟ್ರೇಲಿಯಾ​ ಕ್ರಿಕೆಟಿಗರು

27 ದಿನಗಳ ಬಳಿಕ ಮನೆ ಸೇರಿದ ಆಸ್ಟ್ರೇಲಿಯಾ​ ಕ್ರಿಕೆಟಿಗರು

ಕೋವಿಡ್​ ಕಾರಣ 14ನೇ ಆವೃತ್ತಿಯ ಐಪಿಎಲ್​​ ಅರ್ಧಕ್ಕೆ ರದ್ದಾದ ಹಿನ್ನೆಲೆ ತವರಿಗೆ ಮರಳಿದ್ದ ಆಸಿಸ್​ ಆಟಗಾರರು, 27 ದಿನಗಳ ಬಳಿಕ ಮನೆ ಸೇರಿದ್ದಾರೆ. ಮೇ 3ರಂದು RCB ಮತ್ತು KKR​ ನಡುವಿನ ಕೊರೊನಾಗೆ ಬಲಿಯಾಗಿತ್ತು. ಬಳಿಕ SRH ಹಾಗೂ CSK​ ತಂಡದಲ್ಲೂ ಆಟಗಾರರಿಗೆ ಸೋಂಕು ಕಾಣಿಸಿಕೊಂಡಿತ್ತು. ಹೀಗಾಗಿ BCCI – IPL​ ಆಡಳಿತ ಮಂಡಳಿ ಇಡೀ ಟೂರ್ನಿಯನ್ನೇ ರದ್ದುಪಡಿಸಿ ತಾತ್ಕಾಲಿಕವಾಗಿ ಮುಂದೂಡಿತ್ತು.

IPL​ ಅಮಾನತುಗೊಂಡ ಸಂದರ್ಭದಲ್ಲಿ ಭಾರತದಲ್ಲಿ ಕೊರೊನಾ ಮಿತಿ ಮೀರುತ್ತಿದ್ದ ಕಾರಣ ಆಸ್ಟ್ರೇಲಿಯಾ ದೇಶವು, ಭಾರತದ ವಿಮಾನ ಸಂಪರ್ಕಕ್ಕೆ ತಾತ್ಕಾಲಿಕವಾಗಿ ನಿಷೇಧ ಹೇರಿತ್ತು. ಆಗ ಬಿಸಿಸಿಐ ಆಟಗಾರರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ, ಚಾರ್ಟೆಟ್​ ಫ್ಲೈಟ್​ ವ್ಯವಸ್ಥೆ ಮಾಡ್ತು. ಆಟಗಾರರು ಮಾಲ್ಡೀವ್ಸ್​​​ ಮೂಲಕ ಆಸ್ಟ್ರೇಲಿಯಾದ ತೆರಳಿ, ಅಲ್ಲಿಂದ ಸಿಡ್ನಿಗೆ ತೆರಳಿ 14 ದಿನಗಳ ಕಾಲ ಕ್ವಾರಂಟೀನ್​ಗೆ ಒಳಗಾಗಿದ್ದರು.

ಇಂದು ಕ್ವಾರಂಟೀನ್​ನಿಂದ ಬಿಡುಗಡೆಗೊಂಡಿರುವ ಆಟಗಾರರು, ತಮ್ಮ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಭಾವುಕರಾಗಿದ್ದಾರೆ. ಸ್ಟೀವ್​​ಸ್ಮಿತ್, ಡೇವಿಡ್ ವಾರ್ನರ್, ಗ್ಲೇನ್​ ಮ್ಯಾಕ್ಸ್​ವೆಲ್​, ಪ್ಯಾಟ್ ಕಮಿನ್ಸ್ ಸೇರಿದಂತೆ ಆಟಗಾರರು, ಕೋಚ್​​ಗಳು, ಅಧಿಕಾರಿಗಳು ಮತ್ತು ಕಮೆಂಟೇಟರ್ಸ್ 38 ಮಂದಿ ತಮ್ಮಗಳ ಮನೆಗೆ ತೆರಳಿದ್ದಾರೆ.

ಸದ್ಯ ಮೇ 29ರಂದು ನಡೆದ ಬಿಸಿಸಿಐನ ಮಹತ್ವದ ಸಭೆಯಲ್ಲಿ ಯುಎಇಯಲ್ಲಿ ಐಪಿಎಲ್​ ಕೂಟವನ್ನು ಮರು ಆಯೋಜನೆಗೆ ಅಂಕಿತ ಹಾಕಿದೆ. ಆದರೆ ಐಪಿಎಲ್​ ಮತ್ತೆ ಆಯೋಜನೆಯಾದರೆ ಆಸಿಸ್​ ಆಟಗಾರರು ಶ್ರೀಮಂತ ಲೀಗ್​ಗೆ ಕಾಲಿಡೋದು ಕಷ್ಟ ಎಂದು ಹೇಳಲಾಗ್ತಿದೆ.

 

 

The post 27 ದಿನಗಳ ಬಳಿಕ ಮನೆ ಸೇರಿದ ಆಸ್ಟ್ರೇಲಿಯಾ​ ಕ್ರಿಕೆಟಿಗರು appeared first on News First Kannada.

Source: newsfirstlive.com

Source link